Header Ads
Header Ads
Breaking News

ಮಂಜೇಶ್ವರ ವ್ಯಾಪ್ತಿಯಲ್ಲಿ ಚಿರತೆ ಹಾವಳಿ ಇನ್ನೂ ಎಚ್ಚೆತ್ತುಕೊಳ್ಳದ ಅರಣ್ಯ ಇಲಾಖೆ

ಮಂಜೇಶ್ವರ ವ್ಯಾಪ್ತಿಯಲ್ಲಿ ಕೆಲ ದಿನಗಳಿಂದ ಚಿರತೆ ಪ್ರತ್ಯಕ್ಷಗೊಂಡರೂ ಅರಣ್ಯ ಇಲಾಖೆಯವರು ಮಾತ್ರ ಎಚ್ಚೆತ್ತುಕೊಂಡಿಲ್ಲ. ಹಲವಾರು ಬಾರಿ ತೂಮಿನಾಡು, ಮಂಜೇಶ್ವರ ಗುಡ್ಡೆ ಮತ್ತು ಮಚ್ಚಂಪಾಡಿ ಪರಿಸರದಲ್ಲಿ ಚಿರತೆ ಹಾವಳಿ ಹೆಚ್ಚಾಗಿದೆ. ಈ ಬಗ್ಗೆ ಸಂಬಂಧ ಪಟ್ಟವರಿಗೆ ದೂರು ನೀಡಿದರೂ ಎಚ್ಚೆತ್ತುಕೊಳ್ಳದೇ ಇರುವುದು ವಿಪರ್ಯಾಸವೇ ಸರಿ.
ಇದೀಗ ಮತ್ತೆ ಚಿರತೆ ತೂಮಿನಾಡು ಸಮೀಪದ ಹಿಲ್ ಟಾಪ್ ನಗರದ ಮನೆ ಮುಂಬಾಗದಲ್ಲಿ ಕಂಡು ಬಂದಿರುವುದಾಗಿ ಸ್ಥಳೀಯ ನಿವಾಸಿ ನಾಸರ್ ಎಂಬವರು ಮಾದ್ಯಮಗಳಿಗೆ ಮಾಹಿತಿ ನೀಡಿದ್ದಾರೆ. ನಾಸರ್‌ರವರು ಚಿರತೆಯನ್ನು ಕಂಡ ದಿನವೇ, ಸಮೀಪದ ಮನೆ ಮಂದಿಗಳು ಕೂಡಾ ಚಿರತೆಯನ್ನು ಕಂಡಿರುವುದಾಗಿ ಹೇಳುತ್ತಿದ್ದಾರೆ. ಈ ಪ್ರದೇಶದಲ್ಲಿ ಚಿರತೆ ಸುತ್ತಾಡುತ್ತಿರುವುದು ಸ್ಥಳೀಯರ ಹೇಳಿಕೆಯಂತೆ ಖಚಿತವಾಗುತ್ತಿದೆ.
ಊರವರು ಅರಣ್ಯ ಇಲಾಖೆಗೆ ಈಗಾಗಲೇ ಮಾಹಿತಿಯನ್ನು ನೀಡಿದ್ದರೂ ಯಾರೂ ಇತ್ತ ಕಡೆ ಗಮನ ಹರಿಸಿಲ್ಲವೆಂಬುವುದು ಊರವರ ಆರೋಪ. ಬೆಳಿಗ್ಗೆ ೬ ಗಂಟೆಯಾದರೂ ಕತ್ತಲೇಯಿರುವ ಹಿನ್ನೆಲೆಯಲ್ಲಿ ಚಿರತೆ ಕಂಡು ಬಂದಿರುವುದಾಗಿ ಹೇಳುತ್ತಿರುವ ಪ್ರದೇಶಗಳಲ್ಲಿ ವಿದ್ಯಾರ್ಥಿಗಳು ಇದೇ ಸಮಯಕ್ಕೆ ಮದ್ರಸಕೆ ಹಾಗೂ ಗ್ರಾಮಸ್ಥರು ಕೆಲಸಕ್ಕೆ ತೆರಳುತಿದ್ದಾರೆ. ಇದು ಹೆತ್ತವರಲ್ಲಿ ಭಯದ ವಾತಾವರಣವನ್ನು ಮೂಡಿಸಿದೆ. ಈ ಕುರಿತು ಅರಣ್ಯ ಇಲಾಖಾ ಅಧಿಕಾರಿಗಳು ಎಚ್ಚೆತ್ತುಗೊಳ್ಳುವರೇ ಎಂದು ನೋಡಬೇಕಾಗಿದೆ.

Related posts

Leave a Reply