Header Ads
Breaking News

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ವಿದ್ಯಾರ್ಥಿ ಮಾರ್ಕೆಟ್‌ಗೆ ಚಾಲನೆ

ಕೇರಳ ರಾಜ್ಯ ಕನ್ಸ್ಯೂಮರ್ ಫೆಡ್‌ನ ವತಿಯಿಂದ ದರ ಕಡಿತದಲ್ಲಿ ವಿದ್ಯಾರ್ಥಿಗಳಿಗೆ ಆವಶ್ಯಕವಿರುವ ಪುಸ್ತಕ, ಕೊಡೆ, ಶಾಲಾ ಬ್ಯಾಗ್‌ಗಳನ್ನು ಒದಗಿಸಿಕೊಡುವ ಸ್ಟುಡೆಂಟ್ ಮಾರ್ಕೆಟ್ ವ್ಯಾಪಾರ ಮಳಿಗೆಯನ್ನು ಬ್ಯಾಂಕ್ ಪರಿಸರದಲ್ಲಿ ಮಂಜೆಶ್ವರ ಸೇವಾ ಸಹಕಾರಿ ಬ್ಯಾಂಕ್ ನೇತೃತ್ವದಲ್ಲಿ ಚಾಲನೆ ದೊರಕಿತು.

ಶಾಲೆಯಲ್ಲಿ ದೊರಕುವ ದರಕ್ಕಿಂತ ಕಡಿಮೆ ದರದಲ್ಲಿ ವಿದ್ಯಾರ್ಥಿಗಳ ಅನುಕೂಲತೆಗಾಗಿ ಈ ಸೇವೆಯನ್ನು ಕೋ ಅಪರೇಟಿವ್ ಬ್ಯಾಂಕಿನ ನೇತೃತ್ವದಲ್ಲಿ ನೀಡಲಾಗುತ್ತದೆ. ಈಗಗಲೇ ಹಲವಾರು ಬಡ ವಿದ್ಯಾರ್ಥಿಗಳು ಇದರ ಪ್ರಯೋಜನವನ್ನು ಪಡೆದುಕೊಂಡಿದ್ದು, ಉಳಿದ ವಿದ್ಯಾರ್ಥಿಗಳು ಕೂಡಾ ಇದರ ಪ್ರಯೋಜನವನ್ನು ಪಡೆಯಬಹುದಾಗಿದೆ.

ಮಂಜೇಶ್ವರ ಸೇವಾ ಸಹಕಾರಿ ಬ್ಯಾಂಕಿನ ಪ್ರಧಾನ ಕಾರ್ಯಾಲಯದ ಪಕ್ಕದಲ್ಲೇ ಸ್ಟೂಡೆಂಟ್ ಮಾರ್ಕೆಟ್ ಮಳಿಗೆಯನ್ನು ಸುಸಜ್ಜೀಕರಿಸಲಾಗಿದೆ. ಬ್ಯಾಂಕ್ ಅಧ್ಯಕ್ಷ ಬಿವಿ ರಾಜನ್ ಉದ್ಘಾಟಿಸಿ ಪ್ರಥಮ ಮಾರಾಟವನ್ನು ವಿದ್ಯಾರ್ಥಿನಿ ರುಫೀದ್ ಎಂಡಿಗೆ ಅವರ ರಕ್ಷಕರ ಉಪಸ್ಥಿತಿಯಲ್ಲಿ ಹಸ್ತಾಂತರಿಸಿ ಚಾಲನೆ ನೀಡಿದ್ದಾರೆ.

ಸ್ಟುಡೆಂಟ್ ಮಾರ್ಕೆಟ್ ಮೂಲಕ ಏರ್ಪಡಿಸಲಾದ ಈ ದರ ಕಡಿತ ಸೌಲಭ್ಯವನ್ನು ರಕ್ಷಕರು, ಗ್ರಾಹಕರು ಉಪಯೋಗಿಸುವಂತೆ ಸಹಕಾರಿ ಬ್ಯಾಂಕ್ ಪ್ರಕಟಣೆಯಲ್ಲಿ ವಿನಂತಿಸಿಕೊಂಡಿದೆ. ಇದರ ಜೊತೆಯಾಗಿ ಬ್ಯಾಂಕಿನ ವತಿಯಿಂದ ಶಾಲೆ ಆರಂಭವಾಗುವ ಸಮಯದಲ್ಲಿ ಸರಕಾರಿ ಶಾಲೆಗಳಲ್ಲಿ ಕಲಿಯುತ್ತಿರುವ ವಿದ್ಯಾರ್ಥಿಗಳಿಗೆ ಕಲಿಕೋಪಕರಣಗಳನ್ನು ಉಚಿತವಾಗಿ ನೀಡಲು ಕೂಡಾ ಬ್ಯಾಂಕ್ ತೀರ್ಮಾನಿಸಿದೆ.
ಈ ಸಂದರ್ಭ ಬ್ಯಾಂಕ್ ಕಾರ್ಯದರ್ಶಿ ರಾಜನ್ ನಾಯರ್, ಸಿಬಂದಿಗಳಾದ ಯತಿಶ್ ಬಿ ಎಂ, ಸುಧಾಕರ ಪಕಳ, ಪ್ರದೀಪ್ ಬಡಾಜೆ, ವೇದಾವತಿ ಮೊದಲಾದವರು ಉಪಸ್ಥರಿದ್ದರು.

Related posts

Leave a Reply

Your email address will not be published. Required fields are marked *