Header Ads
Header Ads
Header Ads
Breaking News

ಮಂಜೇಶ್ವರ ಸಿ‌ಎಚ್‌ಸಿ ಯಲ್ಲಿ ದಂತ ಚಿಕಿತ್ಸಾಲಯಕ್ಕೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಬ್ಲಾಕ್ ಪಂ. ನ ಅಧೀನತೆಯಲ್ಲಿ ಕಾರ್ಯಾಚರಿಸುತ್ತಿರುವ ಕಮ್ಯುನಿಟಿ ಹೆಲ್ತ್ ಸೆಂಟರಿನಲ್ಲಿ ನೂತನವಾಗಿ ಆರಂಭಿಸಲಾದ ದಂತ ಚಿಕಿತ್ಸಾಲಯಕ್ಕೆ ರಾಜ್ಯ ಕಂದಾಯ ಸಚಿವ ಇ ಚಂದ್ರ ಶೇಖರನ್ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು ಸರಕಾರ ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಿ ಎಚ್ ಸಿ ಯನ್ನು ಪ್ರೋತ್ಸಾಹಿಸುತ್ತಾ ಇದೆ. ಈ ನಿಟ್ಟಿನಲ್ಲಿ ಸರಕಾರದ ಫಂಡಿನಿಂದ ಇದೀಗ ಮಂಜೆಶ್ವರ ಸಿ ಎಚ್ ಸಿಯಲ್ಲೂ ಒಂದು ದಂತ ಚಿಕಿತ್ಸಾಲಯಕ್ಕೆ ಚಾಲನೆ ನೀಡಲಾಗಿದೆ.

ಈ ಹೆಲ್ತ್ ಸೆಂಟರಿನಲ್ಲಿ ವೈದ್ಯರ ಹಾಗೂ ಪ್ರಯೋಗಾಲಯದ ಕೊರತೆ ಎದ್ದು ಕಾಣುತ್ತಿರುವ ಹಿನ್ನೆಲೆಯಲ್ಲಿ ಅದಕ್ಕೊಂದು ಪರಿಹಾರವನ್ನು ಕಂಡು ಕೊಳ್ಳಲು ನನ್ನಿಂದಾಗುವ ಪ್ರಯತ್ನವನ್ನು ಮಾಡುವುದಾಗಿ ಅವರು ಹೇಳಿದರು. ಬ್ಲೋಕ್ ಪಂ, ಅಧ್ಯಕ್ಷ ಎ ಕೆ ಎಂ ಅಶ್ರಫ್ ಅಧ್ಯಕ್ಷತೆ ವಹಿಸಿದ ಕಾರ್ಯಕ್ರಮದಲ್ಲಿ ಮುಸ್ತಫ ಉದ್ಯಾವರ, ಎ. ಮುಕ್ತಾರ್, ಗ್ರಾ. ಪಂ. ಅಧ್ಯಕ್ಷ ಅಬ್ದುಲ್ ಅಝೀಝ್ ಹಾಜಿ, ಮಮತಾ ದಿವಾಕರ್ ಸೇರಿದಂತೆ ಹಲವಾರು ಮಂದಿ ಪಾಲ್ಗೊಂಡರು.

Related posts

Leave a Reply