Header Ads
Header Ads
Breaking News

ಮಂಜೇಶ್ವರ : ರಾಷ್ಟ್ರೀಯ ಹೆದ್ದಾರಿಗಳಲ್ಲಿ ಧಗಧಗನೆ ಉರಿಯುತ್ತಿರುವ ಬೆಂಕಿ

ಮಂಜೇಶ್ವರ : ಇತ್ತೀಚಿನ ಕೆಲವು ದಿನಗಳಲ್ಲಿ ರಾಷ್ಟ್ರೀಯ ಹೆದ್ದಾರಿ ಬದಿಗಳಲ್ಲಿ ಒಣ ಹುಲ್ಲುಗಳಿಗೆ ಬೆಂಕಿ ಹತ್ತಿಕೊಂಡು ಹಲವು ಅನಾಹುತಗಳು ಕೂದಲೆಳೆ ಅಂತರದಲ್ಲಿ ತಪ್ಪಿ ಹೋಗುತ್ತಿವೆ.
ಕಳೆದ ಎರಡು ಮೂರು ದಿನಗಳಿಂದ ಉಪ್ಪಳ. ಮಂಜೇಶ್ವರ ತೂಮಿನಾಡು ಪ್ರದೇಶಗಳ ರಾ. ಹೆದ್ದಾರಿಗಳಲ್ಲಿ ವ್ಯಾಪಕವಾದ ಬೆಂಕಿ ಕಾಣಿಸಿಕೊಳ್ಳುತ್ತವೆ.
ಉಪ್ಪಳ ಹಿದಾಯತ್ ನಗ ಹಾಗೂ ಕೊಮ್ಮಳಂಗಳದಲ್ಲಿ ಬೆಂಕಿ ಹತ್ತಿ ಕೊಂಡು ಬೃಹತ್‌ಕಾರದ ಮರದ ಬುಡವೇ ನಾಶವಾಗಿದೆ. ಬಳಿಕ ಸ್ಥಳೀಯರ ಹಾಗೂ ಅಗ್ನಿಶಾಮಕ ದಳ ಸಿಬ್ಬಂದಿಗಳ ಹರಸಾಹಸದಿಂದ ದೊಡ್ದ ದುರಂತವೊಂದು ತಪ್ಪಿ ಹೋಗಿದೆ.
ಆದರೆ ಈ ಮರ ಈಗ ಅಪಯವನ್ನು ಆಹ್ವಾನಿಸುವ ಸ್ಥಿತಿಯಲ್ಲಿದೆ. ಬುಡ ಭಸ್ಮವಾಗಿರುವ ಹಿನ್ನೆಲೆಯಲ್ಲಿ ಈ ಆಲದ ಮರ ಮುರಿದು ಬೀಳುವ ಸಾಧ್ಯತೆ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಇಲ್ಲಿ ಅಪಾಯ ತಪ್ಪಿದ್ದಲ್ಲ. ಸಂಬಂಧಪಟ್ಟವರು ದುರಂತ ಸಂಭವಿಸುವ ಮೊದಲು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.ಸೋಮವಾರ ರಾತ್ರಿ ತೂಮಿನಾಡು ಮೆಟ್ರೋ ಫರ್ನೀಚರ ಮಳಿಗೆಯ ರಾ. ಹೆದ್ದಾರಿ ಬದಿಯಲ್ಲಿ ಬೆಂಕಿ ಹತ್ತಿ ಕೊಂಡು ತುಂಬಾ ಅಪಯಕಾರಿ ವಾತಾವರಣ ಉಂಟಾಗಿತ್ತು. ಬಳಿಕ ಅಗ್ನಿಶಾಮಕ ದಳ ಆಗಮಿಸಿ ದುರಂತವನ್ನು ತಪ್ಪಿಸಿದೆಬೀಡಿ ಸಿಗರೇಟ್ ಎಳೆದು ಅದನ್ನು ನಂದಿಸದೇ ಬಿಸಾಡುತ್ತಿರುವುದು ಇಂತಹ ಬೆಂಕಿ ಹೊತ್ತಿಕೊಳಲು ಕಾರಣವೆಂಬುದಾಗಿ ಹೇಳಲಾಗುತ್ತಿದೆ.

ಕಾನತ್ತೂರು ಬೀಟಿಯಡ್ಕ ಸರಕಾರಿ ಅರಣ್ಯಕ್ಕೆ ಬೆಂಕಿ ತಗಲಿ ಸುಮಾರು 10 ಎಕ್ರೆಯಷ್ಟು ಪ್ರದೇಶದಲ್ಲಿರುವ ಮರಗಳು ಬೆಂಕಿಗಾಹುತಿಯಾಗಿದೆ. ಕಾಸರಗೋಡು ಮತ್ತು ಕುತ್ತಿಕ್ಕೋಲ್‌ನ ಅಗ್ನಿಶಾಮಕ ದಳ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ಆರಿಸಿತು.

Related posts

Leave a Reply

Your email address will not be published. Required fields are marked *