Header Ads
Header Ads
Breaking News

ಮಕ್ಕಳು ಸಾಧನೆ ಮಾಡಲು ಸೂರಜ್ ಸಂಸ್ಥೆ ಶ್ರಮಿಸುತ್ತಿದೆ :ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯ

ಮಕ್ಕಳು ಸಾಧನೆ ಮಾಡಬೇಕಾದರೆ ಕುತೂಹಲ ಮೂಡಿಸುವ ಕಾರ್ಯ ಮಾಡಬೇಕು. ಈ ನಿಟ್ಟಿನಲ್ಲಿ ಸೂರಜ್ ಶಿಕ್ಷಣ ಸಂಸ್ಥೆ ಸೂರಜ್ ಕಲಾಸಿರಿಯ ಮೂಲಕ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು ಧರ್ಮಾಧಿಕಾರಿ ಡಾ| ಡಿ. ವೀರೇಂದ್ರ ಹೆಗ್ಗಡೆ ಅಭಿಪ್ರಾಯಪಟ್ಟರು.ಮುಡಿಪುವಿನ ಸೂರಜ್ ಶಿಕ್ಷಣ ಸಂಸ್ಥೆಯ ಆಶ್ರಯದಲ್ಲಿ ಸೂರಜ್ ಪ.ಪೂ. ಕಾಲೇಜಿನ ಸಭಾಂಗಣದಲ್ಲಿ ಮೂರು ದಿನಗಳ ಸೂರಜ್ ಕಲಾಸಿರಿ-2018ನ್ನು ಶುಕ್ರವಾರ ಉದ್ಘಾಟಿಸಿ ಹಾಗೂ ವಿವಿಧ ಕ್ಷೇತ್ರದ ಸಾಧಕರಿಗೆ ಸೂರಜ್ ಸೇವಾ ಪ್ರಶಸ್ತಿ ಪ್ರದಾನಗೈದು ಅವರು ಮಾತನಾಡಿದರು.

ನಿವೃತ್ತ ಲೋಕಾಯುಕ್ತ, ನ್ಯಾಯಮೂರ್ತಿ ಎನ್. ಸಂತೋಷ್ ಹೆಗ್ಡೆ ಅವರು ಸನ್ಮಾನ ಸ್ವೀಕರಿಸಿ ಮಾತನಾಡಿದರು. ಸೂರಜ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ| ಮಂಜುನಾಥ ಎಸ್. ರೇವಣ್ಕರ್ ಹಾಗೂ ಹೇಮಲತಾ ಎಂ. ರೇವಣ್ಕರ್ ರೋಟರಿ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ ಈ ಹಿಂದೆ ಪ್ರದಾನಿಸಲಾದ ರೋಟೇರಿಯನ್ ಪಿಎಚ್‌ಎಫ್‌ನ್ನು ಹೆಗ್ಗಡೆ ಅವರು ಕಾರ್ಯಕ್ರಮದಲ್ಲಿ ಪ್ರದಾನ ಮಾಡಿದರು.ಯಕ್ಷಗಾನ ಕಲಾವಿದ ಸೂರಿಕುಮೇರು ಗೋವಿಂದ ಭಟ್ಟ ಸಮ್ಮೇಳನದ ಸರ್ವಾಧ್ಯಕ್ಷತೆ ವಹಿಸಿದ್ದರು. ಸಚಿವ ಯು.ಟಿ. ಖಾದರ್, ಮುಡಿಪು ಸಂತ ಜೋಸೆಫ್ ವಾಜ್‌ನ ಧರ್ಮಗುರು ಬೆಂಜಮಿನ್ ಪಿಂಟೊ, ಧರ್ಮದರ್ಶಿ ಹರಿಕೃಷ್ಣ ಪುನರೂರು, ಇನ್ಫೋಸಿಸ್‌ನ ಎಚ್‌ಆರ್ ಅಧಿಕಾರಿ ವಾಸುದೇವ ಕಾಮತ್, ಶಿಕ್ಷಣ ಸಂಸ್ಥೆಯ ಹೇಮಲತಾ ಎಂ. ರೇವಣಖರ್, ಸೂರಜ್ ಎಂ. ರೇವಣಖರ್ ಹಾಗೂ ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು

Related posts

Leave a Reply