Header Ads
Header Ads
Breaking News

ಮಂಜೇಶ್ವರ: ಹದೆಗೆಟ್ಟು ಸಂಚಾರಕ್ಕೆ ದುಸ್ತರವಾದ ಕೆದಂಬಾಡಿ ರಸ್ತೆ

ಮಂಜೇಶ್ವರ: ಪ್ರಧಾನ ಮಂತ್ರಿ ಗ್ರಾಮೀಣ ಸಡಕ್ ಯೋಜನೆಯಲ್ಲಿ ನಿರ್ಮಿಸಲಾದ ಮಂಜೇಶ್ವರ ಗೋವಿಂದ ಪೈ-ಕೆದಂಬಾಡಿ ರಸ್ತೆ ನಿರ್ಮಾಣಗೊಂಡ ತಿಂಗಳೊಳಗೆ ಸಂಪೂರ್ಣವಾಗಿ ಹದೆಗೆಟ್ಟಿದ್ದು, ಈ ರಸ್ತೆ ಅಂದಿನಿಂದಲೇ ಪ್ರತಿಭಟನೆಗಳನ್ನು ಎದುರಿಸುತ್ತಾ ಇದೆ.

ಆದರೆ ಈ ರಸ್ತೆಯನ್ನು ಪ್ರತೀ ವರ್ಷವೂ ನವೀಕರಿಸಲು ಫಂಡ್ ಮಂಜೂರಾಗುತ್ತಿದೆ. ಐದು ವರ್ಷಗಳ ಗ್ಯಾರಂಟಿ ಇರುವ ಈ ರಸ್ತೆಗೆ ಪ್ರತೀ ವರ್ಷವೂ ಹಣ ಮಂಜೂರು ಆಗುತ್ತಾ ಇದೆ. ಈ ಎಲ್ಲಾ ಹಣವನ್ನು ಗುತ್ತಿಗೆದಾರ ಪಡೆದು ಕೇವಲ ಪ್ರದರ್ಶನಗೋಸ್ಕರವಾಗಿ ಕಳಪೆ ಕಾಮಗಾರಿ ನಡೆಸಿ ಪರರಿಯಾಗುತ್ತಿರುವುದಾಗಿ ಊರವರು ಆರೋಪಿಸುತಿದ್ದಾರೆ.

ಆದರೆ ಈ ಸಲದ ಮಳೆಯಿಂದಾಗಿ ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದು ವಾಹನ ಸಂಚಾರಕ್ಕೆ ದುಸ್ತರವಾಗಿದೆ. ರಸ್ತೆ ಅವ್ಯವಸ್ಥೆಯಿಂದ ಸಂಚಾರ ಅಸ್ತವ್ಯಸ್ತವಾಗಿದ್ದು, ಪ್ರಯಾಣಿಕರು ನಿತ್ಯ ಸರ್ಕಸ್ ಮಾಡುವಂತಾಗಿದೆ.

ಅಲ್ಲಲ್ಲಿ ದೊಡ್ಡ ಹೊಂಡಗಳು ನಿರ್ಮಾಣವಾಗಿದ್ದು, ಚಾಲಕರು ಸ್ವಲ್ಪ ಎಚ್ಚರ ತಪ್ಪಿದರೂ ವಾಹನಗಳು ಬೀಳುವ ಸಾಧ್ಯತೆಗಳಿವೆ. ಇದು ಹೆಸರಿಗಷ್ಟೇ ಒಂದು ರಸ್ತೆಯಾಗಿದೆ ಹೊರತು ಕಾಮಗಾರಿ ಕಳಪೆಯಾಗಿರುವುದಾಗಿ ಊರವರು ಹೇಳುತಿದ್ದಾರೆ.ಪ್ರಧಾನ ಮಂತ್ರಿಯವರ ನಿಧಿಯಿಂದ ಲಭಿಸಿದ ಹಣವನ್ನು ದುರುಪಯೋಗ ಪಡಿಸದಂತಿದೆ. ಮಳೆ ಬಂದಾಗ ಇಡೀ ರಸ್ತೆ ಕೆಸರುಗುಂಡಿಯಾಗುತ್ತದೆ. ರಸ್ತೆ ಬದಿ ಜನರು ಸಂಚರಿಸಲೂ ಹಿಂದೆ-ಮುಂದೆ ನೋಡಬೇಕಾದ ಸ್ಥಿತಿ ಉಂಟಾಗಿದೆ.

ಈ ರಸ್ತೆಯಲ್ಲಿ ಸಂಚರಿಸುವ ಬಸ್ಸುಗಳು ಕೂಡಾ ಸೇವೆಯನ್ನು ಮೊಟಕುಗೊಳಿಸುವಂತಹ ಪರಿಸ್ಥಿತಿಗೆ ಬಂದು ತಲುಪಿದೆ. ರಸ್ತೆಯ ಬದಿಗಳು ಸಂಪೂರ್ಣವಾಗಿ ಹದೆಗೆಟ್ಟಿರುವ ಹಿನ್ನೆಲೆಯಲ್ಲಿ ಧ್ವಿಚಕ್ರ ಹಾಗೂ ತ್ರಿ ಚಕ್ರ ವಾಹನಗಳು ರಸ್ತೆಯಿಂದ ಕೆಳಗೆ ಬೀಳುವುದು ನಿತ್ಯದರ್ಶನವಾಗಿದೆ. ಸಂಬಂಧಪಟ್ಟವರು ಇತ್ತ ಕಡೆ ಗಮನ ಹರಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ

Related posts

Leave a Reply