Header Ads
Breaking News

ಮಂಜೇಶ್ವರ ಫಿಶಿಂಗ್ ಹಾರ್ಬರ್‌ನಲ್ಲಿ ಅವೈಜ್ಞಾನಿಕ ಕಾಮಗಾರಿಯಿಂದ ಕಾರ್ಮಿಕರಿಗೆ ಸಂಕಷ್ಟ : ಎ.ಕೆ.ಎಂ ಅಶ್ರಫ್ ಹೇಳಿಕೆ

ಮಂಜೇಶ್ವರ : ಮಂಜೇಶ್ವರ ಫಿಷಿಂಗ್ ಹಾರ್ಬರ್‌ನ ಕಾಮಗಾರಿ ಆವೈಜ್ಞಾನಿಕವಾಗಿ ನಡೆದಿದೆಯೆಂದು ಇದರ ಪರಿಣಾಮವಾಗಿ ಇಲ್ಲಿನ ಕಾರ್ಮಿಕರು ಸಂಕಷ್ಟವನ್ನು ಎದುರಿಸುವಂತಾಗಿದೆ. ಮಂಜೇಶ್ವರ ಫಿಷಿಂಗ್ ಹಾರ್ಬರ್ ತೊಝಿಲಾಲಿ ಸಂಘದ ಪದಾಧಿಕಾರಿಗಳ ಪರವಾಗಿ ಮಂಜೇಶ್ವರ ಬ್ಲಾಕ್ ಪಂಚಾಯತ್ ಅಧ್ಯಕ್ಷ ಎ ಕೆ ಎಂ ಅಶ್ರಫ್ ಸುದ್ದಿಗೋಷ್ಠಿಯಲ್ಲಿ ಆರೋಪಿಸಿದರು.

ಮಂಜೇಶ್ವರ ಪ್ರೆಸ್‌ಕ್ಲಬ್‌ನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ ಅವರು, ದೋಣಿಗಳು ಹಾದು ಹೋಗುವ ಸ್ಥಳಗಳಲ್ಲಿ ಹೊಯ್ಗೆ ರಾಶಿ ಬೀಳುವುದರಿಂದ ಮೀನುಗಾರಿಕೆಗೆ ತೆರಳಿ ಹಿಂತಿರುಗುವವರು ದಡ ಸೇರಲು ಹರಸಾಹಸ ಪಡುತ್ತಿದ್ದಾರೆ. ಕಳೆದ ಒಂದು ವಾರದೊಳಗೆ ಇಲ್ಲಿ ಎರಡು ದುರಂತಗಳು ಸಂಭವಿಸಿದೆ, ಕಾರ್ಮಿಕರು ಪವಾಡ ಸದ್ರಶ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೀನುಗಾರಿಕೆಯಿಂದ ಮಾತ್ರ ಬದುಕು ಕಟ್ಟಿಕೊಂಡಿರುವ ನೂರಾರು ಮೀನು ಕಾರ್ಮಿಕರು ಹಾರ್ಬರ್ ಕಾಮಗಾರಿ ಸರಿಯಿಲ್ಲದೆ ಭಯದಲ್ಲಿ ಬದುಕನ್ನು ಮುಂದೂಡುತ್ತಿದ್ದಾರೆ ಎಂದು ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಘದ ಉಪಾಧ್ಯಕ್ಷ ಅಬ್ದುಲ್ ರಹಿಮಾನ್ ಹಾಜಿ, ಕಾರ್ಯದರ್ಶಿ ಮೊಹಮ್ಮದ್ ಅಲೀ, ಜೊತೆ ಕಾರ್ಯದರ್ಶಿ ಅಝೀಝ್ ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *