Header Ads
Header Ads
Breaking News

ಮಕ್ಕಳ ಕಳ್ಳನೆಂದು ತಪ್ಪು ಗ್ರಹಿಸಿ ಥಳಿತ. ಕೈಕಂಬದಲ್ಲಿ ಹಲ್ಲೆಗೈದ ಯುವಕರ ಗುಂಪು. ಮಂಗಳೂರಿಲ್ಲಿ ನಡೆದ ಅಮಾನವೀಯ ಘಟನೆ.

ಮಂಗಳೂರಿನಲ್ಲಿ ಅಮಾನವೀಯ ಘಟನೆಯೊಂದು ನಡೆದಿದೆ. ಮಕ್ಕಳ ಕಳ್ಳನೆಂದು ತಪ್ಪು ಗ್ರಹಿಸಿ ವ್ಯಕ್ತಿಯೊಬ್ಬರಿಗೆ ಗುಂಪೊಂದು ಕಂಬಕ್ಕೆ ಕಟ್ಟಿ ಹಾಕಿ ಹಲ್ಲೆಗೈದಿದೆ. ಕಾಟಿಪಳ್ಳದ ಹಂಝ ಅವರಿಗೆ ಗುಂಪು ಕಟ್ಟಿ ಹಾಕಿ ಹಲ್ಲೆಗೈದಿದೆ. ಹಂಝ ಅವರು ಸಾಲದ ವಿಚಾರದಲ್ಲಿ ಕೈಕಂಬಕ್ಕೆ ತೆರಳಿದ್ದರು. ಅಲ್ಲಿ ವಾಹನ ನಿಲ್ಲಿಸಿದ್ದ ಸಂದರ್ಭದಲ್ಲಿ ಆಟವಾಡುತ್ತಿದ್ದ ಮಕ್ಕಳಿಗೆ ತಮ್ಮ ಕಿಸೆಯಲ್ಲಿದ್ದ ಚಾಕಲೆಟ್ ನೀಡಿದ್ದರು. ಇದನ್ನು ನೋಡಿದ ಗುಂಪೊಂದು ಹಂಝ ಅವರು ಮಕ್ಕಳ ಕಳ್ಳರೆಂದು ಹಿಡದು ಕಂಬಕ್ಕೆ ಕಟ್ಟಿ ಹಾಕಿ ಥಳಿಸಿದ್ದಾರೆ. ಈ ಸಂದರ್ಭದಲ್ಲಿ ಹಂಝ ಅವರೊಂದಿಗೆ ಬಂದಿದ್ದ ಮತ್ತೊಬ್ಬರು ಪರಾರಿಯಾಗಿದ್ದಾರೆ. ಗುಂಪಿನಿಂದ ತೀವರ ಥಳಿತಕ್ಕೊಳಗಾದ ಹಂಝ ಅವರು ಬಜ್ಪೆ ಠಾಣೆಯಲ್ಲಿ ದೂರು ನೀಡಿದ್ದಾರೆ.

Related posts

Leave a Reply