Header Ads
Header Ads
Breaking News

ಮಂಜೇಶ್ವರ: ಹಾರ್ಬರ್‌ಗೆ ಕುಡಿಯುವ ನೀರು ಸರಬರಾಜು,ಬಾವಿ ತೋಡಲು ಬಂದವರಿಗೆ ಊರಿನವರಿಂದ ತಡೆ.

ಮಂಜೇಶ್ವರ: ಉಪ್ಪಳ ಮಂಗಲ್ಪಾಡಿ ಗ್ರಾಮ ಪಂಚಾಯತ್‌ನ ಒಂದನೇ ವಾರ್ಡು ಮುಸೋಡಿ ಹದೀಕ ರಸ್ತೆ ಬದಿಯಲ್ಲಿ ಮಂಜೇಶ್ವರದ ಹಾರ್ಬರಿನ ಕುಡಿಯುವ ನೀರಿಗಾಗಿ ಹಾಗೂ ಶುಚಿತ್ವಕ್ಕಾಗಿ ಹಾರ್ಬರ್ ನಿಂದ ಸುಮಾರು ಎರಡೂವರೆ ಕಿಲೋ ಮೀಟರ್ ಅಂತರದಲ್ಲಿ ಬಾವಿಯನ್ನು ತೋಡಲು ತೀರ್ಮಾನಿಸಿ ಕಾಮಗಾರಿಗೆ ಬಂದವರಿಗೆ ಊರವರು ತಡೆಯೊಡ್ದಿದ್ದಾರೆ.ಸುಮಾರು 400 ಕ್ಕಿಂತಲೂ ಮಿಕ್ಕ ಕುಟುಂಬಗಳು ವಾಸಿಸುತ್ತಿರುವ ಮುಸೋಡಿ ಹದೀಕದ ಕೆಲ ಭಾಗದ ಸ್ಥಳದಲ್ಲಿ ಬಾವಿಯನ್ನು ತೋಡಿದರೆ ಬೇಸಿಗೆಕಾಲದಲ್ಲಿ ಕುಡಿಯಲು ನೀರು ಸಿಗುವುದು ಕಷ್ಟಸಾಧ್ಯ. ಈ ನಿಟ್ಟಿನಲ್ಲಿ ಈ ತಗ್ಗಾದ ಪ್ರದೇಶದಲ್ಲಿ ಯಾವುದೇ ಕಾರಣಕ್ಕೂ ಬಾವಿಯನ್ನು ತೋಡಲು ಬಿಡಲಾರೆವು ಎಂಬ ಅಚಲವಾದ ನಿರ್ಧಾರದಲ್ಲಿ ಮೊದಲ ಹಂತವಾಗಿ ಕಾಮಗಾರಿಗೆ ತಡೆಯೊಡ್ದಿರುವುದಾಗಿ ಊರವರು ಹೇಳುತಿದ್ದಾರೆ.ಇದೀಗ ಈ ಪ್ರದೇಶದಲ್ಲಿ ಹಾರ್ಬರ್ ಗೆ ಬಾವಿ ತೋಡುವುದನ್ನು ಪ್ರತಿಭಟಿಸಿ ಆಕ್ಷನ್ ಕಮಿಟಿ ಕೂಡಾ ರೂಪು ಗೊಂಡಿದ್ದು, ಮುಂದಿನ ದಿನಗಳಲ್ಲಿ ಹೋರಾಟವನ್ನು ಇನ್ನಷ್ಟು ತೀವೃಗೊಳಿಸುವುದಾಗಿ ಊರವರು ಹೇಳುತಿದ್ದಾರೆ.ಈ ಬಗ್ಗೆ ಹಾರ್ಬರ್ ಅಸಿಸ್ಟಂಟ್ ಇಂಜಿನಿಯರ್ ರಾಕೇಶ್ ರವರನ್ನು ಸಂಪರ್ಕಿಸಿದಾಗ ಹಾರ್ಬರ್ ಇರುವ ಸ್ಥಳದಲ್ಲಿ ಉಪ್ಪು ನೀರು ಲಭಿಸುತ್ತಿರುವ ಹಿನ್ನೆಲೆಯಲ್ಲಿ ಸುಮಾರು ಎರಡೂವರೆ ಕಿಲೋ ಮೀಟರ್ ಅಂತರದಲ್ಲಿ ಕೇವಲ ಆರು ಫೀಟ್ ನ ಬಾವಿಯನ್ನು ನಿರ್ಮಿಸಿ ಕುಡಿಯುವ ನೀರನ್ನು ಹಾಗೂ ಶುಚಿತ್ವಕ್ಕಾಗಿ ಆ ನೀರನ್ನು ಉಪಯೋಗಿಸುವ ಉದ್ದೇಸವನ್ನಿಟ್ಟುಕೊಂಡಿದ್ದೇವೆ. ಇದೊಂದು ಪಂಚಾಯತಿನ ಪುರಂಬೋಕು ಸ್ಥಳವಾಗಿದೆ. ಇದಕ್ಕೆ ಪಂ. ನಿಂದ ನಮಗೆ ಅನುಮತಿ ಕೂಡಾ ಲಭಿಸಿದೆ. ನಾಡಿನ ಪುರೋಗತಿಗಾಗಿ ತಲೆ ಎತ್ತುತ್ತಿರುವ ಹಾರ್ಬರಿನ ಒಂದು ಭಾಗವಾಗಿದೆ ಬಾವಿ. ಅದಕ್ಕೆ ಊರವರು ವಿರೋಧವನ್ನು ವ್ಯಕ್ತಪಡಿಸುವುದು ಸರಿ ಅಲ್ಲವೆಂಬುದಾಗಿ ಅವರು ಹೇಳಿದ್ದಾರೆ.

Related posts

Leave a Reply