Header Ads
Breaking News

ಮಂಜೇಶ್ವರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ಕಳಪೆ : ಸ್ಥಳೀಯ ನಾಗರಿಕರಿಂದ ಆರೋಪ ಮತ್ತು ಆಕ್ರೋಶ

ಮಂಜೇಶ್ವರ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ದುರಸ್ತಿ ಕಾರ್ಯವನ್ನು ಕೊನೆಗೂ ಕೈಗೆತ್ತಿಕೊಂಡಿದ್ದಾರೆ. ಆದರೆ ಗುತ್ತಿಗೆದಾರ ಮಾತ್ರ ಕಳಪೆ ಕಾಮಗಾರಿ ನಡೆಸಿ ಅದೇ ಹಳೆ ಚಾಳಿಯನ್ನು ಮುಂದುವರಿಸಿದ್ದಾನೆ ಎಂದು ಸ್ಥಳೀಯ ನಾಗರಿಕರು ಆರೋಪಿಸಿದ್ದಾರೆ.
ಕಾಮಗಾರಿ ನಡೆಯುತ್ತಿರುವ ಸಂದರ್ಭ ರಾ. ಹೆದ್ದಾರಿ ಇಲಾಖೆಯ ಇಂಜಿನಿಯರ್ ಸ್ಥಳದಲ್ಲಿ ಇರಬೇಕಾಗಿದ್ದರೂ ಗುತ್ತಿಗೆದಾರ ಇಂಜಿನಿಯರ್‍ನ ಜೇಬು ತುಂಬಿಸಿರುವ ಬಗ್ಗೆ ಊರವರು ಶಂಕೆ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರು ರಾ. ಹೆದ್ದಾರಿ ಇಲಾಖೆಯ ಇಂಜಿನಿಯರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ ಏನು ಚಿಂತಿಸುವುದು ಬೇಡಾ ಈ ಹೆದ್ದಾರಿ ಐದು ವರ್ಷದ ಗ್ಯಾರಂಟಿ ಇರುವುದಾಗಿ ಹೇಳಿದ್ದಾರೆ . ಆದರೆ ತಲಪಾಡಿಯಿಂದ ಇದೀಗ  ತನಕ ಹೆದ್ದಾರಿ ಕಾಮಗಾರಿ ಬಹುತೇಕ ಪೂರ್ಣಗೊಂಡಿದ್ದರೂ ಐದು ವರ್ಷದ ಗ್ಯಾರಂಟಿಯ ರಸ್ತೆಯ ಡಾಮಾರು ಎದ್ದು ಹೊಂಡ ಸೃಷ್ಟಿಯಾಗಿ ಆಗಿದೆ.

ಕಳೆದ ಹಲವಾರು ಸಮಯಗಳಿಂದ ಪ್ರತಿಭಟನೆಗಳನ್ನು ನಡೆಸಿದ ಬಳಿಕ ದುರಸ್ತಿ ಕಾಮಗಾರಿಗೆ ಸರಕಾರದ ವತಿಯಿಂದ ಹಸಿರು ನಿಶಾನೆ ದೊರಕಿದರೂ ಗುತ್ತಿಗೆದಾರನ ಕಳಪೆ ಕಾಮಗಾರಿಯಿಂದ ಕಾದು ಕುಳಿತ ಪ್ರಯಾಣಿಕರಿಗೆ ಈ ರೀತಿಯ ದುರಸ್ತಿಯಿಂದಾಗಿ ಫಲವಿಲ್ಲದಾಗಿದೆಂಬುದಾಗಿದೆ ಎಂಬ ಮಾತು ಕೇಳಿಬರುತ್ತಿದೆ.

Related posts

Leave a Reply

Your email address will not be published. Required fields are marked *