Header Ads
Breaking News

ಮಂಜೇಶ್ವರ: ಮನೆಗೆ ನುಗ್ಗಿ ನಗದು ಹಾಗೂ ಬೆಲೆಬಾಳುವ ಸಾಮಾಗ್ರಿಗಳ ಕಳವು

ಮಂಜೇಶ್ವರ: ಮನೆ ಮಂದಿ ಇಲ್ಲದ ಸಂದರ್ಭ ಮನೆಗೆ ನುಗ್ಗಿದ ಕಳ್ಳರು ನಗದು ಹಾಗೂ ಇತರ ಬೆಲೆಬಾಳುವ ಸಾಮಾಗ್ರಿಗಳನ್ನು ದೋಚಿದ ಘಟನೆ ಮಂಜೇಶ್ವರ ಠಾಣಾ ವ್ಯಾಪ್ತಿಯ ಪೈವಳಿಕೆ ಸಮೀಪದ ಕಾಯರ್‍ಕಟ್ಟೆ ಎಂಬಲ್ಲಿ ನಡೆದಿದೆ. ಮನೆ ಮಾಲಕಿ ಫೌಝಿಯಾ ಫಾತಿಮ ಎಂಬವರು ತಮ್ಮ ಸಂಬಂಧಿಕರ ಮನೆಗೆ ತೆರಳಿದ್ದ ಸಂದರ್ಭದಲ್ಲಿ ಮನೆಗೆ ನುಗ್ಗಿದ ಕಳ್ಳರು, ಕಪಾಟಿನಲ್ಲಿರಿಸಿದ್ದ 25,000 ರೂ. ನಗದು, 30ಸಾವಿರ ರೂ. ಬೆಲೆಬಾಳುವ ನಾಲ್ಕು ವಾಚ್, 8000 ರೂ. ಮೌಲ್ಯದ ಸುಗಂಧ ದ್ರವ್ಯ ಸೇರಿದಂತೆ ಇತರ ಹಲವು ಸಾಮಾಗ್ರಿಗಳನ್ನು ದೋಚಿದ್ದಾರೆ. ಮಂಜೇಶ್ವರ ಪೆÇಲೀಸರು ಸ್ಥಳಕ್ಕಾಗಮಿಸಿ ಪ್ರಾಥಮಿಕ ಮಾಹಿತಿಯನ್ನು ಕಲೆ ಹಾಕಿದ್ದಾರೆ. ಇತ್ತೀಚಿನ ದಿನಗಳಲ್ಲಿ ಈ ಪರಿಸರಗಳಲ್ಲಿ ಬೀಗ ಹಾಕಿರುವ ಮನೆಗಳನ್ನು ಕೇಂದ್ರೀಕರಿಸಿ ಕಳವು ನಡೆಯುತ್ತಿರುವುದಾಗಿ ಊರಿನ ಮಂದಿ ಆರೋಪಿಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *