Header Ads
Header Ads
Breaking News

ಮಂಜೇಶ್ವರ: ಬ್ರಹ್ಮ ಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆ ಹಾಗೂ 10ನೇ ವರ್ಷ ವಾರ್ಷಿಕದ “ದಶಮ ಸಂಭ್ರಮ”

ಮಂಜೇಶ್ವರ: ಬ್ರಹ್ಮ ಶ್ರೀ ನಾರಾಯಣ ಗುರು ವೇದಿಕೆ ಮತ್ತು ಬ್ರಹ್ಮ ಶ್ರೀ ನಾರಾಯಣ ಗುರು ಮಹಿಳಾ ವೇದಿಕೆ ಕಾಸರಗೊಡು ಜಿಲ್ಲಾ ಸಮಿತಿ ಇದರ ವತಿಯಿಂದ ಬ್ರಹ್ಮ ಶ್ರೀ ನಾರಾಯಣ ಗುರುಗಳ 164 ನೇ ಜನ್ಮ ದಿನಾಚರಣೆ ಹಾಗೂ 10ನೇ ವರ್ಷ ವಾರ್ಷಿಕದ “ದಶಮ ಸಂಭ್ರಮ” ಮಂಜೇಶ್ವರ ಹೊಸಂಗಡಿ ಹಿಲ್ ಸೈಡ್ ಸಭಾಂಗಣಗದಲ್ಲಿ ವಿವಿಧ ಕಾರ್ಯಕ್ರಮಗಳೊಂದಿಗೆ ಭಾರೀ ವಿಜೃಂಭಣೆಯಿಂದ ನಡೆಯಿತು.ಬ್ರಹ್ಮಶ್ರೀ ನಾರಾಯಣ ಗುರುಗಳ “ಶಿಕ್ಷಣದಿಂದ ಜಾಗೃತರಾಗಿ” “ಸಂಘಟನೆಯಿಂದ ಬಲಯುತರಾಗಿ” ಎಂಬ ಸಂದೇಶದಂತೆ ಬ್ರಹ್ಮಶ್ರೀ ನಾರಾಯಣ ಗುರು ಯುವ ವೇದಿಕೆ ಮತ್ತು ಮಹಿಳಾ ವೇದಿಕೆ ಜಿಲ್ಲೆಯಾದ್ಯಂತ ತುಂಬಾ ಸಾಮಾಜಿಕ ಸೇವೆ ಮಾಡುತ್ತಾ ಬಂದಿದ್ದು, ಬಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುತಿದ್ದು, ಕಳೆದ ಒಂಭತ್ತು ವರ್ಷಗಳಲ್ಲಿ ಹತ್ತು ಸಾವಿರಕ್ಕಿಂತಲೂ ಹೆಚ್ಚಿನ ವಿದ್ಯಾರ್ಥಿಗಳಿಗೆ ಪುಸ್ತಕ ವಿತರಣೆ ಮಾಡಿದ್ದು ಜೊತೆಗೆ ಮಕ್ಕಳ ಪ್ರತಿಭೆಯನ್ನು ಪ್ರೋತ್ಸಾಹಿಸಲು “ಚಿಣ್ಣರ ಮೇಳ” ಎಂಬ ಕಾರ್ಯಕ್ರಮ ನಡೆಸಿ ವಿವಿಧ ರೀತಿಯ ಮಾರ್ಗದರ್ಶನ, ತರಭೇತಿ ನೀಡುವುದರ ಜೊತೆಯಾಗಿ ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಶಿಕ್ಷಣದೊಂದಿಗೆ ಅವರ ಸರ್ವಾಂಗೀಣ ಅಭಿವೃದ್ದಿಗೆ ಸಹಾಯ ಮಾಡಲು