Header Ads
Breaking News

ಮಡಿಲು ಸಮ್ಮಾನ್ ಪುರಸ್ಕಾರ್ 2019

ಆಧುನೀಕತೆಯ ಭರಾಟೆಯಲ್ಲಿ ವಾಸ್ತವತೆಯನ್ನು ಮರೆಯುತ್ತಿದ್ದೇವೆ. ವಿದ್ಯಾರ್ಥಿಗಳಂತೂ ಜೀವನದಲ್ಲಿ ಹಲವಾರು ವಿಚಾರಗಳಲ್ಲಿ ಸ್ವಾವಲಂಬನೆಯನ್ನು ಸಾಧಿಸಬೇಕಿದೆ. ಮೊಬೈಲ್ ಮೇಲಿನ ವ್ಯಾಮೋಹ ಬದುಕನ್ನು ಅಧಃಪತನಗೊಳಿಸುತ್ತಿದೆ- ಎಂದು ಆಶಾ ಕುಮಾರಸ್ವಾಮಿ ಹೇಳಿದರು.

ಇವರು ಇತ್ತೀಚೆಗೆ ಉಜಿರೆಯ ಎಸ್ ಕೆ ಮೆಮೋರಿಯಲ್ ಹಾಲ್‌ನಲ್ಲಿ ನಡೆದ ಮಡಿಲು ಸಮ್ಮಾನ್ ಪುರಸ್ಕಾರ್-೨೦೧೯v ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದರು. ಮೊಬೈಲ್‌ನ ಅತಿಯಾದ ಬಳಕೆ ಮಕ್ಕಳ ಬಾಳನ್ನು ಕಮರಿಸುತ್ತಿದೆ, ಈ ಬಗ್ಗೆ ಪೋಷಕರು ಹೆಚ್ಚಿನ ನಿಗಾ ವಹಿಸಬೇಕಿದೆ. ವಿದ್ಯಾರ್ಥಿ ಜೀವನವು ಓದುವಿಕೆಯ ಸ್ಥಾನವಾಗಬೇಕು, ಬದಲಾವಣೆ ಅಧಃಪತನಕ್ಕೆ ನಾಂದಿಯಾಗಬಾರದು, ಜೊತೆಗೆ ಮಡಿಲಿನ ಆಸರೆಯಂತೆ ಸಾಧನೆಯ ಆಸನದಲ್ಲಿ ಮುಂದಿನ ಪೀಳಿಗೆಯೂ ಸೇರಿಕೊಳ್ಳಬೇಕೆನ್ನುವ ಕಿವಿಮಾತನ್ನು ಹೇಳಿದರು. 

ಸಾಧಕರಿಗೆ ಸನ್ಮಾನ, ಬಿರುದು,ಗೌರವ: ಮಡಿಲು ಸಮ್ಮಾನ್ ಪುರಸ್ಕಾರದಲ್ಲಿ ಅಗ್ರಗಣ್ಯ ಸಾಧನೆ ಮೆರೆದ ಸಾಧಕರಿಗೆ ಮಡಿಲು ಬಿರುದು ಪ್ರಧಾನ ಮಾಡಲಾಯಿತು. ಓ.ರಾಮ ಭಟ್(ಪವನಪುv), ದೇವರಾವ್(ನೇಗಿಲಯೋಗಿ,) ಕೆ.ಮೋಹನ್ ಕುಮಾರ್(ಆಪತ್ಭಾಂಧವ), ಪಿಲಿಕ್ಸ್ ತೋಮಸ್(ಭರತ ಸಿಂಧೂರ), ದೇಜಮ್ಮ(ಜೀವ ಸಂಜೀವಿನಿ), ವಿಜೆ ಪ್ರತೀಶ್(ವಾಗ್ ರತ್ನ) ಬಿರುದನ್ನು ನೀಡಿ ಗೌರವಿಸಲಾಯಿತು.

ರೂಪಾ ವರ್ಕಾಡಿ, ಉದಯ್ ಕುಮಾರ್ ಬೆಳ್ತಂಗಡಿ, ಅರುಣ್ ಉಳ್ಳಾಲ್, ಸ್ಮಿತೇಶ್ ಎಸ್ ಬಾರ್ಯ, ಜಗದೀಶ್ ಪೂಜಾರಿ, ಕುಮಾರಿ ತ್ರಿಶಾ, ಕುಮಾರಿ ತಾಸ್ದಿ ಪೂಜಾರಿ, ಕುಮಾರಿ ಧನ್ವಿ ಮರವಂತೆ, ಸಾರ್ಥಕ್ ಶೆಣೈ, ಚಿತ್ತಾರ ಬೆಳಾಲ್, ಮನೋಜ್ ಕುಮಾರ್, ದೀರೇಶ್ ಜೈನ್, ಸಹನ್ ಎಂ ಉಜಿರೆ, ಮನೀಶ್ ಕುಲಾಲ್, ರೋಶನ್ ಇವರನ್ನು ಸನ್ಮಾನಿಸಲಾಯಿತು. ಇದರೊಡನೆ ಸರಕಾರಿ ಶಾಲೆಗಳಲ್ಲಿ ಅತೀ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳನ್ನು, ಸಂಘ ಸಂಸ್ಥೆಗಳನ್ನೂ ಗುರುತಿಸಲಾಯಿತು.
ವೇದಿಕೆಯಲ್ಲಿ ಪುಟಾಣಿಗಳಿಂದ ಸಂಸ್ಕೃತಿಕ ವೈವಿಧ್ಯಮಯ ಕಾರ್ಯಕ್ರಮವು ಜರುಗಿತು. ವಿಶೇಷವಾಗಿ ಉಜಿರೆಯ ಸಾನಿಧ್ಯದ ವಿಶೇಷ ಚೇತನ ಮಕ್ಕಳಿಂದ ಕಾರ್ಯಕ್ರಮ ಮೂಡಿ ಬಂದಿತು. ಕಾರ್ಯಕ್ರಮದಲ್ಲಿ ಬೆಳ್ತಂಗಡಿಯ ಶಾಸಕರಾದ ಹರೀಶ್ ಪೂಂಜಾ, ಹರೀಶ್ ರಾವ್, ಗಣೇಶ್ ಕಾರ್ಣಿಕ್, ನವನೀತ್ ಹಂಗಾಣಿಯೂ ಸೇರಿ ಆರ್ ಜೆ ತ್ರಿಶೂಲ್, ಸಹನಾ ಕುಂದರ್, ಸೂರಜ್ ಸನಿಲ್, ಶೇಖರ್ ಬೆಲಾಲು, ಸುಶಾಂತ್ ಅಮೀನ್, ರಕ್ಷಿತ್ ಧರ್ಮಸ್ಥಳ, ನಿಶ್ಮಿತಾ ಉಪಸ್ಥಿತರಿದ್ದರು. ಸೌಮ್ಯ ವಂದಿಸಿ, ವಿ ಜೆ ಪ್ರತೀಶ್ ಕಾರ್ಯಕ್ರಮ ನಿರ್ವಹಿಸಿದರು.

Related posts

Leave a Reply

Your email address will not be published. Required fields are marked *