Header Ads
Header Ads
Breaking News

ಮಕ್ಕಳನ್ನು ಧೈರ್ಯವಂತರನ್ನಾಗಿ ಮಾಡುವ ಪ್ರಯತ್ನ ಆಗಬೇಕಿದೆ. ಕೊಂಡಾಣ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಅಭಿಪ್ರಾಯ.

ಉಳ್ಳಾಲ; ಮಕ್ಕಳನ್ನು ಧೈರ್ಯವಂತಹ ಮನುಷ್ಯನನ್ನಾಗಿ ಮಾಡುವಂತಹ ಪ್ರಯತ್ನ ಆಗಬೇಕಿದೆ. ಈ ಮೂಲಕ ಅವರಲ್ಲಿ ಸರಿ ದಾರಿ ಮತ್ತು ತಪ್ಪು ದಾರಿಗಳ ಜ್ಞಾನ ವೃದ್ಧಿಯಾಗಲು ಸಾಧ್ಯ ಎಂದು ಶ್ರೀ ಕ್ಷೇತ್ರ ಕೊಂಡಾಣ ಸಮಿತಿ ಅಧ್ಯಕ್ಷ ರಾಜೇಶ್ ರೈ ಕೋಟೆಕಾರ್ ಗುತ್ತು ಅಭಿಪ್ರಾಯಪಟ್ಟರು.ಅವರು ಎಸ್ಸೆಸ್ಸೆಫ್ ರಾಜ್ಯಾದಂತಹ ಹಮ್ಮಿಕೊಂಡ “ನಮ್ಮ ಮಕ್ಕಳು ನಮ್ಮವರಾಗಲು” ಎಂಬ ಧ್ಯೇಯ ವಾಕ್ಯದೊಂದಿಗೆ ಎಸ್ಸೆಸ್ಸೆಫ್ ಕೋಟೆಕಾರ್ ಸೆಕ್ಟರ್ ವತಿಯಿಂದ ಜನಜಾಗೃತಿ ಮೂಡಿಸುವ ಬೈಕ್ ರ್‍ಯಾಲಿಯ ಸಮಾರೋಪ ಹಾಗೂ ಎಸ್‌ವೈಎಸ್ ಕೆಸಿ ರೋಡು ಸೆಂಟರ್ ವತಿಯಿಂದ72ನೇ ಸ್ವಾತಂತ್ರ್ಯದ ಅಂಗವಾಗಿ ಬೀರಿ ಖಾಸಗಿ ಸಭಾಂಗಣದಲ್ಲಿ ಭಾನುವಾರ ಜರಗಿದ “ಭಾರತ ಭಾರತೀಯರದ್ದಾಗಲಿ” ಪ್ರಜಾ ಸಂಗಮ ಕಾರ್ಯಕ್ರಮದಲ್ಲಿ ಸಂದೇಶ ಭಾಷಣ ಮಾಡಿದರು.

ಎಸ್‌ವೈಎಸ್ ರಾಜ್ಯ ಪ್ರ.ಕಾರ್ಯದರ್ಶಿ ಎಮ್ಮೆಸ್ಸೆಂ ಅಬ್ದುರ್ರಶೀದ್ ಝೈನಿ ಕಾಮಿಲ್ ಮಾತನಾಡಿ ದೇಶದಲ್ಲಿ ಸಹಸ್ರ ವರ್ಷಗಳಿಂದ ಪಾಲಿಸುತ್ತಿರುವ ಸಿದ್ಧಾಂತವಿದೆ. ಆದರೆ ಸದ್ಯ ಗುಂಪುಗಳಾಗಿ ವೈವಿದ್ಯತೆಯಲ್ಲಿ ಏಕತೆಯನ್ನು ಮರೆಯುವಂತಹ ಪ್ರಯತ್ನಗಳು ವಿವಿಧ ಶಕ್ತಿಗಳಿಂದ ಆಗುತ್ತಿದೆ ಎಂದರು.ಮುಖ್ಯ ಅತಿಥಿಯಾಗಿ ಅಲೋಶಿಯಸ್ ಕಾಲೇಜಿನ ನಿರ್ದೇಶಕ ಫಾದರ್ ಡೆನ್ಝಿಲ್ ಲೋಬೋ, ತಲಪಾಡಿ ಗ್ರಾ.ಪಂ ಅಧ್ಯಕ್ಷ ಸುರೇಸ್ ಅಳ್ವ, ತಾ.ಪಂ ಸದಸ್ಯ ಮೊದೀನ್ ಬಾವ, ಎಸ್‌ವೈಎಸ್ ಮಂಗಳೂರು ವಲಯಧ್ಯಕ್ಷ ಮುಹಮ್ಮದಾಲಿ ಸಖಾಫಿ ಸುರಿಬೈಲ್ ಉಪಸ್ಥಿತರಿದ್ದರು.

Related posts

Leave a Reply