Header Ads
Breaking News

ಮಗನಿಗೋಸ್ಕರ ಶಾಲೆ ಪ್ರಾರಂಭಿಸಿದ ಗಟ್ಟಿಗಿತ್ತಿ ತಾಯಿ

ಶಾಲೆಗಳಲ್ಲಿ ತನ್ನ ವಿಶೇಷಚೇತನ ಮಗನನ್ನು ದಾಖಲಾತಿ ಮಾಡಿಕೊಳ್ಳಲಿಲ್ಲವೆಂದು ಈ ತಾಯಿ ಕೈಕಟ್ಟಿ ಸುಮ್ಮನೆ ಕೂರಿಲ್ಲ. ತನಗೊಂದು ವಿಶೇಷಚೇತನ ಮಗುವಿದೆಯಲ್ಲಾ ಎಂದು ಯಾವತ್ತೂ ಕೊರಗಿಲ್ಲ. ಮಗನಿಗೋಸ್ಕರವೇ ಬಹುದೂರದ ದಾವಣಗೆರೆಯಲ್ಲಿ ಟೀಚಿಂಗ್ ಟ್ರೈನಿಂಗ್ ಪಡೆದು ತನ್ನ ಮನೆಯ ಮೇಲೆ ಶಾಲೆ ಪ್ರಾರಂಭಿಸಿದ ಛಲವಾದಿ ಈಕೆ. ಅಷ್ಟಕ್ಕೂ ಯಾರಿದು ಈ ಗಟ್ಟಿಗಿತ್ತಿ ಮಹಿಳೆ ಅಂತೀರಾ? ಈ ಕುರಿತಾದ ಒಂದು ಸ್ಪೆಶಲ್ ರಿಪೋರ್ಟ್ ಇಲ್ಲಿದೆ ನೋಡಿ.

ನೀವೀಗ ನೋಡುತ್ತಿರುವ ಮನೆಯ ಕಂಪೌಂಡ್ ಒಳಹೊಕ್ಕರೆ ಸಾಕು. ಕಂಪೌಂಡ್ ಗೋಡೆಯ ಮೇಲೆ ವಿಶೇಷ ಬರಹಗಳು, ಗುರುಕುಲ ಮಾದರಿಯ ಚಿತ್ರಗಳು. ಇಡೀ ಮನೆಯ ಆವರಣ ಶೈಕ್ಷಣಿಕ ವಾತಾವರಣದಲ್ಲಿ ತೇಲುತ್ತಿದೆ. ಮೊಬೈಲ್, ವೀಡಿಯೋ ಗೇಮ್‍ಗಳಲ್ಲಿ ಮಕ್ಕಳ ಬಾಲ್ಯ ಕಳೆದುಹೊಗುತ್ತಿರುವ ಈ ಕಾಲಘಟ್ಟದಲ್ಲಿ ಮಕ್ಕಳಿಗೆ ಅಪ್ಪಟ ದೇಶೀಯ ಆಟ, ಸಂಸ್ಕಾರಯುತ ಶಿಕ್ಷಣ ನೀಡುವ ಮೂಲಕ ಈ ಶಿಕ್ಷಣ ಸಂಸ್ಥೆ ಪೋಷಕರನ್ನು ಸೆಳೆಯುತ್ತಿದೆ.

