Header Ads
Header Ads
Breaking News

ಮಜ್ಲಿಸುನ್ನೂರು, ಶಂಸುಲ್ ಉಲಮಾ ಮೌಲಿದ್, ದ್ವಿದಿನ ಧಾರ್ಮಿಕ ಪ್ರವಚಣ ಕಾರ್ಯಕ್ರಮ

ಉಳ್ಳಾಲ. ಬದ್ರಿಯಾ ಕೇಂದ್ರ ಜುಮಾ ಮಸೀದಿ ಹಾಗೂ ಎಸ್ಕೆ‌ಎಸ್ಸೆಸ್ಸೆಫ್ ದೇರಳಕಟ್ಟೆ ಶಾಖೆ ಇದರ ಜಂಟಿ ಅಶಯದಲ್ಲಿ ಮಜ್ಲಿಸುನ್ನೂರು ಹಾಗೂ ಶಂಸುಲ್ ಉಲಮಾ ಮೌಲಿದ್‌ದಿನ ವಾರ್ಷಿಕದ ಪ್ರಯುಕ್ತ ದೇರಳಕಟ್ಟೆ ಬದ್ರಿಯ ಕೇಂದ್ರ ಜುಮಾ ಮಸೀದಿ ವಠಾರದಲ್ಲಿ ನಡೆದ ದ್ವಿದಿನ ಧಾರ್ಮಿಕ ಪ್ರವಚಣ ಕಾರ್ಯಕ್ರಮ ಭಾನುವಾರ ಸಮಾಪ್ತಿಕೊಂಡಿತು.

