Header Ads
Header Ads
Header Ads
Breaking News

ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮ ಕುಂದಾಪುರ ಠಾಣೆಯಲ್ಲಿ ಮಾಹಿತಿ ಕಾರ್ಯಕ್ರಮ

ಪೊಲೀಸ್ ಇಲಾಖೆ ಮೇಲಿರುವ ಅನುಮಾನ ಮತ್ತು ಪೊಲೀಸ್ ಇಲಾಖೆಯನ್ನ ಜನಸ್ನೇಹಿಯನ್ನಾಗಿಸುವ ಪ್ರಯತ್ನಕ್ಕೆ ಹೊರಟಿರುವ ಸರ್ಕಾರ ಮಕ್ಕಳಿಗೆ ತೆರದ ಮನೆ ಕಾರ್ಯಕ್ರಮದ ಮೂಲಕ ಪೊಲೀಸ್ ಇಲಾಖೆ ಕುರಿತು ಕುಂದಾಪುರ ಠಾಣೆಯಲ್ಲಿ ಮಾಹಿತಿ ನೀಡಲಾಯಿತು.

ಕಾರ್ಯಕ್ರಮ ಆರಂಭಕ್ಕೂ ಮುನ್ನ ವಿದ್ಯಾರ್ಥಿಗಳಿಗೆ ಪೊಲೀಸ್ ಇಲಾಖೆಯ ಶಸ್ತ್ರಾಸ್ತ್ರಗಳು ಮತ್ತು ಇಲಾಖೆಯ ಕುರಿತು ಮಾಹಿತಿ ಪಡೆದ ವಿದ್ಯಾರ್ಥಿಗಳು ಇಲಾಖೆ ಸಿಬ್ಬಂದಿಗಳೊಂದಿಗೆ ಮುಕ್ತವಾಗಿ ಶಸ್ತ್ರಾಸ್ತ್ರಗಳು ಮತ್ತು ಅದನ್ನ ಬಳಸುವ ಬಗೆಯ ಕುರಿತು ಚರ್ಚಿಸಿದರು. ಮತ್ತು ಅದನ್ನ ಮುಟ್ಟಿ ಹೇಗಿದೆ ಎಂದು ತಿಳಿದುಕೊಂಡರು.

ನಂತರ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ಎಸ್‌ಐ ಹರೀಶ್ , ಮಕ್ಕಳು ಕೇವಲ ಪಠ್ಯಪುಸ್ತಕದ ಜ್ಞಾನವನ್ನೇ ತಿಳಕೊಳ್ಳದೆ, ಸಮಾಜದಲ್ಲಿ ಜೀವನ ಮಾಡಲು ಬೇಕಾದ ಜ್ಞಾನವನ್ನು ತಿಳಕೊಳ್ಳಬೇಕು. ವಿದ್ಯಾರ್ಥಿಗಳು ತಮ್ಮಲ್ಲಿರುವ ಅನುಮಾನಗಳನ್ನು ಇಂತಹ ಕಾರ್‍ಯಕ್ರಮಗಳ ಮೂಲಕ ನಿವಾರಿಸಿಕೊಳ್ಳಬೇಕು ಎಂದು ಹೇಳಿದರು.

Related posts

Leave a Reply