ಹೌದು..ನಾವೀಗ ಹೇಳಲು ಹೊರಟಿರುವ ಸ್ಟೋರಿ ಕುಂದಾಪುರ ತಾಲೂಕಿನ ಹಾಲಾಡಿಯಲ್ಲಿರುವ ಬ್ರೈಟ್ ಪರ್ಲ್ ಸ್ಕೂಲ್‍ನ ವಿಶೇಷತೆಯ ಬಗ್ಗೆ ಒಬ್ಬೊಬ್ಬ ಸಾಧಕರ ಸಾಧನೆಯ ಹಿಂದೆ ಒಂದೊಂದು ಕಾರಣ ಇದ್ದೆ ಇರುತ್ತದೆ. ನಮಗೆಲ್ಲಿ ಅವಮಾನವಾಗಿದೆಯೋ ಅಲ್ಲಿಂದಲೇ ದೃಢ ಸಂಕಲ್ಪಮಾಡಿ ಎದ್ದು ನಿಂತು ಸಾಧನೆ ಮಾಡಿದರೆ ಫಲ ಸಿಗುತ್ತದೆ ಎನ್ನೋದಕ್ಕೆ ಹಾಲಾಡಿ ನಿವಾಸಿ ಆಶಾ ರಾಜೀವ ಕುಲಾಲ್ ಸಾಕ್ಷಿ. ಆಶಾ ರಾಜೀವ್ ಕುಲಾಲ್ ಬ್ರೈಟ್ ಪರ್ಲ್ ನರ್ಸರಿ ತೆರೆದ ಹಿಂದೆ ತಾಯಿ ಮಗನ ಬಂಧನವಿದೆ. ತನ್ನ ವಿಶೇಷಚೇತನ ಮಗನಿಗಾಗಿ ಆಶಾ ಬ್ರೈಟ್ ಫರ್ಲ್ ನರ್ಸರಿ ಆರಂಭಿಸಿದ್ದಾರೆ. ಆಶಾ ಅವರಿಗೆ ಇಬ್ಬರು ಗಂಡು ಮಕ್ಕಳಿದ್ದು, ಮೊದಲ ಮಗ ‘ಆಟಿಸಮ್’ ಪೀಡಿತ. ಮಗನ ಶಾಲೆಗೆ ಸೇರಿಸುವ ಪ್ರಯತ್ನಕ್ಕೆ ನಕಾರಾತ್ಮಕ ಸ್ಪಂದನ ಸಿಕ್ಕಿದ್ದು, ಮಗ ಮಕ್ಕಳೊಟ್ಟಿಗೆ ಬೆರೆತರೆ ಬದಲಾವಣೆ ತರಲು ಸಾಧ್ಯ ಎಂಬ ವೈದ್ಯರ ಸಲಹೆ ಮೇರೆಗೆ ಬ್ರೈಟ್ ನರ್ಸರಿ ಆರಂಭಿಸಲು ಕಾರಣ. ಕಷ್ಟ ದೇವರು ಕೊಡುವ ಉಡುಗೊರೆ.. ನಮ್ಮನ್ನು ಪರೀಕ್ಷಿಸಲು ದೇವರು ಇಂತಹ ಉಡುಗೊರೆಗಳನ್ನು ನೀಡುತ್ತಿದ್ದು, ಇದನ್ನು ಸವಾಲಾಗಿ ಸ್ವೀಕರಿಸಿದರೆ ದಡ ಸೇರಲು ಸಾಧ್ಯ ಎನ್ನೋದು ಆಶಾ ಕಂಡುಕೊಂಡ ಮಾರ್ಗ.
ವಾಯ್ಸ್2: ಶಿಕ್ಷಣ ಸಂಸ್ಥೆಗಳು ವ್ಯಾಪಾರೀಕರಣ ಆಗುತ್ತಿರುವ ಈ ಕಾಲಘಟ್ಟದಲ್ಲಿ ಫಲಾಕಾಂಕ್ಷೆಯಿಲ್ಲದೆ ಮಕ್ಕಳನ್ನು ಪ್ರಜ್ಞಾವಂತರನ್ನಾಗಿ ನಿರೂಪಿಸುವ ಕೆಲಸ ಮಾಡುತ್ತಿರುವುದು ನಿಜಕ್ಕೂ ಶ್ಲಾಘನೀಯ ಕೆಲಸ. ನರ್ಸರಿ ಹುಟ್ಟಿಹಾಕಿದ ಆಶಾ ರಾಜೀವ್ ಕುಲಾಲ್ ಅವರಿಂದ ಹಿಡಿದು ಮತ್ತುಳಿದ ಮೂವರು ಶಿಕ್ಷಕಿಯರೂ ಕೂಡಾ ಅತ್ಯಲ್ಪ ಸಂಬಳದಲ್ಲಿ ಸೇವೆಯ ಹಿನ್ನೆಲೆಯಲ್ಲಿ ದುಡಿಯುತ್ತಿದ್ದಾರೆ. ನರ್ಸರಿ ಪ್ರವೇಶದಲ್ಲಿ ಸಚ್ಛಾರಿತ್ರ್ಯದ ಬೆಳವಣಿಗೆಯೇ ಶಿಕ್ಷಣದ ಆರಂಭ ಎನ್ನುವ ಸ್ಲೋಗನ್‍ಗೆ ಪೂರಕವಾಗಿಯೇ ಪುಟಾಣೆಗಳಿಗೆ ಬೋಧನೆ ಇದೆ. ಮನೆ ಮನೆಗೆ ತೆರಳಿ ಬಳೆಯಿಡುವ ಪದ್ದತಿ ಮರೆಯಾಗುತ್ತಿದ್ದು, ಬಳೆಗಾರರ ಕರೆಯಿಸಿ ಮಕ್ಕಳಿಗೆ ಬಳೆ ಇಡಿಸುವ ಪದ್ದತಿಯೂ ಇದೆ. ಶಾಂತಿ ಮಂತ್ರ, ನೀತಿ ಕತೆಗಳು, ಹಾಡು ಎಲ್ಲವೂ ಪುಟ್ಟಪುಟ್ಟ ಮಕ್ಕಳ ಬಾಯಿಂದ ಶುಶ್ರಾವ್ಯವಾಗಿ ಕೇಳಿಬರುತ್ತದೆ. ತೆಂಗಿನ ಗರಿ ಕನ್ನಡಕ ಹಾಕಿಕೊಂಡು, ತಂಗಿನ ಗರಿ ವಾಚ್ ಕಟ್ಟಿಕೊಂಡು ಮಕ್ಕಳು ಪಡುವ ಖುಸಿಯಿದೆಯಲ್ಲಾ ಅದು ನಿಜಕ್ಕೂ ಅತ್ಯದ್ಬುತ.

