Header Ads
Header Ads
Breaking News

ಮಕ್ಕಳ ಪಾಲಿಗೆ ಹೆತ್ತವರೇ ಹಂತಕರಾದರೇ? ಪಡುಬೆಳ್ಳೆಯಲ್ಲಿ ಒಂದೇ ಕುಟುಂಬದ ನಾಲ್ವರ ಆತ್ಮಹತ್ಯೆ


ಹದಿ ಹರೆಯದ ಇಬ್ಬರು ಹೆಣ್ಣು ಮಕ್ಕಳ ಸಹಿತ ಇವರ ಹೆತ್ತವರು ತಮ್ಮ ವಾಸದ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡ ಸ್ಥಿತಿಯಲ್ಲಿ, ಶವಗಳು ಪತ್ತೆಯಾಗುವ ಮೂಲಕ ಈ ಸಾವು ಎಲ್ಲರಲ್ಲೂ ಸಂಶಯವನ್ನು ಉಳಿಸಿ ಹೋಗಿದೆ.
ಶಿರ್ವ ಠಾಣಾ ವ್ಯಾಪ್ತಿಯ ಪಡುಬೆಳ್ಳೆ ಎಂಬಲ್ಲಿನ ಶ್ರುತಿಶ್ರೀಯಾ ನಿವಾಸದಲ್ಲಿ ಈ ದುರ್ಘಟನೆ ನಡೆದಿದ್ದು, ಮೃತರಾದವರು ೫೧ ವರುಷದ ಶಂಕರ ಆಚಾರ್ಯ, ೪೫ರ ನಿರ್ಮಲ ಆಚಾಯ ಇವರ ಮಕ್ಕಳಾದ ೨೪ರ ಶ್ರುತಿ ಹಾಗೂ ೨೩ರ ಶ್ರೀಯಾ. ಮನೆಯ ಸಮೀಪದಲ್ಲೇ ಜುವ್ಯೆಲ್ಲರಿ ಅಂಗಡಿ ನಡೆಸುತ್ತಿದ್ದ ಶಂಕರ ಆಚಾರ್ಯ ದಂಪತಿಗಳಿಗೆ ಇಬ್ಬರು ಹೆಣ್ಣು ಮಕ್ಕಳು, ದೊಡ್ಡವಳು ಮೂಡಬಿದರೆಯ ಮೈಟ್‌ನಲ್ಲಿ ಎಂ.ಬಿ.ಎ. ಅಂತಿಮ ವರ್ಷದ ಶಿಕ್ಷಣ ಪಡೆಯುತ್ತಿದ್ದು, ಈಕೆಗೆ ಕೆಲಸ ಕೂಡಾ ನಿಗದಿಯಾಗಿತ್ತು. ಎರಡನೇ ಮಗಳು ಶ್ರೀಯಾ ಮಣಿಪಾಲದ ಎಂ.ಐ.ಟಿ.ಯಲ್ಲಿ ಎಂ.ಸಿ.ಎ. ಶಿಕ್ಷಣಕ್ಕಾಗಿ ಕೆಲವೇ ದಿನಗಳ ಹಿಂದೆ ಸುಮಾರು ಒಂದುವರೆ ಲಕ್ಷ ರೂಪಾಯಿ ಹಣವನ್ನು ಕಟ್ಟಿದ್ದು ಇನ್ನೇನು ಕಾಲೇಜಿನ ಆರಂಭ ದಿನಗಳನ್ನು ಎದುರು ನೋಡುತ್ತಿದ್ದಳು. ಈ ಮಧ್ಯೆ ಶ್ರುತಿಗೆ ಚೆನೈ ಹುಡುಗನೊಂದಿಗೆ ಮದುವೆ ಫಿಕ್ಸ್ ಆಗಿ ನಿಶ್ಚಿರ್ತಾಥ ನಡೆಯಲಿತ್ತು. ಆದರೆ ಅದೇ ಸಂದರ್ಭ ಹುಡುಗನ ಕಡೆಯವರಿಗೆ ಸೂತಕ ಎದುರಾದ ಕಾರಣ ನಿಶ್ಚಿರ್ತಾಥ ಮುರಿದು ಬಿತ್ತು. ನಿಶ್ಚಿರ್ತಾಥವನ್ನು ಸೆಪ್ಟಂಬರ್ ೩ರಂದು ಮದುವೆ ನಿಗದಿಯಾದ ದಿನದಂದೆ ನಡೆಸುವುದೆಂದು ಗುರು ಹಿರಿಯರು ನಿರ್ಧರಿಸಿದ್ದರು.
ಮೇಲ್‌ನೋಟಕ್ಕೆ ಸುಖಿ ಸಂಸಾರ, ಆದರೆ ಹಿಂದೊಂದು ಸಂದರ್ಭದಲ್ಲಿ ಆರ್ಥಿಕ ಮುಗ್ಗಟ್ಟು ಇದ್ದು ಸಂಕಷ್ಟ ಅನುಭವಿಸಿದ ಕುಟುಂಬ ಇದಾಗಿತ್ತು. ಆ ಸಂದರ್ಭದಲ್ಲಿ ಮನೆಯೋಡತಿ ನಿರ್ಮಾಲ ಆಚಾರ್ಯ ನಾವು ಸತ್ತರೆ ಒಂದಾಗಿ ಸಾಯುತ್ತೇವೆ ಎಂಬುದಾಗಿ ನೊಂದು ನುಡಿದಿದ್ದರು ಎನ್ನಲಾಗಿದೆ. ಆದರೆ ಸ್ಥಳೀಯ ಸಂಬಂಧಿಗಳು ಹೇಳುವಂತೆ ಆತ್ಮಹತ್ಯೆ ಮಾಡಿಕೊಳ್ಳುವಂಥ ಕಷ್ಟ ಅವರಿಗಿರಲಿಲ್ಲ, ಯಾಕೆ ಈ ರೀತಿ ಮಾಡಿಕೊಂಡಿದ್ದಾರೆ ಎಂಬ ವಿಚಾರ ನಮಗೂ ತಿಳಿಯದು ಎನ್ನುತ್ತಾರೆ. ಸಂಬಂಧಿಗಳೇ ವಾಸವಾಗಿರುವ ಸುತ್ತಲ ಮನೆ. ನಮ್ಮೊಳಗೆ ಉತ್ತಮ ಒಡನಾಟ ಇತ್ತು. ಶಂಕರ ಆಚಾರ್ಯ ಅವರ ವರ್ತನೆಯಲ್ಲಿ ನಾವು ಯಾವುದೇ ಬದಲಾವಣೆ ಗಮನಿಸಿಲ್ಲ ಎನ್ನುತ್ತಾರೆ. ಆ ದಿನ ತಡರಾತ್ರಿಯ ವರೆಗೂ ಅವರ ಮನೆಯ ಒಳ ಭಾಗದಲ್ಲಿ ವಿದ್ಯುತ್ ದೀಪ ಉರಿಯುತ್ತಿತ್ತು ಎನ್ನುವುದು ಸ್ಥಳೀಯರ ಮಾತು. ಮುಂಜಾನೆ ಶಂಕರ ಆಚಾರ್ಯರ ತಾಯಿ ಸುಂದರಿ ಆಚಾರ್ಯ ತಾನು ಬೆಳೆಸಿದ ಮಲ್ಲಿಗೆ ಹೂವನ್ನು ಮಗನಲ್ಲಿ ನೀಡುವುದಕ್ಕೆ ಅವರ ಮನೆಗೆ ಹೋದಾಗ ಪ್ರಕರಣ ಬೆಳಕಿಗೆ ಬಂದಿದೆ. ತಕ್ಷಣ ಅವರನ್ನು ಮಣಿಪಾಲ ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಷ್ಟರಲ್ಲೇ ಇಹ ಲೋಕ ತ್ಯಜಿಸಿದ್ದರು.
