Header Ads
Header Ads
Breaking News

ಮಂಜೇಶ್ವರ : ವಿಭಿನ್ನ ಸಾಮಾರ್ಥ್ಯದ ಮಕ್ಕಳಿಗೆ ಉಪಕರಣ ವಿತರಣೆ

ಶಾರೀರಿಕ ಮಾನಸಿಕ ತೊಂದರೆಗೊಳಗಾದ ವಿಭಿನ್ನ ಸಾಮರ್ಥ್ಯದ ಮಕ್ಕಳಿಗೆ ಸಮಗ್ರ ಶಿಕ್ಷಾ ಕೇರಳ ಯೋಜನೆಯ ಭಾಗವಾಗಿ ಮಂಜೇಶ್ವರ ಉಪಜಿಲ್ಲಾ ವ್ಯಾಪ್ತಿಯ ಶಾಲೆಗಳ ವಿದ್ಯಾರ್ಥಿಗಳಿಗೆ ಉಚಿತವಾಗಿ ಸಹಾಯಕ ಉಪಕರಣಗಳನ್ನು ವಿತರಿಸಲಾಯಿತು.

ಕುಂಜತ್ತೂರು ಉನ್ನತ ಪ್ರೌಢ ಶಾಲೆಯ ಸಾತ್ವಿಕ ಮತ್ತು ತೃಪ್ತಿ, ಮರಿಯಾಶ್ರಮ ಶಾಲೆಯ ಸವಾದ್, ಉದ್ಯಾವರ ತೋಟ ಶಾಲೆಯ ಫಾತಿಮತ್ ಉಮ್ರ ವಾಮಂಜೂರು ಶಾಲೆಯ ಯಶಸ್ವಿನಿ, ಉಪ್ಪಳ ಪ್ರೌಢ ಶಾಲೆಯ ಭೂಮಿಕ ಮೊದಲಾದ ಮಕ್ಕಳ ಮನೆಗೆ ತೆರಳಿ ಉಪಕರಣಗಳನ್ನು ವಿತರಿಸಲಾಯಿತು.

ಮಂಜೇಶ್ವರ ಬಿ.ಆರ್.ಸಿಯ ಬಿ.ಪಿ.ಒ ವಿಜಯ ಕುಮಾರ್ ರವರ ನೇತೃತ್ವದಲ್ಲಿ ಮೂಸೋಡಿ ಶಾಲೆಯ ಮುಖ್ಯೋಪಾಧ್ಯಾಯರಾದ ಕೃಷ್ಣ ಕುಮಾರ್ ಶಿಕ್ಷಕರಾದ ಉಮೇಶ್ ಮಧೂರ್, ವಿನಾಯಕನ್, ಬಿ.ಆರ್.ಸಿ ಯ ಐ.ಇ.ಡಿ.ಸಿ ಶಿಕ್ಷಕಿಯರಾದ ಅನಿತ,ರೀಮ,ಸಜಿತ ಮೊದಲಾದವರು ಭಾಗವಹಿಸಿದರು.

Related posts

Leave a Reply