Header Ads
Header Ads
Header Ads
Breaking News

ಮಕ್ಕಳಿಗಾಗಿ ಮ್ಯಾಜಿಕಲ್ ನವಂಬರ್ ಹಕುನ ಮಠಾಠ ಕ್ಲಬ್‌ನಿಂದ ಆಯೋಜನೆ ಭಾರತ್ ಮಾಲ್‌ನಲ್ಲಿ ಮಕ್ಕಳಿಗೆ ಗೇಮ್ಸ್ ಮತ್ತು ಮ್ಯಾಜಿಕಲ್ ಫನ್

 

ಮಂಗಳೂರಿನಲ್ಲಿರುವ ಭಾರತ್ ಮಾಲ್‌ನಲ್ಲಿ ಹಕುನ ಮಠಾಠ ಕ್ಲಬ್ ವತಿಯಿಂದ ಮಕ್ಕಳಿಗೆ ಮ್ಯಾಜಿಕಲ್ ನವಂಬರ್ ಎನ್ನುವ ವಿನೂತನ ಕಾರ್ಯಕ್ರಮವೊಂದನ್ನು ಹಮ್ಮಿಕೊಂಡರು.

ಇತ್ತೀಚಿನ ದಿನಗಳಲ್ಲಿ ಮಕ್ಕಳಿಗೆ ಮೊಬೈಲ್, ಟಿ.ವಿ ಕಂಪ್ಯೂಟರ್ ಮುಂದೆ ಕುಳಿತು ಕಾಲಹರಣ ಮಾಡುವ ಮಕ್ಕಳಿಗಾಗಿ ಮ್ಯಾಜಿಕಲ್ ನವಂಬರ್ ಎನ್ನುವ ಕಾರ್ಯಕ್ರಮವನ್ನು ಹಕುನಾ ಮಠಾಠ ಕ್ಲಬ್‌ನವರು ಆಯೋಜಿಸಿದ್ದಾರೆ. ಇದರಲ್ಲಿ ಮಕ್ಕಳಿಗಾಗಿ ಮ್ಯಾಜಿಕ್ ಶೋ, ಸಯನ್ಸ್ ಇಲ್ಯೂಷನ್, ಬಬಲ್ ಶೋ, ಗೇಮ್ಸ್ ಮತ್ತು ಮ್ಯಾಜಿಕಲ್ ಫನ್‌ನಂತಹ ಕಾರ್ಯಚಟುವಟಿಕೆಗಳನ್ನು ನಡೆಸಲಾಗಿತ್ತು. ಮಕ್ಕಳಂತೂ ಬಹಳ ಉತ್ಸುಕರಾಗಿ ಈ ಗೇಮ್‌ನಲ್ಲಿ ಪಾಲ್ಗೊಂಡರು

ಈ ಬಗ್ಗೆ ಹಕುನ ಮಠಾಠದ ಸ್ಥಾಪಕರಾದ ಅಂಜನ ಅಮರ್ ಕಾಮತ್ ಮಾಹಿತಿ ನೀಡಿ. ಬಿಜೈ ಕಾಪಿಕಾಡ್ ಸಮೀಪ ಮಕ್ಕಳಿಗಾಗಿ ಈ ಕ್ಲಬ್‌ನ್ನು ಸ್ಥಾಪಿಸಲಾಗಿದೆ ಎಂದರು.

ಅನಂತರ ವಿನಾಯಕ್ ಆಚಾರ್ಯ ಮಾತನಾಡಿ, 2015 ರಲ್ಲಿ ಈ ಕ್ಲಬ್ ಸ್ಥಾಪನೆಯಾಗಿದ್ದು. ಅನೇಕ ಕಾರ್ಯಕ್ರಮಗಳನ್ನು ಮಾಡುತ್ತಿದ್ದಾರೆ.ತಿಂಗಳಿಗೊಮ್ಮೆ ಮಕ್ಕಳಿಗಾಗಿ ಕಾರ್ಯ ಚಟುವಟಿಕೆ ನಡೆಯುತ್ತಿದ್ದು ಇದರಿಂದ ಕಲಿಯುವ ಮಕ್ಕಳಿಗೆ ತುಂಬಾ ಸಹಕಾರಿ ಎಂದು ಹೇಳಿದರು.

ಈ ಸಂದರ್ಭ ಭಾರತ್ ಮಾಲ್‌ನ ಮೇನೇಜರ್ ರಚನ್ ರಾಜ್, ಗೌರಿ ಸುಹಾಸ್ ರಾವ್, ನೇಹಾ, ವಂದಿತಾ ಪೈ, ಗ್ಲೋರಿಯಾ ವೇಗಸ್, ದೀಕ್ಷಾ ಶೆಣೈ, ಇಂದುಮತಿ, ಶ್ರೀಜಾ ಉಪಸ್ಥಿತರಿದ್ದರು.

Related posts

Leave a Reply