 

ಬ್ರೈಟ್ ಪರ್ಲ್ ನರ್ಸರಿ 2016ರಲ್ಲಿ ಆರಂಭಿಸಿದ್ದು, ಮೊದಲು ಆರು ಮಕ್ಕಳಿದ್ದು, ಪ್ರಸಕ್ತ 30 ಮಕ್ಕಳಿದ್ದಾರೆ. ಎಲ್ಲರಿಗೂ ಸಮವಸ್ತ್ರವಿದ್ದು, ಬೆಳಗ್ಗೆ 10ಕ್ಕೆ ಆರಂಭವಾಗುವ ನರ್ಸರಿ ಮಧ್ಯಾಹ್ನ 3ಕ್ಕೆ ಮುಗಿಯುತ್ತದೆ. ಮಕ್ಕಳ ಕರೆತರಲು ಬಿಡಲು ವಾಹನ ವ್ಯವಸ್ಥೆ ಕೂಡಾ ಇದ್ದು, ಆಶಾರ ಅಣ್ಣ ದಿನೇಶ್ ಕುಲಾಲ್ ವಾಹನದ ಸಾರಥಿಯಾಗಿದ್ದಾರೆ.

ಒಟ್ಟಾರೆ ಒಂದುಕಡೆ ಸಂಪ್ರದಾಯ, ದೇಶೀಯ ಸಂಸ್ಕøತಿ ಸಂಸ್ಕಾರದ ಬಗ್ಗೆ ಮಾತನಾಡುವವರ ನಡುವೆ ಅಪ್ಪಟ ಭಾರತೀಯ ಸಂಸ್ಕøತಿ, ಶಿಕ್ಷಣ, ದೇಶೀಯ ಆಟಗಳ ಮೂಲಕ ಸದ್ದಿಲ್ಲದೆ ಕೆಲಸ ಮಾಡುತ್ತಿದೆ ಬ್ರೈಟ್ ಪರ್ಲ್ ಸಂಸ್ಥೆ.

Related posts

Leave a Reply

Your email address will not be published. Required fields are marked *