Header Ads
Header Ads
Breaking News

ಮಂಜೇಶ್ವರ ವ್ಯಾಪ್ತಿಯಲ್ಲಿ ಅನಧಿಕೃತ ಮರಳು ಸಾಗಾಟ

ಮಂಜೇಶ್ವರ: ನಿರಂತರವಾಗಿ ರಾತ್ರಿ ಸಮಯಗಳಲ್ಲಿ ನಡೆಯುತ್ತಿರುವ ಮರಳು ಸಾಗಾಟ ಪರಿಸರದವರಿಗೆ ಸಮಸ್ಯೆಯಾಗಿ ಪರಿಣಮಿಸಿವುದರ ಜೊತೆಯಾಗಿ ರಸ್ತೆಯಲ್ಲಿ ಮರಳನ್ನು ಚೆಲ್ಲಿಕೊಂಡು ವಾಹನಗಳು ಸಾಗುತ್ತಿರುವ ಹಿನ್ನೆಲೆಯಲ್ಲಿ ಕಾಂಕ್ರೀಟ್ ಹಾಗೂ ಡಾಮಾರು ರಸ್ತೆಗಳಲ್ಲಿ ನಿರಂತರವಾಗಿ ಅಪಘಾತಗಳು ಸಂಭವಿಸುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ.ಇತ್ತೀಚೆಗೆ ಲೋಕಾರ್ಪಣೆಗೊಂಡ ಮಂಜೇಶ್ವರ ಚರ್ಚ್ ಬೀಚ್ ರಸ್ತೆಯಲ್ಲಿ ಮಂಜೇಶ್ವರದ ಕಡಪ್ಪುರದಿಂದ ರಾತ್ರಿ ವೇಳೆ ಸುಮಾರು ೩೦೦ ಲೋಡ್ ಗಿಂತಲೂ ಅಧಿಕ ಅನಧಿಕೃತ ಮರಳು ಸಾಗಾಟ ನಡೆಯುತ್ತಿರುವುದಾಗಿ ಹೇಳುತ್ತಿರುವ ಸ್ಥಳೀಯರು ನಾವು ಮರಳು ಸಾಗಾಟವನ್ನು ವಿರೋಧಿಸುತ್ತಿಲ್ಲ. ಅದಕ್ಕೆ ಕಡಿವಾಣವಾಗಬೇಕಾದದ್ದು ಕಾನೂನು ಪಾಲಕರು ಅಥವಾ ಕಂದಾಯ ಅಧಿಕಾರಿಗಳು. ಆದರೆ ಅವರು ಈ ಪ್ರದೇಶದಲ್ಲಿ ಕಣ್ಣಿದ್ದೂ ಜಾಣ ಕುರುಡರಾಗಿದ್ದಾರೆ. ಅದನ್ನು ನಾವು ವಿಚಾರಿಸಲು ಹೋಗುತ್ತಿಲ್ಲ. ಆದರೆ ಮರಳನ್ನು ಚೆಲ್ಲುತ್ತಾ ವಾಹನಗಳು ಸಾಗುತ್ತಿರುವ ಹಿನ್ನೆಲೆಯಲ್ಲಿ ಮರು ದಿನ ಬೆಳಿಗ್ಗೆ ಯಾವುದಾದರೂ ಧ್ವಿ ಚಕ್ರ ಸವಾರರು ಸ್ಕಿಡ್ ಆಗಿ ಆಸ್ಪತ್ರೆಯಲ್ಲಿ ದಾಖಲಾಗುತಿದ್ದಾರೆ. ಇದನ್ನು ನಾವು ವಿರೋಧಿಸುತ್ತಿರುವುದಾಗಿ ಊರವರು ಹೇಳುತಿದ್ದಾರೆ.

ಸಮುದ್ರ ಬದಿಗಳಲ್ಲಿ ಬ್ರಹತ್ ಆಕಾರದ ಹೊಂಡಗಳು ಸೃಷ್ಟಿಯಾಗಿದ್ದು ಈ ಹಿನ್ನೆಲೆಯಲ್ಲಿ ಮುಂದಿನ ವರ್ಷಗಳಲ್ಲಿ ಅತೀ ಹೆಚ್ಚು ಕಡಲ್ಕೊರೆತಗಳು ಉಂಟಾಗಿ ಹಲವಾರು ಕುಟುಂಬಗಳು ಬೀದಿ ಪಾಲಾಗಬಹುದಾಗಿ ಸ್ಥಳೀಯರು ಹೇಳುತಿದ್ದಾರೆ.ಈ ಬಗ್ಗೆ ಸ್ಥಳೀಯರು ಹಲವಾರು ಸಲ ಮರಳು ಸಾಗಾಟದಲ್ಲಿ ವಿನಂತಿಸಿಕೊಂಡರೂ ಕಿಂಚತ್ತೂ ಲೆಕ್ಕಿಸದೇ ಮಾರ್ಗದಲ್ಲಿ ಚೆಲ್ಲುತ್ತಾ ಮರಳು ಸಾಗಾಟ ಮುಂದುವರಿಸಿರುವುದನ್ನು ಪ್ರತಿಭಟಿಸಿ ಚರ್ಚ್ ಬೀಚ್ ರಸ್ತೆ ನಿವಾಸಿಗಳು ಹೊಸಬೆಟ್ಟು ಗ್ರಾಮ ಕಚೇರಿ ಮುಂಬಾಗದಲ್ಲಿ ಪ್ರತಿಭಟನೆ ನಡೆಸಿ ಗ್ರಾಮಾಧಿಕಾರಿಗಳಿಗೆ ಮನವಿಯನ್ನು ನೀಡಿದರು.

ಇನ್ನೂ ಇದೇ ರೀತಿ ಮುಂದುವರಿದರೆ ರಾತ್ರಿ ಕಾಲದಲ್ಲಿ ನಡೆಸುವ ಅನಧಿಕೃತ ಮರಳು ಸಾಗಾಟಕ್ಕೆ ತಡೆಯೊಡ್ಡುವುದಾಗಿ ಸ್ಥಳೀಯರು ಸುದ್ದಿಗಾರರಿಗೆ ತಿಳಿಸಿದ್ದಾರೆ.ಇದೇ ರೀತಿ ಉದ್ಯಾವರ ರೈಲ್ವೇ ಗೇಟ್ ರಸ್ತೆಯಲ್ಲೂ ಮರಳನ್ನು ಚೆಲ್ಲುತ್ತಿರುವುದರಿಂದ ಅಪಘಾತ ಇಲ್ಲಿ ಕೂಡಾ ನಿತ್ಯ ದರ್ಶನವಾಗಿರುವುದಾಗಿ ಊರವರು ಹೇಳುತಿದ್ದಾರೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.

Related posts

Leave a Reply