ವೇದಿಕೆ ಯೋಜನೆ ಹಾಕುತ್ತಿದೆ. ಇದರಂತೆ ಈ ಸಲದ ಹತ್ತನೇ ವಾರ್ಷಕೋತ್ಸವಕ್ಕೆ ಮುನ್ನ ಹೊಸಬೆಟ್ಟುವಿನಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರದ ಭವ್ಯವಾದ ಶೋಭಾ ಯಾತ್ರೆ ನಡೆಯಿತು. ಇದರಲ್ಲಿ ನೂರರು ಮಂದಿ ಪಾಲ್ಗೊಂಡರು.ಬಳಿಕ ಧಾರ್ಮಿಕ ಮುಂದಾಳು ಹಾಗೂ ಬ್ರಹ್ಮ ಶ್ರೀ ನಾರಾಯಣ ಗುರು ಯುವ ವೇದಿಕೆ ಕಾಸರಗೋಡು ಜಿಲ್ಲಾಧ್ಯಕ್ಷರಾದ ಶ್ರೀ ಕೃಷ್ಣಾ ಶಿವಕೃಪಾ ಕುಂಜತ್ತೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಕಾಣಿಯೂರು ಮಠದ ಶ್ರೀ ಶ್ರೀ ಮಾಹಾಬಲ ಸ್ವಾಮೀಜಿ ದೀಪ ಪ್ರಜ್ವಲನೆ ನಡೆಸಿ ಗುರು ಪೂಜೆ ನಡೆಸಿ ವಿದ್ಯುಕ್ತವಾಗಿ ಉದ್ಘಾಟಿಸಿ ಆಶೀರ್ವಚನ ನೀಡಿದರು.ಬಳಿಕ ಮಾತನಾಡಿದ ಅವರು ಬ್ರಹ್ಮ ಶ್ರೀ ನಾರಾಯಣ ಗುರುಗಳು ನಮಗೆಲ್ಲಾ ಮಾರ್ಗದರ್ಶಿಯಾಗಿದ್ದಾರೆ. ಅವರ ತತ್ವವನ್ನು ಅನುಸರಿಸಿಕೊಂಡು ಸಾಗಬೇಕಾಗಿದೆ. ಇಂತಹ ಅನುಸರಣೆಯಿಂದ ನಾವು ಎಲ್ಲಿಯೂ ಎಡವಲು ಸಾಧ್ಯವಿಲ್ಲ. ಇಂತಹ ಚಟುವಟಿಕೆಯಿಂದ ಸಮಾಜದಲ್ಲಿ ಭಾರೀ ಪರಿವರ್ತನೆಯಾಗಲು ಸಾಧ್ಯವಿದೆ ಎಂದು ಹೇಳಿ ಕಾರ್ಯಕ್ರಮಕ್ಕೆ ಶುಭವನ್ನು ಹಾರೈಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಶ್ರೀ ಕೃಷ್ಣಾ ಶಿವಕೃಪಾ ಕುಂಜತ್ತೂರು ರವರು ಮಾತನಾಡಿ (ಃಥಿಣes) ಬ್ರಹ್ಮ ಶ್ರೀ ನಾರಾಯಣ ಗುರುಗಳು ಒಂದೇ ಜಾತಿ, ಒಂದೇ ಧರ್ಮ, ಒಬ್ಬನೇ ದೇವರು ಎಂದು ಮನುಕುಲ ಕುಟುಂಬಕ್ಕೆ ಸಾರಿ ವಿಶ್ವ ಮಾನವ ಸಂದೇಶವನ್ನು ಕೇರಳದಿಂದ ಪ್ರಾರಂಭ ಮಾಡಿ ದೇಶದೆಲ್ಲೆಡೆ ಹಬ್ಬಿಸಿದ ಮಹಾನ್ ಸಂತರಾಗಿದ್ದಾರೆ ಎಂದು ಅವರು ಹೇಳಿದರು. ವೇದಿಕೆಯಲ್ಲಿ ಸಂಘಟನೆಯ ಗೌರವಾಧ್ಯಕ್ಷ ಡಿ ಡಿ ಕಟ್ಟೆಮಾರ್ ಮಂಗಳೂರು, ಮುಖ್ಯ ಅತಿಥಿಗಳಾಗಿ ಮುಲ್ಕಿ ಬಿಲ್ಲವ ರಾಷ್ಟ್ರೀಯ ಮಹಾ ಮಂಡಳಿ ಅಧ್ಯಕ್ಷರಾದ ಜಯ ಸಿ ಸುವರ್ಣ, ಬ್ರಹ್ಮಬೈದರ್ಕಳ ಗರಡಿ ಕಂಕನಾಡಿ ಇದರ ಅಧ್ಯಕ್ಷರಾದ ಚಿತ್ತರಂಜನ್, ರಾಜ ಬೆಲ್ಚಪ್ಪಾಡ, ಕೆ ಟಿ ಸುವರ್ಣ, ಸುರೇಶ್ ಕೆ ಪಿ, ಸೂರಜ್, ತಿಮ್ಮಪ್ಪ ಕಾಂಜೆರ್, ಜಯಶಂಕರ ಮಂಜೇಶ್ವರ, ಮಾಧವ ಸಾಲ್ಯಾನ್, ಹರೀಶ್ ಉಳ್ಳಾಲ, ಶೀನಪ್ಪ ಪೂಜಾರಿ, ಚಂದ್ರ ಹಾಸ ಪೂಜಾರಿ ಸೇರಿದಂತೆ ಹಲವರು ಗಣ್ಯಾತಿ ಗಣ್ಯರು ಉಪಸ್ಥರಿದ್ದರು.ಬಳಿಕ ವೇದಿಕೆಯಲ್ಲಿ ದಶಮ ಸಂಭ್ರಮದ ಪ್ರಯುಕ್ತ “ದೇಯಿ” ಎಂಬ ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಲಾಯಿತು.ನಂತ್ರ ಸಂಘಟನೆಯನ್ನು ಬಾನೆತ್ತರಕ್ಕೆ ಬೆಳೆಸಲು ಪ್ರಯತ್ನ ನಡೆಸುತ್ತಿರುವ ಸಂಘಟನೆಯ ರೂವಾರಿ ಧಾರ್ಮಿಕ ಮುಂದಾಳು ಶ್ರೀ ಕೃಷ್ಣಾ ಶಿವಕೃಪಾ ಕುಂಜತ್ತೂರು ರವರಿಗೆ ಜಿಲ್ಲಾ ಸಮಿತಿಯ ವತಿಯಿಂದ “ಕರಾವಳಿ ಕಣ್ಮಣಿ” ಎಂಬ ಬಿರುದನ್ನು ನೀಡಿ ಶಾಲು ಹೊದಿಸಿ ಸ್ಮರಣಿಕೆ ನೀಡಿ ವೇದಿಕೆಯಲ್ಲಿ ಸನ್ಮಾನಿಸಲಾಯಿತು. ಬಳಿಕ ಇತರ ಹಲವು ಕ್ಷೇತ್ರಗಳಲ್ಲಿ ಸೇವೆಯನ್ನು ಸಲ್ಲಿಸಿದ ಪ್ರತಿಭಾವಂತರನ್ನು ಗುರುತಿಸಿ ವೇದಿಕೆಯಲ್ಲಿ ಇವರ ಜೊತೆಯಾಗಿ ಸನ್ಮಾನಿಸಲಾಯಿತು.

ಬಳಿಕ ಮದ್ಯಾಹ್ನ ಬೋಜನದ ವ್ಯವಸ್ಥೆಯನ್ನು ಕಲ್ಪಿಸಲಾಗಿತ್ತು. ಸಭಾ ಕಾರ್ಯಕ್ರಮದಲ್ಲಿ ಪುರುಷರು ಮಹಿಳೆಯರು ಸೇರಿದಂತೆ ಸಹಸ್ರಾರು ಮಂದಿ ಪಾಲ್ಗೊಂಡರು.

Related posts

Leave a Reply