ಬೆಳೆಸಿ ವಿದ್ಯೆ ಬುದ್ಧಿ ನೀಡಿದ ತಂದೆಯೇ ತನ್ನ ಮಕ್ಕಳ ಪಾಲಿಗೆ ಹಂತಕರಾದರೇ ಎಂಬ ಮಾತು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿದೆ. ಆರ್ಥಿಕ ಮುಗ್ಗಟ್ಟು ಹೊರತು ಪಡಿಸಿ ಆತ್ಮಹತ್ಯೆಗೆ ಕಾರಣವೇ ಇಲ್ಲ ಎಂಬುದು ಸ್ಥಳೀಯರ ಮಾತು. ತನ್ನ ದುಸ್ಥಿತಿಗೆ ಮಕ್ಕಳನ್ನು ಏಕೆ ಬಲಿ ಪಡೆಯಬೇಕಾಗಿತ್ತು. ತಿನ್ನುವ ಆಹಾರಕ್ಕೆ ತಾನು ಚಿನ್ನದ ಕೆಲಸಕ್ಕೆ ಬಳಸುವ ಘನಘೋರ ವಿಷವನ್ನು ಮಕ್ಕಳಿಗೆ ತಿಳಿಯದಂತೆ ತಿನ್ನಲು ನೀಡಿ ಪತ್ನಿ ಸಹಿತ ತಾನೂ ತಿಂದು ಆತ್ಮಹತ್ಯೆ ಮಾಡಿಕೊಳ್ಳುವ ಮೂಲಕ ಮಕ್ಕಳ ಪಾಲಿಗೆ ಹಂತಕರೆನಿಸಿಕೊಂಡೆರೇ ಎಂಬುದು ಸಾರ್ವಜನಿಕ ವಲಯದಲ್ಲಿ ಹೀಗೊಂದು ಸಂಶಯ ಹುಟ್ಟು ಹಾಕಿದೆ.
ಶವ ದೊರೆತ ಮುಂಜಾನೆ ಐದರ ಸುಮಾರಿಗೆ ಶೃತಿ ಕಾರ್ಕಳದ ತನ್ನ ಗೆಳತಿಯ ಮೊಬೈಲ್‌ಗೆ ಮಿಸ್ಡ್‌ಕಾಲ್ ಕೊಟ್ಟಿದ್ದು, ಆ ಕಾಲ್ ನೋಡಿ ಆಕೆ ಮರಳಿ ಕಾಲ್ ಮಾಡುವಾಗ ಈಕೆ ಕರೆ ಸ್ವೀಕರಿಸಿಲ್ಲ ಎನ್ನಲಾಗಿದ್ದು. ಇದನ್ನು ಗಮನಿಸಿದರೆ ಇವರು ಮುಂಜಾನೆಯ ಬಳಿಕ ಈ ಕೃತ್ಯ ನಡೆಸಿರ ಬಹುದೆಂಬ ಶಂಕೆ ವ್ಯಕ್ತವಾಗುತ್ತಿದೆ. ಜುವ್ಯೆಲ್ಲರಿ ನಡೆಸುತ್ತಿದ್ದ ಇವರೊಂದಿಗೆ ವಿದ್ಯೆ ಕಲಿತವರು ನೂರಕ್ಕೂ ಅಧಿಕ ಮಂದಿ ಎಂಬುದು ಘಟನಾ ಸ್ಥಳಕ್ಕೆ ಆಗಮಿಸಿದ ಶಿಷ್ಯವೃಂದ ಮಾತು. ಸಂಜೆಯ ೪-೩೦ರ ಸುಮಾರಿಗೆ ಮಣಿಪಾಲದಿಂದ ಶವಗಳನ್ನು ಪಡುಬೆಳ್ಳೆಯ ಮನೆಗೆ ತರಲಾಗಿದ್ದು, ಮನೆಯಲ್ಲಿ ನಡೆದ ಅಂತಿಮ ವಿದಿ ವಿಧಾನಗಳ ಬಳಿಕ ಶವಗಳನ್ನು ಉಡುಪಿಯ ಬೀಡಿನ ಗುಡ್ಡೆಯ ಸ್ಮಶಾನದಲ್ಲಿ ಸುಡಲಾಯಿತು.

Related posts

Leave a Reply