ಅಸ್ಸಯ್ಯದ್ ಹಾರಿಸ್ ಅಲಿ ಶಿಹಾಬ್ ತಂಙಳ್ ಪಾಣಕ್ಕಾಡ್ ಮಜ್ಲಿಸುನ್ನೂರು ನೇತೃತ್ವ ವಹಿಸಿದರು.
ಅಸ್ಸಯ್ಯದ್ ಅಲ್-ಹಾದಿ ತಂಙಳ್ ಮೊಗ್ರಾಲ್ ಪುತ್ತೂರು ದು‌ಅ ನೆರವೇರಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಕೇಂದ್ರ ಜುಮಾ ಮಸೀದಿ ಬಂದರ್ ಖತೀಬ್ ವಿ.ಕೆ ಸ್ವದಕತುಲ್ಲಾ ಫೈಝಿ ಕಾರ್ಯಕ್ರಮ ಉದ್ಘಾಟಿಸಿದರು.
ದೇರಳಕಟ್ಟೆ ಕೇಂದ್ರ ಜುಮಾ ಮಸೀದಿ ಅಧ್ಯಕ್ಷ ಹಾಜಿ ಕೆ. ಅಬೂಬಕ್ಕರ್ ಕಾರ್ಯಕ್ರಮ ಅಧ್ಯಕ್ಷತೆ ವಹಿಸಿದರು.
ಯು.ಕೆ ಮಹಮ್ಮದ್ ಹನೀಫ್ ನಿಝಾಮಿ ಮೊಗ್ರಾಲ್ ಮತ್ತು ಅಬೂಬಕ್ಕರ್ ಸಿದ್ದೀಕ್ ಅಝ್‌ಹರಿ ಪಯ್ಯನ್ನೂರು ಮುಖ್ಯ ಪ್ರಭಾಷಣಗೈದರು.
ಅಸ್ಸಯ್ಯದ್ ತ್ವಹಾ ಜಿಫ್ರಿ ತಂಙಳ್ ಆಡ್ಯಾರ್ ಕಣ್ಣೂರು,ಬದ್ರಿಯಾ ಜುಮಾ ಮಸೀದಿ ದೇರಳಕಟ್ಟೆ ಗೌರವಾಧ್ಯಕ್ಷ ಹಾಜಿ ಡಿ, ಇಸ್ಮಾಲ್, ಉಪಾಧ್ಯಕ್ಷ ಹಾಜಿ ಡಿ. ಅಬ್ಬಾಸ್, ಕೋಶಾಧಿಕಾರಿ ಹಾಜಿ ಇಲ್ಯಾಸ್ ಡಿ, ಪ್ರ.ಕಾರ್ಯದರ್ಶಿ ಹಾಜಿ ಅಬ್ದುಲ್ ಅಝೀಝ್, ಕಾರ್ಯದರ್ಶಿ ರಶೀದ್ ಡಿ.ಎಂ, ಎಸ್ಕೆ‌ಎಸ್ಸೆಸ್ಸೆಫ್ ಮಂಗಳೂರು ತಾಲೂಕು ಸಮಿತಿ ಅಧ್ಯಕ್ಷ ಇಬ್ರಾಹೀಂ ಕೊಣಾಜೆ, ರಹ್ಮಾನಿಯ ಜುಮಾ ಮಸೀದಿ ಖತೀಬ್ ಯಾಸರ್ ಅರಾಫತ್ ಕೌಸರಿ, ಉಮರ್ ಮುಸ್ಲಿಯರ್, ಅರಫಾ ಮಸೀದಿ ಜಲಾಲ್‌ಬಾಗ್ ಖತೀಬ್ ಇಸ್ಹಾಕ್ ಫೈಝಿ, ಬದ್ಯಾರ್ ಶಂಸುಲ್ ಉಲಮಾ ಮದರಸ ಸದರ್ ಮು‌ಅಲ್ಲಿಂ ಇಬ್ರಾಹೀಂ ಫೈಝಿ, ಗ್ರೀನ್ ಗ್ರೌಂಡ್ ಮನಾರಲ್ ಹುದಾ ಮದರಸ ಅಧ್ಯಕ್ಷ ಸಯ್ಯದ್ ಅಲಿ, ದೇರಳಕಟ್ಟೆ ಸುನ್ನೀ ಯುವಜನ ಸಂಘ ಅಧ್ಯಕ್ಷ ಹಾಜಿ ಮುಹಮ್ಮದಾಲಿ, ಉದ್ಯಮಿ ಎಷ್ಯನ್ ಬಾವ ಹಾಜಿ, ಬೆಳ್ಮ ಗ್ರಾ.ಪಂ ಸದಸ್ಯ ಕಬೀರ್ ಡಿ, ಬದ್ಯಾರ್ ಫಾರೂಕ್ ಜುಮಾ ಮಸೀದಿ ಅಧ್ಯಕ್ಷ ಹಾಜಿ ಹಮೀದ್, ಉದ್ಯಮಿ ಹಾಜಿ ಸಿದ್ದೀಕ್ ದುಬೈ ಫ್ಲಾಝಾ ಮುಂತಾದವರು ಈ ಸಂದರ್ಭ ಉಪಸ್ಥಿತರಿದರು.
ಎಸ್ಕೆ‌ಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾ ಗೌರವ ಸಲಹೆಗಾರ ಅಬ್ದುಲ್ ಲತೀಫ್ ದಾರಿಮಿ ಸ್ವಾಗತಿಸಿದರು. ಎಸ್ಕೆ‌ಎಸ್ಸೆಸ್ಸೆಫ್ ದೇರಳಕಟ್ಟೆ ಶಾಖಾಧ್ಯಕ್ಷ ನೌಫಲ್ ಬಿ.ವಂದಿಸಿದರು.
ಅಬ್ದುಲ್ ಜಬ್ಬಾರ್ ಮುಸ್ಲಿಯಾರ್ ಕರಾಯ ಮತ್ತು ಸದರ್ ಮು‌ಅಲ್ಲೀಂ ಅಬ್ಬುಲ್ಲಾ ಫೈಝಿ ಕಾರ್ಯಕ್ರಮ ನಿರೂಪಿಸಿದರು.

Related posts

Leave a Reply