Header Ads
Header Ads
Breaking News

ಮಂಜೇಶ್ವರ ವ್ಯಾಪ್ತಿಯಲ್ಲಿ ಮಿತಿಮೀರಿದ ಮರಳು ಮಾಫಿಯಾ : ದೂರು ನೀಡಿದ್ದ ಮಹಿಳೆಯ ಮನೆ ನುಗ್ಗಿ ಹಲ್ಲೆ

ಕೊಂಡುಕೊಳಕೆ ಮತ್ತು ಕಣ್ವತೀರ್ಥ ಕಡಲಕಿನಾರೆ ಬಳಿ ಅನಧಿಕೃತ ಮರಳು ಸಾಗಾಟದ ಬಗ್ಗೆ ಮಾಧ್ಯಮಗಳಿಗೆ ಸುದ್ದಿ ಹಾಗೂ ಪೊಲೀಸರಿಗೆ ದೂರು ನೀಡಿದ್ದ ಮಹಿಳೆಯ ಮನೆ ನುಗ್ಗಿ ಮರಳು ಮಾಫಿಯಾ ತಂಡ ಹಲ್ಲೆ ನಡೆಸಿ ದರ್ಪವನ್ನು ಪ್ರದರ್ಶಿಸಿದೆ. ಫೆಲಿಕ್ಸ್ ಡಿ’ಸೋಜಾ ಅವರ ಪತ್ನಿ ರೀಟಾ ಎಂಬವರ ಮೇಲೆ ಹಲ್ಲೆ ನಡೆಸಲಾಗಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಹಲ್ಲೆ ಸಂದರ್ಭ ದುಷ್ಕರ್ಮಿಗಳು ಮನೆ ಕಿಟಕಿ ಗಾಜುಗಳನ್ನು ಒಡೆದಿದ್ದು, ಗಾಜುಗಳು ಪುಡಿಗಟ್ಟಿವೆ. ಹಲ್ಲೆ ನಡೆಸಿದ ಆರೋಪಿಗಳು ತಕ್ಷಣವೇ ಪರಾರಿಯಾಗಿದ್ದಾರೆ. ಕಿಡಿಗೇಡಿಗಳು ನಡೆಸಿದ ನಡೆಸಿದ ದುಷ್ಕೃತ್ಯದ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Related posts

Leave a Reply

Your email address will not be published. Required fields are marked *