Header Ads
Header Ads
Header Ads
Breaking News

ಮಕ್ಕಳ ಮನಸ್ಸನ್ನು ವಿಕಸನಗೊಳಿಸುವ ಮನಸ್ಸುಗಳ ಕೊರತೆ ಇದೆ.. ಸಮಾಜ ಸೇವಕ ಕಾಪು ಸುರೇಶ್ ಶೆಟ್ಟಿ ಗುರ್ಮೆ ವಿಷಾದ…

ಇಂದಿನ ಸಮಾಜದಲ್ಲಿ ಮನಷ್ಯರನ್ನು ದುಡ್ಡಿನಿಂದ ಅಳೆಯುವ ಕೆಲಸವಾಗುತ್ತಿದೆ. ನಮ್ಮ ದೇಶದಲ್ಲಿ ಶೇಕಡ ಅರವತ್ತು ಯುವ ಸಮೂದಾಯವಿದ್ದು, ಅವರ ಮನಸ್ಸನ್ನು ವಿಕಸನವಾಗಿರುವ ಮನಸ್ಸುಗಳ ಕೊರತೆಯಿಂದಾಗಿ ಯುವ ಸಮೂದಾಯ ದಾರಿ ತಪ್ಪುತ್ತಿದ್ದು, ಅವರ ಮನಸ್ಸನ್ನು ಜೋಡಿಸುವ ಮೂಲಕ ಸಮೋಜೋಮುಖಿ ಕಾರ್ಯಗಳಲ್ಲಿ ತೋಡಗಿಸಿಕೊಳ್ಳುವಂತೆ ಮಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಸಮಾಜ ಸೇವಕ ಕಾಪು ಸುರೇಶ್ ಶೆಟ್ಟಿ ಗುರ್ಮೆ ಹೇಳಿದ್ರು. ಅವರು ಹಿರಿಯಡ್ಕ ದೇವಾಡಿಗರ ಸಭಾ ಭವನದಲ್ಲಿ ಬುಡೋಕಾನ್ ಕರಾಟೆ ಆಂಡ್ ಸೆಲ್ಫ ಡಿಪೆನ್ಸ್ ಸಂಸ್ಥೆ ಆಯೋಜಿಸಿದ ರಾಜ್ಯಮಟ್ಟದ ಅಂತರ್ ಶಾಖಾ ಕರಾಟೆ ಸ್ಪರ್ಧೆಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

ಇದೇ ಸಂದರ್ಭ ಹಿರಿಯ ಕರಾಟೆ ಶಿಕ್ಷಕರನ್ನು ಸನ್ಮಾನಿಸಿ ಗೌರವಿಸಲಾಯಿತು. ಕರಾಟೆ ಸ್ಪರ್ಧೆಯಲ್ಲಿ ಭಾಗವಹಿಸಿ ಬಹುಮಾನ ಗಳಿಸಿದ ಕರಾಟೆ ಪಟುಗಳಿಗೆ ಅತಿಥಿಗಳು ಪ್ರಶಸ್ತಿ ನೀಡಿ ಗೌರವಿಸಿದರು.
ಸಭೆಯ ಅಧ್ಯಕ್ಷತೆಯನ್ನು ಮೂಡಬೆಳ್ಳೆ ನಾರಾಯಣಗುರು ವಿದ್ಯಾಸಂಸ್ಥೆ ಮುಖ್ಯ ಶಿಕ್ಷಕ ದಿನ್‌ರಾಜ್ ವಹಿಸಿದ್ದು, ಮುಖ್ಯ ಅಥಿತಿಗಳಾಗಿ ಜಿಲ್ಲಾ ದೈಹಿಕ ಶಿಕ್ಷಣ ಶಿಕ್ಷಕ ಮಧುಕರ್, ಕರಾಟೆ ಪ್ರಮುಖರಾದ ನಿತ್ಯಾನಂದ ಕೆಮ್ಮಣ್ಣು, ಲಕ್ಷ್ಮೀನಾರಾಯಣ ಆಚಾರ್, ಸತೀಶ್ ಬೆಳ್ಮಣ್, ರವಿ ಸಾಲ್ಯಾನ್, ಗಣೇಶ್ ಎರ್ಮಾಳ್, ಸಂಘಟಕ ರಘುರಾಜ್ ಪಣಿಯಾಡಿ, ರೋಹಿತಾಕ್ಷ ಮುಂತಾದವರಿದ್ದರು.

ವರದಿ: ಸುರೇಶ್ ಏರ್ಮಾಳ್

Related posts

Leave a Reply