Header Ads
Header Ads
Header Ads
Breaking News

ಮಣಿಪಾಲಕ್ಕೆ ಸ್ಟಾರ್ ನಿರ್ದೇಶಕ ರಾಜ್ ಮೌಳಿ ವಿದ್ಯಾನಗರಿಯಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ಮುಂದಿನ ಪ್ರಾಜೆಕ್ಟ್ ಬಗ್ಗೆ ತಿಳಿಸಿದ ಮೌಳಿ

ಆಂಕರ್-ಸ್ಟಾರ್ ಡೈರೆಕ್ಟರ್ ರಾಜಮೌಳಿ ವಿದ್ಯಾನಗರಿ ಮಣಿಪಾಲಕ್ಕೆ ಬಂದಿದ್ರು.ಇಲ್ಲಿನ ಎಂಐಟಿ ಕ್ಯಾಂಪಸ್ ನಲ್ಲಿ ಮಿಂಚಿನ ಸಂಚಾರ ಮಾಡಿದ ರಾಜಮೌಳಿಗೆ ಅದ್ದೂರಿ ಸ್ವಾಗತ ಕಂಡು ಬಂತು. ತನ್ನ ಸಿನಿಮಾ ಜರ್ನಿ ಮತ್ತು ತಾನು ಮಾಡುವ ಮೈತಾಲಾಜಿಕಲ್ ಸಿನಿಮಾಗಳ ಸೀಕ್ರೇಟ್ ಬಿಚ್ಚಿಟ್ರು.ವಿದ್ಯಾರ್ಥಿ ಅಭಿಮಾನಿಗಳ ಜೊತೆ ಮಾತನಾಡುತ್ತಾ ತನ್ನ ಮುಂದಿನ ಸಿನಿಮಾದ ಎಳೆ ಬಿಟ್ಟುಕೊಟ್ರಾ ರಾಜಮೌಳಿ

ಕಿವಿಗಡಕಚ್ಚುವ ಚಪ್ಪಾಳೆ,ಆಕಾಶವೇ ಹರಿದು ಹೋಗುವಂತಾ ಬೊಬ್ಬೆ. ಅಭಿಮಾನಿಗಳ ಅತಿರೇಖದ ಸ್ವಾಗತಕ್ಕೆ ಬಾಹುಬಲಿಯ ಸ್ಟಾರ್ ಡೈರೆಕ್ಟರ್ ರಾಜಮೌಳಿ ಫಿದಾ ಆಗಿದ್ರು. ಉಡುಪಿಯ ಅಂತಾರಾಷ್ಟ್ರೀಯ ವಿದ್ಯಾನಗರಿ ಮಣಿಪಾಲದಲ್ಲಿ ಎಂಐಟಿ ಸಂಸ್ಥೆ ಹಮ್ಮಿಕೊಂಡ ಸಂವಾದ ಕಾರ್ಯಕ್ರಮದಲ್ಲಿ ಭಾಗಿಯಾಗೋದಕ್ಕೆ ರಾಜಮೌಳಿಯನ್ನು ಕರೆಸಲಾಗಿತ್ತು.ವಿದ್ಯಾರ್ಥಿಗಳ ಜೊತೆ ಸಾಮಾನ್ಯನಂತೆ ಬೆರೆತ ರಾಜಮೌಳಿ ಕೆಲ ಇಂಟರೆಸ್ಟಿಂಗ್ ಪ್ರಶ್ನೆಗಳಿಗೆ ಈ ವೇಳೆ ಉತ್ತರ ನೀಡಿದ್ರು.

ರಾಜಮೌಳಿ ಪತ್ನೀ ಸಮೇತರಾಗಿ ಈ ಸಂವಾದದಲ್ಲಿ ಭಾಗವಹಿಸಿದ್ರು.ಸುಮಾರು ಒಂದುವರೆ ತಾಸು ವಿದ್ಯಾರ್ಥಿಗಳೊಂದಿಗೆ ಕಳೆದ ರಾಜಮೌಳಿ ತುಂಬಾ ಸರಳವಾಗಿ ಅವರೊಂದಿಗೆ ಬೆರೆತ್ರು. ಸನ್ಮಾನ ಮಾಡಿಸಿಕೊಳ್ಳುವಾಗ ಕನಿಷ್ಟ ಕುರ್ಚಿಯಲ್ಲಿ ಆಸೀನರಾಗಲು ಕೂಡಾ ಒಪ್ಪಲಿಲ್ಲ. ತಮ್ಮ ನೆಚ್ಚಿನ ಡೈರೆಕ್ಟರ್ ನ ಪ್ರತಿನಡೆಗೂ ವಿದ್ಯಾರ್ಥಿಗಳಿಂದ ಚಪ್ಪಾಳೆಯ ಸುರಿಮಳೆ ಆಯ್ತು.

Related posts

Leave a Reply