Header Ads
Breaking News

ಮಕ್ಕಳ ಕೇರ್ ಸೆಂಟರ್‍ಗಳ ಬಣ್ಣ ಬಯಲು : 20 ಪ್ರಕರಣಗಳು ಬೆಳಕಿಗೆ

ಮಂಗಳೂರು ಪೊಲೀಸರ ರಹಸ್ಯ ಕಾರ್ಯಾಚರಣೆಯೊಂದರಲ್ಲಿ ಮಕ್ಕಳ ಕೇರ್ ಸೆಂಟರ್‍ಗಳ ಬಣ್ಣ ಬಯಲಾಗಿದೆ.

ನಗರದ ಆರು ಸಂಸ್ಥೆಗಳಿಂದ 20 ಪ್ರಕರಣಗಳು ಬೆಳಕಿಗೆ ಬಂದಿದೆ. ಪೊಲೀಸ್ ಕಮಿಷನರ್ ಶಶಿಕುಮಾರ್ ಮತ್ತು ಡಿಸಿಪಿ ಹರಿರಾಂ ಶಂಕರ್ ನಡೆಸಿರುವ ರಹಸ್ಯ ಕಾರ್ಯಾಚರಣೆಯಲ್ಲಿ ಉಳ್ಳಾಲದ ಕುಂಪಲದಲ್ಲಿರುವ ನೂರಾನಿ ಯತೀಂಖಾನದಲ್ಲಿ ಮೇಲ್ವಿಚಾರಕನಾಗಿದ್ದ ಉಸ್ತಾದ್ ಸಿಕ್ಕಿಬಿದ್ದಿದ್ದಾನೆ. ಪ್ರಕರಣಕ್ಕೆ ಸಂಬಂಧಿಸಿ ಕೊಣಾಜೆ ನಿವಾಸಿಯಾಗಿರುವ ಅಯೂಬ್ ನನ್ನು ಪೊಲೀಸರು ಬಂಧಿಸಿದ್ದಾರೆ. ನಗರದ ಟಿಎಂಎ ಪೈ ಕನ್ವೆನ್ಶನ್ ಹಾಲ್ ನಲ್ಲಿ ನಡೆದ ಕಾರ್ಯಾಗಾರದಲ್ಲಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯ 30ಕ್ಕೂ ಅಧಿಕ ಮಕ್ಕಳ ಅನಾಥಾಶ್ರಮಗಳಿಂದ 480ಕ್ಕೂ ಮಕ್ಕಳು ಭಾಗವಹಿಸಿದ್ದರು. ಉಳ್ಳಾಲದ ಕುಂಪಲದಲ್ಲಿರುವ ಯತೀಂಖಾನದಲ್ಲಿ 79 ಮಕ್ಕಳಿದ್ದಾರೆ. ಆ ಪೈಕಿ 51 ಮಂದಿ 6ನೇ ಕ್ಲಾಸ್ ಮೇಲಿನವರಾಗಿದ್ದು ಶಾಲೆಗೆ ಹೋಗುತ್ತಿದ್ದಾರೆ. ಈ ಪೈಕಿ, 14 ವರ್ಷದ ಬಾಲಕನೊಬ್ಬ ತನಗೆ ಲೈಂಗಿಕ ಕಿರುಕುಳ ಆಗುತ್ತಿರುವ ಬಗ್ಗೆ ಹೇಳಿಕೊಂಡಿದ್ದಾನೆ. ಆತನನ್ನು ಮತ್ತಷ್ಟು ತಪಾಸಣೆಗೆ ಒಳಪಡಿಸಿದಾಗ, ನಿಗಾ ಕೇಂದ್ರದಲ್ಲಿ ಮೇಲ್ವಿಚಾರಕನಾಗಿರುವ ಅಯೂಬ್ ಹೆಸರು ಹೊರಗೆ ಬಂದಿದೆ. ಇದೇ ವ್ಯಕ್ತಿಯಿಂದ ಇತರೇ ನಾಲ್ಕು ಮಕ್ಕಳು ಕೂಡ ಕಿರುಕುಳಕ್ಕೆ ಒಳಗಾಗಿದ್ದಾರೆ. ಈ ಕೇಂದ್ರದಲ್ಲಿ ಗಂಡು ಮಕ್ಕಳು ಮಾತ್ರ ಇದ್ದು, ಆರೋಪಿ ನಿರಂತರವಾಗಿ ಕಿರುಕುಳ ನೀಡುತ್ತಿದ್ದ ಬಗ್ಗೆ ತಿಳಿದುಬಂದಿದೆ. ಆ ಹುಡುಗ ನಾಲ್ಕು ವರ್ಷಗಳಿಂದ ಈ ಕೇಂದ್ರದಲ್ಲಿದ್ದು ತಂದೆ, ತಾಯಿ ಇಲ್ಲದ ಕಾರಣ ಇಲ್ಲಿ ಉಳಿದುಕೊಂಡಿದ್ದ ಎಂದು ಕಮಿಷನರ್ ಶಶಿಕುಮಾರ್ ಮಾಹಿತಿ ನೀಡಿದ್ದಾರೆ. ಪ್ರಕರಣದ ಬಗ್ಗೆ ಪಾಂಡೇಶ್ವರ ಮಹಿಳಾ ಠಾಣೆಯಲ್ಲಿ ಪಪೊಕ್ಸೋ ಏಕ್ಟಿನಡಿ ಪ್ರಕರಣ ದಾಖಲಿಸಲಾಗಿದೆ. ಇಡೀ ಪ್ರಕರಣವನ್ನು ಡಿಸಿಪಿ ಹರಿರಾಂ ಶಂಕರ್ ನೇತೃತ್ವದಲ್ಲಿ ತನಿಖೆ ನಡೆಸಲಾಗುತ್ತಿದೆ. ಇನ್ನೂ ಕೆಲವು ನಿಗಾ ಕೇಂದ್ರಗಳ ಮಕ್ಕಳು ಕಿರುಕುಳದ ಬಗ್ಗೆ ಮಾಹಿತಿ ನೀಡಿದ್ದಾರೆ. ಆದರೆ, ಮಕ್ಕಳು ನೇರವಾಗಿ ಹೇಳಿಕೊಳ್ಳದ ಹೊರತು ಕ್ರಮ ತೆಗೆದುಕೊಳ್ಳಲು ಸಾಧ್ಯವಾಗಲ್ಲ. ಚೆನ್ನೈ ಸೇರಿದಂತೆ ದೇಶದ ಮಹಾನಗರಗಳಲ್ಲಿ ಈ ರೀತಿ ಮಕ್ಕಳನ್ನು ಶಿಬಿರದಲ್ಲಿ ಪಾಲ್ಗೊಳ್ಳುವಂತೆ ಮಾಡಿಸಿ, ಕಿರುಕುಳದ ಬಗ್ಗೆ ಮಾಹಿತಿ ಪಡೆಯಲಾಗುತ್ತದೆ. ರಾಜ್ಯದಲ್ಲಿ ಮೊದಲ ಬಾರಿಗೆ ಈ ರೀತಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕಮಿಷನರ್ ಮಾಹಿತಿ ನೀಡಿದರು.

Related posts

Leave a Reply

Your email address will not be published. Required fields are marked *