Header Ads
Header Ads
Breaking News

ಮಣಿಪಾಲ ಆರೋಗ್ಯ ಕಾರ್ಡ್‌ಗೆ ಯಶಸ್ವಿ 18 ವರ್ಷ

 

ಸಾಮಾನ್ಯ ಜನತೆಗೂ ಕಡಿಮೆ ವೆಚ್ಚದಲ್ಲಿ ಚಿಕಿತ್ಸಾ ಸೌಲಭ್ಯ ದೊರೆಯಬೇಕು ಎಂಬ ಉದ್ದೇಶದಿಂದ ಮಣಿಪಾಲ ಆರೋಗ್ಯ ಯೋಜನೆಯನ್ನು ಪರಿಚಯಿಸಲಾಗಿತ್ತು. ಇದೀಗ ಭಾರತದಲ್ಲೇ ಅತೀ ದೊಡ್ಡ ವಿಮಾರಹಿತ ಮತ್ತು ಸರ್ಕಾರೇತರ ಆರೋಗ್ಯ ಕಾಳಜಿಯ ಯೋಜನೆಯಾಗಿದೆ ಎಂದು ಕೆಎಂಸಿ ಆಸ್ಪತ್ರೆಯ ಮಂಗಳೂರಿನ ವೈದ್ಯಕೀಯ ಅಧೀಕ್ಷಕರಾದ ಡಾ. ಆನಂದ್ ವೇಣುಗೋಪಾಲ್ ತಿಳಿಸಿದರು.ಈ ಬಗ್ಗೆ ಮಂಗಳೂರಿನ ಪತ್ರಿಕಾಭವನದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ ಅವರು, 18 ವರ್ಷಗಳ ಮೊದಲು ಮಣಿಪಾಲ ಅಕಾಡಮಿ ಆಫ್ ಹೈಯರ್ ಎಜ್ಯಕೇಶನ್ ತನ್ನ ಸಾಮಾಜಿಕ ಉಪಕ್ರಮದ ಅಂಗವಾಗಿ ಮಣಿಪಾಲ ಆರೋಗ್ಯ ಕಾರ್ಡ್ ಯೋಜನೆಯನ್ನು ಪರಿಚಯಿಸಿತು. ಕೆಎಂಸಿ ಆಸ್ಪತ್ರೆಯ ಮಂಗಳೂರು, ಉಡುಪಿ, ಕಾರ್ಕಳ, ಮಣಿಪಾಲದಲ್ಲಿ ಆರೋಗ್ಯ ಕಾರ್ಡ್ ಯೋಜನೆಯನ್ನು ಜನತೆ ಪಡೆಯಬಹುದು ಎಂದರು.

ಆನಂತರ ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಮಾರ್ಕೆಟಿಂಗ್ ವಿಭಾಗದ ಡೆಪ್ಯೂಟಿ ಮ್ಯಾನೇಜರ್ ರಾಕೇಶ್ ಅವರು ಮಾತನಾಡಿ, ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನೆಯ ಹಿರಿಯ ನಾಗರಿಕರಿಗೆ ವರದಾನವಾವಿ ಪರಿಣಮಿಸಿದೆ. ಸಾಮಾನ್ಯವಾಗಿ ೬೦-೬೫ ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ಯಾವುದೇ ವಿಮಾ ಸಂಸ್ಥೆಯಯ ಆರೋಗ್ಯ ವಿಮೆಯನ್ನು ನೀಡಲು ಹಿಂಜರಿಯುತ್ತದೆ. ಆದರೆ, ಮಣಿಪಾಲ್ ಆರೋಗ್ಯ ಕಾರ್ಡ್ ಯೋಜನಾ ಸೌಲಭ್ಯವು ಇದಕ್ಕೆ ತತ್ವಿರುದ್ಧವಾಗಿದ್ದು, ಎಲ್ಲಾ ಹಿರಿಯ ನಾಗರಿಕರು ಯಾವುದೇ ವಯಸ್ಸಿನ ಮಿತಿಯಿಲ್ಲದೇ ಯೋಜನೆಯ ಸದಸ್ಯರಾಗಿ ಸೌಲಭ್ಯಗಳನ್ನು ಪಡೆಯಬಹುದು ಎಂದರು.ಈ ಸಂದರ್ಭ ಸುದ್ದಿಗೋಷ್ಠಿಯಲ್ಲಿ ಕೆಎಂಸಿ ಆಸ್ಪತ್ರೆಯ ಮಂಗಳೂರಿನ ಅಪರೇಶನ್ಸ್ ವಿಭಾಗದ ಅಸಿಸ್ಟೆಂಟ್ ಜನರಲ್ ಮ್ಯಾನೇಜರ್ ರವಿರಾಜ್ ಉಪಸ್ಥಿತರಿದ್ದರು.

Related posts

Leave a Reply