Header Ads
Breaking News

ಮಣಿಪಾಲದಿಂದ ಕೊಣಾಜೆಗೆ ಶೈಕ್ಷಣಿಕ ಕಾರಿಡಾರ್ ರಚನೆ:ಎಂ.ಬಿ. ಸದಾಶಿವ ಹೇಳಿಕೆ

ಉಳ್ಳಾಲ: ರಾಜ್ಯದ ಮುಖ್ಯಮಂತ್ರಿ ಜಿಲ್ಲೆಯ ಮಹತ್ವಾಕಾಂಕ್ಷೆ ಯೋಜನೆಯಾಗಿರುವ ಮಣಿಪಾಲದಿಂದ ಕೊಣಾಜೆಗೆ ಶೈಕ್ಷಣಿಕ ಕಾರಿಡಾರ್ ನಿರ್ಮಾಣಕ್ಕೆ ಬಜೆಟಿನಲ್ಲಿ ಅಸ್ತು ನೀಡಿರುವುದು ದೊಡ್ಡ ಸಾಧನೆ. ಈ ಮೂಲಕ ರಾಜ್ಯದ ಸಮ್ಮಿಶ್ರ ಸರಕಾರ ಅಭಿವೃದ್ಧಿಪರ ಕಾರ್ಯಸಾಧನೆಗಳಲ್ಲಿ ಮುಂಚೂಣಿಯಲ್ಲಿರುವುದರಿಂದ ಲೋಕಸಭೆ ಚುನಾವಣೆಯಲ್ಲಿ ಅಭ್ಯರ್ಥಿಗಳು ಜಯಭೇರಿ ಬಾರಿಸಲಿದ್ದಾರೆ ಎಂದು ಜಾತ್ಯಾತೀತ ಜನತಾದಳದ ರಾಜ್ಯ ಉಪಾಧ್ಯಕ್ಷ ಎಂ.ಬಿ ಸದಾಶಿವ ಹೇಳಿದರು.

ಅವರು ತೊಕ್ಕೊಟ್ಟುವಿನಲ್ಲಿ ಜಾತ್ಯಾತೀತ ಜನತಾದಳ ಮಂಗಳೂರು ವಿಧಾನಸಭಾ ಕ್ಷೇತ್ರ ಹಮ್ಮಿಕೊಂಡ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಮಣಿಪಾಲದಲ್ಲಿ ಉನ್ನತ ವ್ಯಾಸಾಂಗದ ಕಾಲೇಜುಗಳಿಂದ ಮಂಗಳೂರು ವಿಶ್ವವಿದ್ಯಾನಿಲಯದವರೆಗೆ ಸಂಪರ್ಕ ಕಲ್ಪಿಸುವ ಮೂಲಕ ಜಿಲ್ಲೆಯ ಶೈಕ್ಷಣಿಕ ಅಭಿವೃದ್ಧಿಗೆ ಬಹಳಷ್ಟು ಸಹಕಾರಿಯಾಗಲಿದೆ ಎಂದರು. ರಾಜ್ಯದಲ್ಲಿ ಸಮ್ಮಿಶ್ರ ಸರಕಾರ ಎಂಟು ತಿಂಗಳಲ್ಲಿ ನಡೆಸಿರುವ ಕಾರ್ಯಸಾಧನೆಗಳಿಂದ ರಾಜ್ಯದ ಪ್ರತಿ ಲೋಕಸಭಾ ಸ್ಥಾನಗಳಲ್ಲಿ ಸಮ್ಮಿಶ್ರ ಬೆಂಬಲಿತ ಅಭ್ಯರ್ಥಿಗಳು ಜಯಭೇರಿ ಸಾಧಿಸಲಿದ್ದಾರೆ. ಸಾಮರಸ್ಯ, ಸೌಹಾರ್ದ ಸೃಷ್ಟಿಸುವ ಅನುಭವವುಳ್ಳ ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಕೇಂದ್ರ ಸರಕಾರದ ನೀತಿಗಳಿಂದ ಅತೀ ಹೆಚ್ಚು ಸಾಲಗಾರರು ದೇಶದಲ್ಲಿದ್ದಾರೆ. ಸಿಬಿಐ ಒಡೆದ ಮನೆಯಾಗಿದೆ. ಸರ್ವೋಚ್ಛ ನ್ಯಾಯಾಲಯದ ಪ್ರತಿನಿಧಿಗಳು ಮಾಧ್ಯಮಗಳ ಮುಂದೆ ಬರುವಂತಾಗಿದೆ. ಈ ಮೂಲಕ ಪ್ರಜಾಪ್ರಭುತ್ವ ಅಪಾಯದಲ್ಲಿರುವುದು ಸ್ಪಷ್ಟವಾಗಿದೆ ಎಂದು ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಜೆಡಿಎಸ್ ಮಂಗಳೂರು ವಿಧಾನಸಭಾ ಕ್ಷೇತ್ರ ಅಧ್ಯಕ್ಷ ಮೋಹನ್ ದಾಸ್ ಶೆಟ್ಟಿ , ಮುಖಂಡರುಗಳಾದ ಅಬೂಬಕರ್ ನಾಟೆಕಲ್, ನಝೀರ್ ಉಳ್ಳಾಲ್ , ಹೈದರ್ ಪರ್ತಿಪ್ಪಾಡಿ, ಯು.ಹೆಚ್ ಫಾರುಕ್, ವಸಂತ್ ಪೂಜಾರಿ ಮುಂತಾದವರು ಉಪಸ್ಥಿತರಿದ್ದರು.

Related posts

Leave a Reply

Your email address will not be published. Required fields are marked *