Header Ads
Header Ads
Header Ads
Header Ads
Header Ads
Header Ads
Breaking News

ಮಂಜೇಶ್ವರ ಪ್ರೆಸ್‍ಕ್ಲಬ್ ವತಿಯಿಂದ 73ನೇ ಸ್ವಾತಂತ್ರ್ಯೋತ್ಸವ

ಮಂಜೇಶ್ವರ: ಮಂಜೇಶ್ವರ ಪ್ರೆಸ್ ಕ್ಲಬ್ ವತಿಯಿಂದ 73 ನೇ ಸ್ವಾತಂತ್ರೋತ್ಸವ ದಿನಾಚರಣೆಯನ್ನು ಬಹಳ ಸಂಭ್ರಮದಿಂದ ಆಚರಿಸಲಾಯಿತು. ಹೊಸಂಗಡಿ ಪ್ರೆಸ್‍ಕ್ಲಬ್ ಕಚೇರಿಯಲ್ಲಿ ಪ್ರೆಸ್‍ಕ್ಲಬ್ ಅಧ್ಯಕ್ಷ ರಹ್ಮಾನ್ ಉದ್ಯಾವರ ರವರು ಧ್ವಜಾರೋಹಣಗೈದರು. ಬಳಿಕ ಮಾತನಾಡಿದ ಅವರು ಇವತ್ತು ನಾವು ಆಚರಿಸುತ್ತಿರುವ ಸ್ವಾತಂತ್ರ್ಯ ದಿನಾಚರಣೆಯ ಹಿಂದೆ ನಮ್ಮ ಪೂರ್ವಜರು ಮಾಡಿರುವ ತ್ಯಾಗದ ಫಲವಿದೆ. ದೇಶಕ್ಕಾಗಿ ತ್ಯಾಗ, ಬಲಿದಾನ ಅರ್ಪಿಸಿದ ವೀರ ಸೈನಿಕರನ್ನು ಸ್ಮರಿಸುತ್ತಾ ನಮ್ಮ ದೇಶದ ಕೀರ್ತಿಯನ್ನು ಅಂತರರಾಷ್ಟ್ರ ಮಟ್ಟದಲ್ಲಿ ಹೆಚ್ಚಿಸುವ ಜವಾಬ್ದಾರಿ ಪ್ರತೀಯೊಬ್ಬ ಭಾರತೀಯನಿಗೂ ಇದೆ ಎಂದು ಹೇಳಿದರು.

ಈ ಸಂದರ್ಭ ಪ್ರೆಸ್ ಕ್ಲಬ್ ಕಾರ್ಯದರ್ಶಿ ಆರಿಫ್ ಮಚ್ಚಂಪ್ಪಾಡಿ, ಉಪಾಧ್ಯಕ್ಷ ರವೀಂದ್ರ ಪ್ರತಾಪ ನಗರ, ಜೊತೆ ಕಾರ್ಯದರ್ಶಿಗಳಾದ ಸಲಾಂ ವರ್ಕಾಡಿ, ರತನ್ ಕುಮಾರ್, ಕಾರ್ಯಕಾರಿ ಸಮಿತಿ ಸದಸ್ಯೆ ಸಾಯಿಭದ್ರಾ ರೈ, ಛಾಯಾಗ್ರಾಹಕ ದೀಪಕ್ ಸೇರಿದಂತೆ ಪತ್ರಕರ್ತ ಮಿತ್ರರು ಮತ್ತಿತರರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *