Header Ads
Header Ads
Breaking News

ಮಂಜೇಶ್ವರ : ಮಾಣಿಂಜ ಭತ್ತ ಉತ್ಪಾದಕ ಸಮಿತಿಗೆ ಟ್ರಿಲ್ಲರ್ ವಿತರಣೆ

ಮಂಜೇಶ್ವರ: ಮಾಣಿಂಜ ಭತ್ತ ಉತ್ಪಾಧಕ ಸಮಿತಿಗೆ ಮಂಜೇಶ್ವರ ಗ್ರಾಮ ಪಂಚಾಯತ್‌ನ ಕೃಷಿ ಫಂಡಿನಿಂದ ಅನುಮತಿಸಲಾದ ೧ ಲಕ್ಷದ ೪೯ ಸಾವಿರ ರೂಪಾಯಿಯ ಟ್ರಿಲ್ಲರ್‌ನ್ನು ವಿತರಿಸಲಾಯಿತು.ಮಾಣಿಂಜದಲ್ಲಿ ಗ್ರಾಮ ಪಂಚಾಯತ್ ಅಭಿವೃದ್ದಿ ಸ್ಥಾಯೀ ಸಮಿತಿ ಅಧ್ಯಕ್ಷ ಮುಕ್ತಾರ್ ಎ.ರವರ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಮಂಜೇಶ್ವರ ಗ್ರಾಮ ಪಂಚಾಯತ್ ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿಯವರು ಭತ್ತ ಉತ್ಪಾದನಾ ಸಮಿತಿ ಅಧ್ಯಕ್ಷ ಅಚ್ಚಿಕುಂಞಿಯವರಿಗೆ ಟ್ರಿಲ್ಲರನ್ನು ಹಸ್ತಾಂತರಿಸಿ ಉದ್ಘಾಟಿಸಿದರು.ಈ ಸಂದರ್ಭ ಮುಸ್ತಫ ಉದ್ಯಾವರ, ಪಿ ಎಚ್ ಅಬ್ದುಲ್ ಹಮೀದ್, ಕೃಷಿ ಅಧಿಕಾರಿ ಹುಸೈನ್ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.

Related posts

Leave a Reply