Header Ads
Header Ads
Breaking News

ಮಣಿಪಾಲದ ಸಂಕೀರ್ಣದಲ್ಲಿ ಮೃತದೇಹ ಪತ್ತೆ

 ಮಣಿಪಾಲದ ಖಾಸಗಿ ವಸತಿ ಸಂಕಿರ್ಣವೊಂದರಲ್ಲಿ ಅಪರಿಚಿತ ಯುವಕನ ಶವವು ಕೊಳೆತ ಸ್ಥಿತಿಯಲ್ಲಿ ಬುಧವಾರ ಪತ್ತೆಯಾಗಿದೆ. ಸಾವಿಗೆ ನಿಖರವಾದ ಕಾರಣ ತಿಳಿದು ಬಂದಿಲ್ಲ. ಮೃತ ಯುವಕ ಕಾಲೇಜು ವಿದ್ಯಾರ್ಥಿ ಎಂದು ಶಂಕಿಸಲಾಗಿದೆ. ಶವವನ್ನು ಮಣಿಪಾಲ ಕೆ.ಎಂ.ಸಿಯ ಆಸ್ಪತ್ರೆಯ ಶವಗಾರದಲ್ಲಿ ಇಡಲಾಗಿದೆ. ಶವ ಸಾಗಟಗೊಳಿಸುವಲ್ಲಿ ಪೊಲೀಸರಿಗೆ ಉಚಿತ ಆಂಬುಲೆನ್ಸ್ ಸೇವೆ ಒದಗಿಸಿ ಸಮಾಜಸೇವಕ ನಿತ್ಯಾನಂದ ಒಳಕಾಡು ಅವರು ಸಹಕರಿಸಿದ್ದಾರೆ.ಕಳೇಬರದ ಸನಿಹ ಗುರುತಿ ಚೀಟಿಯೊಂದು ಪತ್ತೆಯಾಗಿದ್ದು. ಅದರಲ್ಲಿ ಸಾರ್ಥಕ್ ದುಲಿಯಾ (28) ತಂದೆ ನವೀನ್ ದುಲಿಯಾ ಆನಂದ್ ವಿಹಾರ್, ಬೈಪಾಸ್ ರೋಡ್, ಧರ್ಮಪುರ, ದೆಹೆರಾಡಮ್ ಜಿಲ್ಲೆ ಎಂಬ ವಿವರಗಳಿವೆ. ವಾರಸುದಾರರು ಮಣಿಪಾಲ ಪೊಲೀಸ್ ಠಾಣೆ ಸಂಪರ್ಕಿಸಲು ತಿಳಿಸಿದ್ದಾರೆ.

 

Related posts

Leave a Reply