Header Ads
Header Ads
Header Ads
Breaking News

ಮಂಜೇಶ್ವರ : ಮೆಕ್‌ಡಾಂ ರಸ್ತೆ ಕಾಮಗಾರಿ ನಿಂತ ಹಿನ್ನೆಲೆ, ಸ್ಥಳೀಯರ ಆಕ್ರೋಶ

ಕುಂಜತ್ತೂರಿನಿಂದ ಕರ್ನಾಟಕದ ಗಡಿ ಪ್ರದೇಶಗಳ ತನಕ ವಿವಿಧ ಭಾಗಗಳಿಗೆ ಸಂಪರ್ಕ ಕಲ್ಪಿಸಲು ಮಂಜೇಶ್ವರ ಶಾಸಕರಾಗಿದ್ದ ದಿವಂಗತ ಅಬ್ದುಲ್ ರಜಾಕ್ ರವರ ಪ್ರಯತ್ನದಿಂದ ಸುಮಾರು 205 ಕೋಟಿ ರೂ. ಮಂಜೂರುಗೊಂಡಿತು. ರಸ್ತೆ ಕಾಮಗಾರಿ ನಡೆಸಲಾಗಿತ್ತು. ಆದರೆ ಇದೀಗ ಮೆಕ್‌ಡಾಂ ರಸ್ತೆ ಕಾಮಗಾರಿ ಅರ್ಧದಲ್ಲೇ ಮೊಟಕುಗೊಂಡಿರುವುದಕ್ಕೆ ಸ್ಥಳೀಯರು ಆಕ್ರೋಶಿತಗೊಂಡಿದ್ದಾರೆ.

ಸಂಪೂರ್ಣವಾಗಿ ರಸ್ತೆಯನ್ನು ಅಗೆದಿರುವ ಕಾರಣ ಈ ಪ್ರದೇಶವು ಧೂಳಿನಿಂದ ಆವೃತವಾಗಿದೆ. ವಾಹನ ಸಂಚಾರ ಹಾಗು ಕಾಲ್ನಡಿಗೆ ಯಾತ್ರಿಕರು ಮುಖವಾಡವನ್ನು ಧರಿಸಿ ಸಂಚರಿಸಬೇಕಾದ ದುರವಸ್ಥೆ ಬಂದೊದಗಿದೆ. ಈ ರಸ್ತೆಯ ಸಮೀಪದಲ್ಲಿರುವ ವ್ಯಾಪಾರಿಗಳು ಕೂಡಾ ಇದೀಗ ಸಂಕಷ್ಟದಲ್ಲಿ ಸಿಲುಕಿದ್ದಾರೆ. ಧೂಳು ಏಳುತ್ತಿರುವ ಹಿನ್ನೆಲೆಯಲ್ಲಿ ಅಂಗಡಿ ತೆರೆದು ವ್ಯಾಪಾರ ಮಾಡಲು ಕೂಡಾ ಕಷ್ಟವಾಗುತ್ತಿದೆ ಎಂದು ವ್ಯಾಪಾರಿಗಳು ತಮ್ಮ ಅಳಲನ್ನು ತೋಡಿಕೊಂಡರು. ಸಂಬಂಧಪಟ್ಟವರು ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಲು ಇಲ್ಲವಾದಲ್ಲಿ ಸಂಬಂಧ ಪಟ್ಟ ಇಲಾಖೆಯ ಮುಂಭಾಗದಲ್ಲಿ ಉಪವಾಸ ಸತ್ಯಾಗ್ರಹ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆಯನ್ನು ನೀಡಿದರು.

Related posts

Leave a Reply

Your email address will not be published. Required fields are marked *