Header Ads
Breaking News

ಮಂಜೇಶ್ವರ : ಸೂರ್ಯಾಘಾತಕ್ಕೆ ಸಿಲುಕಿ ನರಳುತ್ತಿದ್ದ ವ್ಯಕ್ತಿಗೆ ಚಿಕಿತ್ಸೆ

ಕರಾವಳಿಯಲ್ಲಿ ಬಿಸಿಲಿನ ಝಳ ಹೆಚ್ಚಾಗಿದೆ. ಸೂರ್ಯನ ಶಾಖದಿಂದಾಗಿ ಜನ-ಜಾನುವಾರುಗಳು ಕಂಗಾಲಾಗಿದ್ದಾರೆ. ಇದೀಗ ಮಂಜೇಶ್ವರ ವ್ಯಾಪ್ತಿಯಲ್ಲಿ ಸೂರ್ಯಾಘಾತದಿಂದ ಗಾಯಗೊಂಡು ವ್ಯಕ್ತಿಯೊಬ್ಬರು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಹೌದು, ಬಿಸಿಲಿನ ಝಳ ಜನರನ್ನು, ಜಾನುವಾರುಗಳನ್ನು ಕಂಗಾಲಾಗಿಸಿದೆ. ಮನೆಯಿಂದ ಕಾಲು ಹೊರಗಿಟ್ಟರೆ ಸಾಕು ಬಿಲಿನಿನ ಶಾಖ ನೆತ್ತಿಯನ್ನು ಸುಡುತ್ತಿದೆ. ಮಂಜೇಶ್ವರದಲ್ಲಿ ವ್ಯಕ್ತಿಯೊಬ್ಬರು ಸೂರ್ಯಾಘಾತದಿಂದ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾರೆ.

 ರಂಜಾನ್ ಹಿನ್ನೆಲೆಯಲ್ಲಿ ಉಪವಾಸದಲ್ಲಿದ್ದು, ಕೂಲಿ ಕೆಲಸಕ್ಕೆ ಹೋದ ಉದ್ಯಾವರ ಬಿ.ಎಸ್.ನಗರ ನಿವಾಸಿ ಬಾಪಂ ಕುಂಜಿ ಎಂಬವರ ಪುತ್ರ ಆಹ್ಮದ್ ಕೆ ಎಂಬವರು ಸೂರ್ಯಾಘಾತಕ್ಕೆ ಸಿಲುಕಿದ್ದಾರೆ. ಮದ್ಯಾಹ್ನದ ವೇಳೆಗೆ ಕುಂಜತ್ತೂರಿನಲ್ಲಿ ಕೂಲಿ ಕೆಲಸ ನಿರ್ವಹಿಸುತ್ತಿರುವ ಮಧ್ಯೆ ಶರೀರದಲ್ಲಿ ಗುಳ್ಳೆಗಳು ಕಂಡು ಬಂದಿದೆ. ಕೈ, ಸೊಂಟದ ಭಾಗ, ಹೊಟ್ಟೆಯ ಭಾಗಗಳಲ್ಲಿ ಸುಟ್ಟಗಾಯಗಳು ಕಂಡು ಬಂದಿದ್ದು ನೋವಿನಲ್ಲಿ ನರಳುತ್ತಿದ್ದು, ವೈದ್ಯರಲ್ಲಿಗೆ ತಪಾಸಣೆಗೆ ತೆರಳಿದ ವೇಳೆ ಸೂರ್ಯಾಘಾತವಾಗಿರುವುದು ಗಮನಕ್ಕೆ ಬಂದಿದೆ. ಇದೀಗ ವೈದ್ಯರು ಚಿಕಿತ್ಸೆ ನೀಡಿದ್ದಾರೆ.

ಕಳೆದ ಕೆಲವು ದಿನಗಳಿಂದ ಮಂಜೇಶ್ವರ ಭಾಗದಲ್ಲಿ ಸೂರ್ಯನ ತಾಪ ಹೆಚ್ಚಾಗುತ್ತಿದೆ. ಬಾವಿಯ ನೀರು ಕೂಡಾ ಬತ್ತಿ ಹೋಗುತ್ತಿದೆ. ಮಳೆ ಬಾರದೆ ಜನರು ಇನ್ನಷ್ಟು ಸಂಕಷ್ಟದಲ್ಲಿ ಸಿಲುಕಲಿದ್ದಾರೆ.

Related posts

Leave a Reply

Your email address will not be published. Required fields are marked *