Header Ads
Header Ads
Breaking News

ಮಂಜೇಶ್ವರ: ಭಾರೀ ಮಳೆಗೆ ಅಂಗಡಿಯೊಳಗೆ ನುಗ್ಗಿದ ನೀರು-ಹಲವೆಡೆ ಕುಸಿತ

ಮಂಜೇಶ್ವರ: ಸೋಮವಾರ ರಾತ್ರಿ ಹಾಗೂ ಮಂಗಳವಾರ ಮುಂಜಾನೆ ಎಡೆಬಿಡದೆ ನಿರಂತರವಾಗಿ ಸುರಿದ ಮಳೆಯಿಂದಾಗಿ ಮಂಜೇಶ್ವರ ಗ್ರಾ. ಪಂ. ನ ವ್ಯಾಪ್ತಿಯಲ್ಲಿರುವ ಹಲವೆಡೆ ಭಾರೀ ನಾಶ ನಷ್ಟ ಉಂಟಾದ ಬಗ್ಗೆ ವರದಿಯಾಗಿದೆ.ಮಂಜೇಶ್ವರ ಹೊಸಂಗಡಿಯ ಆನೆ ಕಲ್ಲು ಹೋಗುವ ರಸ್ತೆ ಪಕ್ಕದಲ್ಲಿರುವ ಎಂ ಎಂ ಪ್ಲಾಜಾ ಹಾಗೂ ಅಲ್ ಬರಕಾ ಕಾಂಪ್ಲೆಕ್ಸ್ ಕಟ್ಟಡದಲ್ಲಿ ಕಾರ್ಯಾಚರಿಸುತ್ತಿರುವ ಹಲವು ಅಂಗಡಿ, ಹೋಟೆಲು, ಲ್ಯಾಬೋರಾಟರಿಯೊಳಗೆಲ್ಲಾ ನೀರು ನುಗ್ಗಿ ಭಾರೀ ಹಾನಿಯುಂಟಾದೆ. ಹಮೀದ್ ರವರ ಮಾಲಕತ್ವದಲ್ಲಿರುವ ಪ್ರಿಯದರ್ಶಿನಿ ಲ್ಯಾಬೋರೇಟರಿಗೆ ನೀರು ನುಗ್ಗಿ ಎಕ್ಸ್ರೇ ಮಿಶನ್, ಜನರೇಟರ್ ಹಾಗೂ ಇನ್ನಿತರ ಬೆಲೆ ಬಾಳುವ ಸಾಮಾಗ್ರಿಗಳು ಹಾಳಾಗಿ ಸುಮಾರು ಐದು ಲಕ್ಷ ರೂ. ನಷ್ಟ ಅಂದಾಜಿಸಲಾಗಿದೆ.

ಅದೇ ರೀತಿ ಆಸಿಫ್, ಆಹ್ಮದ್ ಕುಟ್ಟಿ ಹಾಜಿ, ದಯಾನಂದ ಶೆಟ್ಟಿ, ಕಲೀಲ್ ಎಂಬವರ ಇಲಕ್ಟ್ರೋನಿಕ್ ಅಂಗಡಿ, ಚಪ್ಪಲಿ ಅಂಗಡಿ, ತರಕಾರಿ ಅಂಗಡಿಗಳು ನೀರಿನಲ್ಲಿ ಮುಳುಗಿವೆ. ಇದೇ ಕಟ್ಟಡದ ಹಿಂಬದಿಯಲ್ಲಿ ಅಶಾಸ್ತ್ರೀಯವಾಗಿ ಕಟ್ಟಡವೊಂದು ನಿರ್ಮಾಣ ಹಂತದಲ್ಲಿದ್ದು, ಇಲ್ಲಿ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಕಲ್ಪಿಸದೇ ಇರುವುದರಿಂದ ಮಳೆ ನೀರು ಅಂಗಡಿಯೊಳಗೆ ನುಗ್ಗಲು ಕಾರಣವೆಂಬುದಾಗಿ ವ್ಯಾಪಾರಿಗಳು ಹೇಳುತಿದ್ದಾರೆ.ಅದೇ ರೀತಿ ಮಂಜೇಶ್ವರ ಗ್ರಾ. ಪಂ. ನ ವ್ಯಾಪ್ತಿಯಲ್ಲಿರುವ ಚೌಕಿ ಎಂಬಲ್ಲಿ ನೀರು ಹರಿದು ಹೋಗಲು ಪರ್ಯಾಯ ವ್ಯವಸ್ಥೆ ಇಲ್ಲದೆ ಇರುವ ಕಾರಣದಿಂದಾಗಿ ರಾಘವ ಹಾಗೂ ಅಚ್ಚುತ ದೂಮಣ್ಣ ಬೆಲ್ಚಾಡ ಎಂಬವರ ಆವರಣಗೋಡೆಗಳು ಸಂಪೂರ್ಣವಾಗಿ ಕುಸಿದಿದೆ. ಮಾತ್ರವಲ್ಲದೆ ಈ ಪ್ರದೇಶದಲ್ಲಿ ನೀರು ಹರಿದು ಬಂದು ಕೃಷಿಗಳು ನಾಶಗೊಂಡಿವೆ.ಇಲ್ಲಿ ಕೂಡಾ ನೀರು ಹರಿದು ಹೋಗಲು ಚರಂಡಿಯನ್ನು ನಿರ್ಮಿಸುವಂತೆ ಊರವರು ಗ್ರಾ. ಪಂ. ನಲ್ಲಿ ಅದೆಷ್ಟೋ ಸಲ ವಿನಂತಿಸಿಕೊಂಡರೂ ಯಾವುದೇ ಕ್ರಮ ಇಲ್ಲವೆಂಬುದಾಗಿ ಊರವರು ಆರೋಪಿಸುತಿದ್ದಾರೆ.

 

Related posts

Leave a Reply