Header Ads
Header Ads
Breaking News

ಮಕ್ಕಳ ದಿನಾಚರಣೆಯ ಅರ್ಥಪೂರ್ಣ ಆಚರಣೆ:ಸರ್ಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ

ಮಕ್ಕಳ ದಿನಾಚರಣೆಯ ಹಿನ್ನೆಲೆಯಲ್ಲಿ ಪುತ್ತೂರಿನ ಪ್ರಗತಿ ಸ್ಟಡಿಸೆಂಟರ್‌ನ ವಿದ್ಯಾರ್ಥಿಗಳೆ ಸೇರಿಕೊಂಡು ಹಣ ಸಂಗ್ರಹ ಮಾಡಿ ಪುತ್ತೂರು ಸರಕಾರಿ ಆಸ್ಪತ್ರೆಯ ರೋಗಿಗಳಿಗೆ ಹಣ್ಣುಹಂಪಲು ವಿತರಿಸುವ ಮೂಲಕ ಮಕ್ಕಳ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಿದರು.

ಪ್ರಗತಿ ಸ್ಟಡಿ ಸೆಂಟರ್‌ನ ವಿದ್ಯಾರ್ಥಿ ನಾಯಕ ರಾಘವೇಂದ್ರ ಬೆಂಗಳೂರು, ನಾಯಕಿ ಸಾನಿಯ ಅವರ ನೇತ್ರತ್ವದಲ್ಲಿ 30 ಮಂದಿ ವಿದ್ಯಾರ್ಥಿಗಳು ಸೇರಿಕೊಂಡು ಹಣ ಸಂಗ್ರಹ ಮಾಡಿ ಹಣ್ಣು ಹಂಪಲು ಖರೀದಿಸಿ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿರುವ ರೋಗಿಗಳಿಗೆ ವಿತರಿಸಿದರು. ಈ ಸಂದರ್ಭ ಪ್ರಗತಿ ಸ್ಟಡಿ ಸೆಂಟರ್‌ನ ಪ್ರಾಂಶುಪಾಲೆ ಹೇಮಲತಾ, ಶಿಕ್ಷಕಾರಾದ ಹೇಮಂತ, ಕೌಶಲ್ಯ, ಚಿದಾನಂದ, ರೇಣುಕಾ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Related posts

Leave a Reply