Header Ads
Header Ads
Header Ads
Breaking News

ಮಣಿಪಾಲ ಎಂ.ಐ.ಟಿ ವಿದ್ಯಾರ್ಥಿಗಳಿಂದ ಸೋಲಾರ್ ಕಾರು ಅವಿಷ್ಕಾರ 54 ವಿದ್ಯಾರ್ಥಿಗಳ ಪರಿಶ್ರಮ, 30 ಲಕ್ಷ ವೆಚ್ಚ ಇನ್ನಷ್ಟು ತಾಂತ್ರಿಕ ಅಭಿವೃದ್ದಿಯತ್ತ ವಿದ್ಯಾರ್ಥಿಗಳ ಚಿತ್ತ

ಅಭಿವೃದ್ಧಿ ಜೊತೆಗೆ ಪರಿಸರವೂ ನಶಿಸಿ ಹೋಗುತ್ತಿರುವ ಈ ದಿನಗಳಲ್ಲಿ ಪರಿಸರ ಉಳಿಸಿ ಆಂದೋಲನ ಎಲ್ಲೆಡೆ ನಡೆಯುತ್ತಿರುವುದನ್ನ ನಾವೆಲ್ರೂ ನೋಡಿರ್ತೀವಿ. ಆದ್ರೆ ಮಣಿಪಾಲದ ವಿಶ್ವವಿದ್ಯಾಲಯವೊಂದು ವಿದ್ಯಾರ್ಥಿಗಳ ಮೂಲಕ ಪರಿಸರ ಉಳಿಸುವತ್ತ ದೊಡ್ಡ ಹೆಜ್ಜೆಯನ್ನಿಟ್ಟಿದೆ. ಹಾಗದಾರೆ ವಿದ್ಯಾರ್ಥಿಗಳ ಯೋಜನೆ ಏನು?.. ಬನ್ನಿ ಈ ಬಗ್ಗೆ ಒಂದು ವರದಿ ಇಲ್ಲಿದೆ.

ಇವ್ರೆಲ್ಲ ಮಣಿಪಾಲ ಎಂಐಟಿ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳು. ಕಾಲೇಜಿನ ಆಡಳಿತ ಮಂಡಳಿ ಕೈಗೊಂಡ ಪರಿಸರ ಉಳಿಸೋ ಕಾರ್ಯಕ್ಕೆ ಸಾಥ್ ನೀಡಿದವರು. ಸತತ ನಾಲ್ಕು ವರ್ಷಗಳ ಪರಿಶ್ರಮದಿಂದ ಈ ಸೋಲಾರ್ ಕಾರೊಂದನ್ನು ಸಿದ್ದಪಡಿಸುವ ಮೂಲಕ ಈ ವಿದ್ಯಾರ್ಥಿಗಳು ವ್ಯಾಪಕ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಈ ