Header Ads
Header Ads
Header Ads
Breaking News

ಮಂಜೇಶ್ವರ ಪ್ರೆಸ್ ಕ್ಲಬ್‌ನಲ್ಲಿ ದೀಪಾವಳಿ ಆಚರಣೆ ಹರ್ಷಾದ್ ವರ್ಕಾಡಿ ಅವರಿಂದ ಕಾರ್ಯಕ್ರಮ ಉದ್ಘಾಟನೆ

ಮಂಜೇಶ್ವರ ಪ್ರೆಸ್ ಕ್ಲಬ್‌ನಲ್ಲಿ ಪತ್ರಕರ್ತರು ದೀಪಾವಳಿ ಹಬ್ಬವನ್ನು ಅಚರಿಸಿದರು. ಪ್ರೆಸ್‌ಕ್ಲಬ್ ಅಧ್ಯಕ್ಷ ಆರಿಫ್ ಮಚ್ಚಂಪ್ಪಾಡಿಯವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಹಿರಿಯ ಪತ್ರಕರ್ತ ಹಾಗೂ ಕಾಸರಗೋಡು ಜಿಲ್ಲಾ ಪಂ. ಸ್ಥಾಯೀ ಸಮಿತಿ ಅಧ್ಯಕ್ಷ ಹರ್ಷಾದ್ ವರ್ಕಾಡಿ ಉದ್ಘಾಟಿಸಿದರು.

ಪತ್ರಕರ್ತರಿಗೆ ಬಿಸ್ಕೆಟ್ ಸೇವಿಸುವುದು, ಕ್ಯಾಂಡಲ್ ಹೊತ್ತಿಸುವುದು, ಬೆಲೂನ್ ಊದುವುದು ಮೊದಲಾದ ರೀತಿಯ ಸ್ಪರ್ಧೆಗಳನ್ನು ಹಮ್ಮಿಕೊಳ್ಳಲಾಯಿತು. ವಿಜೇತರಿಗೆ ಪ್ರೆಸ್‌ಕ್ಲಬ್ ಕಾರ್ಯದರ್ಶಿ ರಹ್ಮಾನ್ ಉದ್ಯಾವರ ಬಹುಮನವನ್ನು ವಿತರಿಸಿದರು. ಬಳಿಕ ಲಘು ಉಪಹಾರವನ್ನು ವಿತರಿಸಲಾಯಿತು.

ಪ್ರೆಸ್‌ಕ್ಲಬ್ ಕೋಶಾಧಿಕಾರಿ ರವಿ ಪ್ರತಾಪ ನಗರ, ಸಾಯಿಭದ್ರ, ರತನ್ ಕುಮಾರ್ ಹೊಸಂಗಡಿ, ಸನಲ್ ಕುಮಾರ್, ಸಲಾಂ ವರ್ಕಾಡಿ, ಛಾಯಾಗ್ರಾಹಕ ದೀಪಕ್ ಸೇರಿದಂತೆ ಹಲವರು ಉಪಸ್ಥರಿದ್ದರು.

Related posts

Leave a Reply