Header Ads
Header Ads
Breaking News

ಮಂಜೇಶ್ವರ ರೈಲ್ವೆ ನಿಲ್ದಾಣ ಪರಿಸರದಲ್ಲಿ ದಿನನಿತ್ಯ ಅವಘಡ : ಇನ್ನೂ ಈಡೇರದ ಸಾರ್ವಜನಿಕರ ಬೇಡಿಕೆ

ಮಂಜೇಶ್ವರ ರೈಲ್ವೆ ನಿಲ್ದಾಣ ಪರಿಸರದಲ್ಲಿ ಅಪಘಡ ಸಾವು ದಿನನಿತ್ಯ ಸಂಭವಿಸಿ ವರದಿಯಾಗುತ್ತಿದ್ದರೂ ಇದಕ್ಕೊಂದು ಪರಿಹಾರವನ್ನು ಇನ್ನು ಒದಗಿಸಿಲ್ಲ. ಸಾರ್ವಜನಿಕರ ಬೇಡಿಕೆ ಇನ್ನೂ ಈಡೇರಿಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮೌನವನ್ನು ಪಾಲಿಸುತ್ತಿರುವುದು ಸಾರ್ವಜನಿಕರಲ್ಲಿ ಆತಂಕವನ್ನು ಸೃಷ್ಟಿಸಿದೆ. ಈ ರೈಲು ನಿಲ್ದಾಣಗಳಲ್ಲಿ ಗೂಡ್ಸ್ ರೈಲುಗಳನ್ನು ಅಧಿಕ ಸಮಯ ನಿಲ್ಲಿಸಬಾರದೆಂಬ ಸಾರ್ವಜನಿಕರ ಬೇಡಿಕೆಗೆ ಅಪಘಡ ಸಂಭವಿಸಿದಾಗ ಮಾತ್ರ ಸಮ್ಮತಿಯನ್ನು ನೀಡುತ್ತಿರುವ ರೈಲ್ವೆ ಇಲಾಖೆ ಅಧಿಕಾರಿಗಳು ಬಳಿಕ ಅದನ್ನು ನಿರಾಕರಿಸುತ್ತಿರುವುದು ಜನರಲ್ಲಿ ಆಕ್ರೋಶವನ್ನು ಸೃಷ್ಟಿಸಿದೆ ಇದೀಗ ಕಳೆದ ಎರಡು ದಿನಗಳಿಂದ ಈ ರೈಲು ನಿಲ್ದಾಣದಲ್ಲಿ ಗೂಡ್ಸ್ ರೈಲನ್ನು ನಿಲ್ಲಿಸಲಾಗಿದ್ದು, ಇದರ ಅಡಿ ಭಾಗದಿಂದಲೇ ವಿದ್ಯಾರ್ಥಿಗಳ ಸಹಿತ ಹಲವಾರು ಮಂದಿ ಸಾಗುತ್ತಿರುವ ದೃಶ್ಯಗಳು ಲಭಿಸಿದೆ. ಸಂಬಂಧಪಟ್ಟವರು ಇನ್ನೂ ಗಾಢ ನಿದ್ರೆಯಿಂದ ಎಚ್ಛೆತ್ತುಕೊಳ್ಳದಿದ್ದರೆ ಅನಾಹುತ ಸಂಭವಿಸುವ ದಿನ ದೂರವಿರಲಾರದು.

Related posts

Leave a Reply

Your email address will not be published. Required fields are marked *