Header Ads
Header Ads
Breaking News

ಮಂಜೇಶ್ವರ : ರಾಷ್ಟ್ರೀಯ ಶಾಂತಿ ಸೇನಾ ದಿನಾಚರಣೆ

ಶಾಂತಿ ಸೇನಾ ಫೌಂಡೇಶನ್, ಗಾಂಧೀ ಸ್ಮ್ಮತಿ ಮತ್ತು ದರ್ಶನ ಸಮಿತಿ, ಹರಿಜನ ಸೇವಕ ಸಂಘ ಸಹಿತ ಹಲವು ಗಾಂಧೀ ಸಂಘಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಮಂಜೇಶ್ವರ ಕಲಾಸ್ಪರ್ಶಂ ಆಡಿಟೋರಿಯಂನಲ್ಲಿ ಎರಡು ದಿನಗಳ ರಾಷ್ಟ್ರೀಯ ಶಾಂತಿ ಸೇನಾ ದಿನಾಚರಣೆ ಹಾಗೂ ವಿಚಾರ ಸಂಕಿರಣಕ್ಕೆ ಚಾಲನೆ ದೊರಕಿತು.

ಮೀರತ್ ಶೋಬಿತ್ ವಿಶ್ವವಿದ್ಯಾಲಯ ಕುಲಪತಿ ಕುನ್ವರ್ ಶೇಖರ್ ವಿಜೇಂದ್ರ ದೀಪ ಬೆಳಗಿಸಿ ಕಾರ್ಯಕ್ರಮಕ್ಕೆ ವಿದ್ಯುಕ್ತ ಚಾಲನೆ ನೀಡಿದರು. ಗಾಂಧೀ ಪೀಸ್ ಮಿಶನ್ ಅಧ್ಯಕ್ಷ ಡಾ.ಎನ್.ರಾಧಾಕೃಷ್ಣನ್ ಅಧ್ಯಕ್ಷತೆ ವಹಿಸಿದರು. ಬ್ಲಾಕ್ ಪಂಚಾಯತು ಉಪಾದ್ಯಕ್ಷೆ ಮಮತಾ ದಿವಾಕರ್, ಮಾರಾರಿ ಕುಳಂ ಗಾಂಧೀ ಕೇಂದ್ರ ಅಧ್ಯಕ್ಷ ರವಿ ಪಲನ್ ತಿಂಗಳ್, ಕೇರಳ ಸೆಂಟ್ರಲ್ ಉಪಕುಲಪತಿ ಜಯಪ್ರಸಾದ್, ವಿ ರಘು, ರಮೇಶ್ ಶರ್ಮಾ, ಜೀನ್ ಲವಿನಾ ಮೊಂತೇರೋ ಸೇರಿದಂತೆ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಪಾಲ್ಗೊಂಡರು. ಬಳಿಕ ವಿವಿಧ ವಿಚಾರಗೋಷ್ಟಿ, ಚರ್ಚಾಗೋಷ್ಟಿಗಳು ನಡೆದವು. ದೇಶದ ವಿವಿಧ ಭಾಗಗಳಿಂದ ವಿದ್ಯಾರ್ಥಿಗಳು ಹಾಗೂ ಯುವಜನರು ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *