Header Ads
Header Ads
Breaking News

ಮಂಜೇಶ್ವರ: ರಿಕ್ಷಾವನ್ನು ಬಾಡಿಗೆಗೆಂದು ಕೊಂಡೊಯ್ದು ಚಾಲಕ ಹಾಗೂ ಜೊತೆಗಿದ್ದವನಿಗೆ ಹಲ್ಲೆ

ಮಂಜೇಶ್ವರ: ಹೊಸಂಗಡಿಯ ರಿಕ್ಷಾ ನಿಲ್ದಾಣಕ್ಕೆ ಆಗಮಿಸಿದ ಇಬ್ಬರು ಅಪರಿಚಿತ ಯುವಕರು ರಿಕ್ಷಾವನ್ನು ಬಾಡಿಗೆಗೆಂದು ಗೊತ್ತು ಮಾಡಿ ನಿರ್ಜನ ಪ್ರದೇಶಕ್ಕೆ ಕೊಂಡೊಯ್ದು ಹಲ್ಲೆ ನಡೆಸಿ ಗಾಯಗೊಳಿಸಿದ ಬಗ್ಗೆ ಮಂಜೇಶ್ವರ ಠಾಣೆಯಲ್ಲಿ ದೂರು ದಾಖಲಾಗಿದೆ.ಕೋಟೆಕಾರು ನಿವಾಸಿ ಹಾಗೂ ಪ್ರಸ್ಥುತ ಮಂಜೇಶ್ವರದಲ್ಲಿ ವಾಸವಾಗಿರುವ ಹಂಝ (20), ಹಾಗೂ ಮುಹಾಸ್ ಕೊಪ್ಪಳ (21) ಎಂಬಿವರು ಹಲ್ಲೆಗೊಳಗಾದ ಯುವಕರಾಗಿದ್ದಾರೆ.ಬಾಡಿಗೆಗೆಂದು ಗೊತ್ತು ಮಾಡಿದ ಅಪರಿಚಿತ ಇಬ್ಬರು ಯುವಕರು ಕಣ್ವತೀರ್ಥದ ಗಡಿ ಪ್ರದೇಶದ ನಿರ್ಜನ ಸ್ಥಳವೊಂದಕ್ಕೆ ಕೊಂಡೊಯ್ದು, ಬಾಡಿಗೆ ಹಣವನ್ನು ಕೊಟ್ಟ ಬಳಿಕ ಅಲ್ಲಿಂದ ಮತ್ತೆ ಮೂವರು ಜೊತೆಗೂಡಿ ಐದು ಮಂದಿ ರಿಕ್ಷಾ ಚಾಲಕ ಹಾಗೂ ಜೊತೆಗಿದ್ದವನಿಗೆ ಚೆನ್ನಾಗಿ ಥಳಿಸಿ ಹಲ್ಲೆಗೈದಿರುವುದಾಗಿ ಗಾಯಾಳುಗಳು ದೂರಿದ್ದಾರೆ.ಯಾವುದೇ ಕಾರಣವನ್ನು ವಿಚಾರಿಸದೇ ಹಲ್ಲೆಗೈದಿರುವುದಾಗಿ ದೂರಲಾಗಿದೆ.ಗಾಯಾಳುವನ್ನು ಕುಂಬಳೆ ಸಹಕಾರಿ ಆಸ್ಪತ್ರೆಯಲ್ಲಿ ದಾಖಲಿಸಲಾಗಿದೆ. ಮಂಜೇಶ್ವರ ಪೊಲೀಸರು ಕೇಸು ದಾಖಲಿಸಿ ಕಂಡರೆ ಗುರುತು ಪತ್ತೆ ಹಚ್ಚಬಹುದಾದಂತಹ ಇಬ್ಬರ ವಿರುದ್ದ ಕೇಸು ದಾಖಲಿಸಿ ತನಿಖೆಗೆ ಚಾಲನೆ ನೀಡಿದ್ದಾರೆ.

Related posts

Leave a Reply