Header Ads
Header Ads
Breaking News

ಮಂಜೇಶ್ವರ:43 ನೇ ರಾಜ್ಯಮಟ್ಟದ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಚಾಲನೆ

ಮಂಜೇಶ್ವರ: ಮಂಜೇಶ್ವರ ಕಲಾಸ್ಪರ್ಶಂ ಆಡಿಟೋರಿಯಂನಲ್ಲಿ 43ನೇ ಕೇರಳ ರಾಜ್ಯ ಮಟ್ಟದ ಜ್ಯೂನಿಯರ್ ಕಬಡ್ಡಿ ಚಾಂಪಿಯನ್‌ಶಿಪ್‌ಗೆ ಚಾಲನೆ ನೀಡಲಾಯಿತು.

ಕಾಸರಗೋಡು ಜಿಲ್ಲಾಧಿಕಾರಿ ಸಜಿತ್ ಬಾಬುರವರು ಮಾತನಾಡಿ, ಮಂಜೇಶ್ವರದಲ್ಲಿ ಕಬಡ್ಡಿ ಅಕಾಡೆಮಿ ಸ್ಥಾಪಿಸಲು 50 ಲಕ್ಷ ರೂ. ಮಂಜೂರುಗೊಳಿಸಿ ಗ್ರಾಮೀಣ ಕ್ರೀಡೆಯಾದ ಕಬಡ್ಡಿ ಎಲ್ಲಾ ರೀತಿಯ ಸಹಕಾರವನ್ನು ನೀಡುವುದಾಗಿ ಹೇಳಿದರು.

ಗಡಿ ನಾಡ ಪ್ರದೇಶವಾದ ಮಂಜೇಶ್ವರ ಎಂಬುದು ಸಪ್ತ ಬಾಷಾ ಭೂಮಿಯಾಗಿದೆ. ಮಾತ್ರವಲ್ಲ ಕಬಡ್ಡಿ ಕ್ರೀಡೆಗೆ ಹಲವರನ್ನು ಪರಿಚಯಿಸಿದ ಕಬಡ್ಡಿಯ ತವರೂರಾಗಿದೆ ಮಂಜೇಶ್ವರ ಈ ನಿಟ್ಟಿನಲ್ಲಿ ಕಬಡ್ಡಿ ಅಕಾಡಮಿಯನ್ನು ಮಂಜೇಶ್ವರದಲ್ಲೇ ಸ್ಥಾಪಿಸಲಾಗುವುದಾಗಿ ಅವರು ಹೇಳಿದರು. ಮಾತ್ರವಲ್ಲದೆ ಕ್ರೀಡೆಯಲ್ಲಿ ಜಾತಿ, ಮತ, ರಾಜಕೀಯವನ್ನು ಮರೆತು ಕ್ರೀಡಾಮನಸ್ಸಿನಿಂದ ಆಟವಾಡುವಂತೆ ಮನವಿ ಮಾಡಿದರು.

ಎರಡು ದಿವಸಗಳ ಕಾಲ ನಡೆಯಲಿರುವ ಪಂದ್ಯಾಟದಲ್ಲಿ ರಾಜ್ಯದ 14 ಜಿಲ್ಲೆಗಳ ಕಬಡ್ಡಿ ತಂಡಗಳ ಆಟಗಾರರು ಭಾಗವಹಿಸಲಿದ್ದಾರೆ. ಮಹಿಳೆಯರ ಹಾಗೂ ಪುರುಷರ ವಿಭಾಗಳಲ್ಲಾಗಿ ಪಂದ್ಯಾಟ ನಡೆಯಲಿದೆ. ಆರಂಭದ ಪುರುಷರ ಪಂದ್ಯಾಟ ಕಾಸರಗೋಡು ಹಾಗೂ ಕೊಲ್ಲಮ್ ಜಿಲ್ಲೆಗಳ ಮಧ್ಯೆ ಆರಂಭಗೊಂಡಿತು. ಮಹಿಳೆಯರ ವಿಭಾಗದಲ್ಲಿ ಮಲಪ್ಪುರಂ ಹಾಗೂ ಕೊಲ್ಲಂ ಜಿಲ್ಲೆಗಳ ಮಧ್ಯೆ ನಡೆಯಿತು.

ಮಂಜೇಶ್ವರ ಬ್ಲೋಕ್ ಪಂ. ಅಧ್ಯಕ್ಷ ಎ ಕೆ ಎಂ ಅಶ್ರಫ್ ರವರ ಅಧ್ಯಕ್ಷತೆಯಲ್ಲಿ ನಡೆದ ಸಭಾ ಕಾರ್ಯಕ್ರಮದಲ್ಲಿ ಜಿಲ್ಲಾ ಸ್ಪೋರ್ಟ್ಸ್ ಕೌನ್ಸಿಲರ್ ಎನ್ ಎ ಸುಲೈಮಾನ್ ಮುಖ್ಯ ಅತಿಥಿಗಳಾಗಿದ್ದರು. ವೇದಿಕೆಯಲ್ಲಿ ಹಿರಿಯ ಕಬಡ್ಡಿ ಆಟಗಾರ ಬಾಸ್ಕರ ರೈ, ರಘುಶೆಟ್ಟಿ, ಸುಧೀರ್, ಹರೀಶ್ಚಂದ್ರ ಮಂಜೇಶ್ವರ, ಸುರೇಶ್ ಶೆಟ್ಟಿ, ಸುಕೇಶ್ ಭಂಡಾರಿ ಸೇರಿದಂತೆ ಹಲವು ಗಣ್ಯರು ಉಪಸ್ಥರಿದ್ದರು.

Related posts

Leave a Reply