Header Ads
Header Ads
Breaking News

ಮಂಬಯಿಯ ಬಂಟರ ಸಂಘದ ವತಿಯಿಂದ ಕನ್ನಡ ವಿಭಾಗದ ಮಕ್ಕಳಿಗೆ ಶಾಲಾ ಉಪಕರಣ, ಪರಿಕರಣೆಗಳ ವಿತರಣಾ ಕಾರ್ಯಕ್ರಮ

ಮುಂಬಯಿ,: ವಿದ್ಯೆಯು ಕಲಿತಷ್ಟು ಕಲಿಯುವಂತಹ ಕಲ್ಪವೃಕ್ಷ. ನಾವೆಲ್ಲ ಕನ್ನಡ ಭಾಷೆಯಲ್ಲಿ ಕಲಿತು ಮುಂದೆ ಬಂದವರು. ಹೆಚ್ಚಿನ ವಿದ್ಯೆ ಕಲಿಯ ಬಯಸುವ ವಿದ್ಯಾಥಿsಗಳಿಗೆ ಸಹಕರಿಸುವ ಮನೋಭಾವನೆ ಎಲ್ಲರಲ್ಲೂ ಇರಲಿ. ವಿದ್ಯೆ ಕಲಿತು ದೊಡ್ಡವರಾದಗ ತಮ್ಮ ಮಾತಾಪಿತರನ್ನು ಮರೆಯಬಾರದು ಎಂದು ಬಂಟರ ಸಂಘ ಮುಂಬಯಿ ಇದರ ಉಪಾಧ್ಯಕ್ಷ ಚಂದ್ರಹಾಸ ಕೆ.ಶೆಟ್ಟಿ ಕರೆ ನೀಡಿದ್ರು.

ಅವರು ಪೊವಾಯಿಯ ಮಂತ್ರ ಹೊಟೇಲ್‌ನ ಬ್ಯಾಂಕ್ವೆಟ್ ಹಾಲ್‌ನಲ್ಲಿ ಬಂಟರ ಸಂಘ ಮುಂಬಯಿ ಇದರ ಅಂಧೇರಿ-ಬಾಂದ್ರಾ ಪಾದೇಶಿಕ ಸಮಿತಿಯು ಪ್ರಾದೇಶಿಕ ಸಮಿತಿ ಕಾರ್ಯಾಧ್ಯಕ್ಷ ಡಾ| ಆರ್.ಕೆ ಶೆಟ್ಟಿ ಮುಂದಾಳತ್ವದಲ್ಲಿ ಮಹಾನಗರ ಪಾಲಿಕಾ ಕನ್ನಡ ವಿಭಾಗದ ಮಕ್ಕಳಿಗಾಗಿ ಶಾಲಾ ಉಪಕರಣ, ಪರಿಕರಣೆಗಳ ವಿತರಣಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಚಂದ್ರಹಾಸ ಶೆಟ್ಟಿ ಮಾತನಾಡಿದರು.ಕಾರ್ಯಕ್ರಮದಲ್ಲಿ ಮಾತೃಭೂಮಿ ಕೋ.ಅಪರೇಟಿವ್ ಕ್ರೆಡಿಟ್ ಸೊಸೈಟಿ ಕಾರ್ಯಾಧ್ಯಕ್ಷ ರತ್ನಾಕರ ಶೆಟ್ಟಿ , ಮಂತ್ರ ಹೊಟೇಲ್‌ನ ಮಾಲಕ ಅಪ್ಪಣ್ಣ ಎಂ.ಶೆಟ್ಟಿ, ಬಂಟರ ಸಂಘ ಮುಂಬಯಿ ಜೊತೆ ಕೋಶಾಧಿಕಾರಿ ಐಕಳ ಗುಣಪಾಲ್ ಶೆಟ್ಟಿ, ಸಂಘದ ಪ್ರಾದೇಶಿಕ ವಲಯಗಳ ಸಮನ್ವಯಕ ಡಾ| ಪ್ರಭಾಕರ್ ಶೆಟ್ಟಿ ಬೋಳ, ಡಾ| ಆರ್.ಕೆ ಶೆಟಿ, ಸಮಾಜ ಕಲ್ಯಾಣ ಸಮಿತಿಯ ಕಾರ್ಯಾಧ್ಯಕ್ಷ ಪ್ರಭಾಕರ ಶೆಟ್ಟಿ, ಪ್ರಾದೇಶಿಕ ಸಮಿತಿಯ ಮಹಿಳಾ ವಿಭಾಗಧ್ಯಕ್ಷೆ ವನಿತಾ ವೈ.ನೋಂಡಾ, ಉಪ ಕಾರ್ಯಾಧ್ಯಕ್ಷೆ ಡಾ| ಪೂರ್ಣಿಮಾ ಎಸ್.ಶೆಟ್ಟಿ ಮತ್ತಿತರ ಗಣ್ಯರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *