Header Ads
Header Ads
Breaking News

ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ಸ್ಟಾಫ್ ನರ್ಸ್‍ಗಳ ಕೊರತೆ: ರೋಗಿಗಳಿಗೆ ಸಮಸ್ಯೆ

 

ಮಂಜೇಶ್ವರ: ಹಲವಾರು ಮಂದಿ ಆಶ್ರಯಿಸುತ್ತಿರುವ ಮಂಜೇಶ್ವರ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ವೈದ್ಯಗಳಿದ್ದರೂ ಸ್ಟಾಫ್ ನರ್ಸ್ ಮಾತ್ರ ಒಂದೇ ಇರುವುದು ರೋಗಿಗಳಿಗೆ ಸಮಸ್ಯೆಯಾಗಿ ಪರಿಣಮಿಸಿದೆ. ಹಲವು ಸಂದರ್ಭಗಳಲ್ಲಿ ಈ ಸ್ಟಾಫ್ ನರ್ಸ್ ರಜೆಯಲ್ಲಿ ಏನಾದರೂ ತೆರಳಿದರೆ ಮತ್ತೆ ರೋಗಿಗಳ ಶುಶ್ರೂಷೆಗೆ ಯಾರೂ ಇಲ್ಲದಂತಾಗಿದೆ.

ಮಂಜೇಶ್ವರದಲ್ಲಿರುವ ಸರಕಾರಿ ಆಸ್ಪತ್ರೆಯಲ್ಲಿ ನಾಲ್ಕು ವೈದ್ಯರುಗಳು ಇದ್ದಾರೆ. ಆದರೆ ಈ ವೈದ್ಯರುಗಳ ಸೇವೆ ಬೆಳಿಗ್ಗೆ 9 ಗಂಟೆಯಿಂದ ಮಧ್ಯಾಹ್ನ ತನಕ ಮಾತ್ರ, ಆದರೆ ಈ ಆಸ್ಪತ್ರೆಯಲ್ಲಿ ಒಳರೋಗಿಗಳ ವ್ಯವಸ್ಥೆಯನ್ನು ಕಲ್ಪಿಸಿ 24 ಗಂಟೆಗಳ ಕಾಲ ಕೂಡಾ ಸೇವೆಯನ್ನು ನೀಡಬೇಕೆಂಬ ಸ್ಥಳೀಯರ ಕೂಗಿಗೆ ಈ ತನಕ ಯಾವುದೇ ಮನ್ನಣೆ ಲಭಿಸದೇ ಇರುವುದು ಇಲ್ಲಿಯ ಜನಪ್ರತಿಧಿನಿಗಳ ಹಾಗೂ ಅಧಿಕಾರಿಗಳ ಉದಾಸೀನತೆಯನ್ನು ಎತ್ತಿ ತೋರಿಸುತ್ತಿರುವುದಾಗಿ ಸ್ಥಳೀಯರು ಹೇಳುತ್ತಿದ್ದಾರೆ.

ಹೆರಿಗೆ ಮತ್ತು ಸ್ತ್ರೀ ರೋಗದ ವೈದ್ಯರುಗಳು ಇಲ್ಲಿ ಲಭ್ಯವಾಗಿದ್ದರೂ ದಾಖಲತಿ ಇಲ್ಲವಾಗಿರುವುದರಿಂದ ಅದು ಕೂಡಾ ನಿಷ್ಪ್ರಯೋಜಕವೆಂದೇ ಹೇಳಬಹುದು. ಅದೇ ರೀತಿ ಮರಣೋತ್ತರ ಪರೀಕ್ಷೆಗೆ ಉತ್ತಮವಾದ ಸೌಲಭ್ಯಗಳು ಕೂಡಾ ಇದೆ. ಮಾತ್ರವಲ್ಲದೆ ಇದರ ಸಾಮಾಗ್ರಿಗಳಿಗೆ ಬ್ಲೋಕ್ ಪಂ. ಪ್ರತ್ಯೇಕ ಫಂಡನ್ನು ಮೀಸಲಿರಿಸಿಟ್ಟಿತ್ತು. ಆದರೆ ಸಂಬಂಧಪಟ್ಟವರು ಇದಕ್ಕೊಂದು ಉತ್ಸಾಹವನ್ನು ತೋರಿಸದ ಹಿನ್ನೆಲೆಯಲ್ಲಿ ಮರಣೋತ್ತರ ಪರೀಕ್ಷೆ ಕೂಡಾ ಇಲ್ಲಿ ಕನಸಾಗಿಯೇ ಉಳಿದಿದೆ.

ಆಸ್ಪತ್ರೆಯಲ್ಲಿ ಎದುರಾಗಿರುವ ಸ್ಟಾಫ್ ನರ್ಸ್‍ಗಳ ಕೊರತೆ ನಿವಾರಿಸ ಬೇಕು. ಶಸ್ತ್ರಕ್ರಿಯಾ ಸೌಲಭ್ಯ, ಮರಣೋತ್ತರ ಪರೀಕ್ಷೆ ಸೌಕರ್ಯ ಒದಗಿಸಿಕೊಡಬೇಕು. ಬೇರೆಡೆಗೆ ಕೊಂಡೊಯ್ಯಲ್ಪಟ್ಟ ಏರ್ ಕಂಡೀಶನ್, ಜನರೇಟರ್ ಹಾಗೂ ಆಂಬ್ಯುಲೆನ್ಸ್ ಗಳನ್ನು ಕೂಡಲೇ ಹಿಂತಿರುಗಿ ತರಬೇಕು. ಹುಚ್ಚುನಾಯಿ ಕಡಿತ ಸಹಿತ ಪ್ರಮುಖ ಪ್ರತಿರೋಧ ಮದ್ದುಗಳನ್ನು ಒದಗಿಸುವಂತೆ ಕೂಡಲೇ ವ್ಯವಸ್ಥೆ ಮಾಡಬೇಕು ಇವೆಲ್ಲವೂ ಇಲ್ಲಿಯ ಪ್ರಮುಖ ಬೇಡಿಕೆಗಳಾಗಿವೆ.

Related posts

Leave a Reply