Header Ads
Header Ads
Breaking News

ಮಣಿಪಾಲದ ಕಸ್ತೂರ್ ಬಾ ಆಸ್ಪತ್ರೆ ವತಿಯಿಂದ ವಿಶ್ವ ತೊನ್ನು ದಿನ

ಕಸ್ತೂರ್ ಬಾ ಆಸ್ಪತ್ರೆ ಮಣಿಪಾಲವು ವಿಶ್ವ ತೊನ್ನು ದಿನವನ್ನು ಆಚರಿಸುತ್ತಿದ್ದು ಜೂನ್ ೩೦ರ ತನಕ ಅನೇಕ ಜಾಗೃತಿಯ ಕಾರ್ಯಕ್ರಮಗಳು ನಡೆಯಲಿದೆ ಎಂದು ಸಹಾಯಕ ಪ್ರಾದ್ಯಾಪಕಿ ಡಾ.ಸ್ಮಿತಾ ಪ್ರಭು ತಿಳಿಸಿದ್ದಾರೆ.ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು ತೊನ್ನು ರೋಗಕ್ಕೆ ಅನೇಕ ಚಿಕಿತ್ಸಾ ಆಯ್ಕೆಗಳಿವೆ. ಆದರೆ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಮೊದಲಿಗೆ ತ್ವಚೆಯ ತಜ್ಞರ ಸಹಾಯ ಪಡೆಯುವುದು ಮುಖ್ಯವಾಗಿದೆ.

ತೊನ್ನು ರೋಗ ಸಾಂಕ್ರಾಮಿಕ ರೋಗವಲ್ಲ ಆದ್ದರಿಂದ ತೊನ್ನು ರೋಗದಿಂದ ಬಳಲುವ ಜನರನ್ನು ಸಮಾಜದಿಂದ ಬೇರ್ಪಡಿಸುವ ಅಗತ್ಯ ಇಲ. ವಿಶ್ವ ತೊನ್ನು ರೋಗದ ಸಪ್ತಾಹದ ಹಿನ್ನಲೆಯಲ್ಲಿ ಕಸ್ತೂರ್ಬಾ ಆಸ್ಪತ್ರೆ ವಿಶೇಷ ತಜ್ಞರ ಸಮಾಲೋಚನೆ ಮತ್ತು ವಿಶೇಷ ಚಿಕಿತ್ಸೆಯ ಪ್ಯಾಕೇಜ್ ನೀಡಿದೆ ಎಂದು ಹೇಳಿದರು.

Related posts

Leave a Reply