Header Ads
Breaking News

ಮಂಜೇಶ್ವರ ಶಾಸಕ ಖಮರುದ್ದೀನ್ ರಾಜೀನಾಮೆಗೆ ಆಗ್ರಹ : ಎಐವೈಎಫ್ ಮಂಜೇಶ್ವರ ಮಂಡಲ ಸಮಿತಿಯಿಂದ ಪ್ರತಿಭಟನೆ

ಜ್ಯುವೆಲ್ಲರಿ ನಿಕ್ಷೇಪದಲ್ಲಿ ವಂಚನಾ ಕೇಸನ್ನು ಎದುರಿಸುತ್ತಿರುವ ಮಂಜೇಶ್ವರ ಶಾಸಕ ಎಂ.ಸಿ. ಖಮರುದ್ದೀನ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕು, ವಂಚನೆಗೊಳಗಾದವರಿಗೆ ನ್ಯಾಯ ದೊರಕಿಸಿ ಕೊಡಬೇಕು, ಶಾಸಕರನ್ನು ಕೂಡಲೇ ಉನ್ನತ ತನಿಖೆಗೊಳಪಡಿಸಬೇಕು ಮೊದಲಾದ ಬೇಡಿಕೆಗಳನ್ನು ಮುಂದಿಟ್ಟು ಎ.ಐ.ವೈ.ಎಫ್ ಮಂಜೇಶ್ವರ ಮಂಡಲ ಸಮಿತಿಯ ನೇತೃತ್ವದಲ್ಲಿ ಪ್ರತಿಭಟನೆ ನಡೆಯಿತು. ಮಂಜೇಶ್ವರದ ಹೊಸಂಗಡಿ ಜಂಕ್ಷನಿನಲ್ಲಿ ನಡೆದ ಪ್ರತಿಭಟನೆಯನ್ನು ಸಿಪಿಐ ಮಂಜೇಶ್ವರ ಮಂಡಲ ಕಾರ್ಯದರ್ಶಿ ಉದ್ಘಾಟಿಸಿದರು. ಸಂಘಟನೆಯೆ ಮಂಜೇಶ್ವರ ಮಂಡಲಾಧ್ಯಕ್ಷ ದಯಾಕರ ಮಾಡ ಅಧ್ಯಕ್ಷತೆ ವಹಿಸಿದರು. ಮುಖಂಡರಾದ ಎಸ್ ರಾಮಚಂದ್ರ, ಶ್ರೀಧರ್ ಮಾಡ, ಸಿದ್ದೀಖ್ ಪಾಡಿ ಮೊದಲಾದವರು ಮಾತನಾಡಿದರು. ಹರೀಶ್ ಕೆ.ಆರ್. ಮನೋಹರ್ ಪುತ್ತಿಗೆ, ರಾಜ ದುರ್ಗಿಪಳ್ಳ, ಸನೀಶ್ ಮಂಜೇಶ್ವರ, ರಾಘವ ಕುಂಬ್ಳೆ ಮೊದಾಲಾದವರು ನೇತೃತ್ವ ನೀಡಿದರು.

Related posts

Leave a Reply

Your email address will not be published. Required fields are marked *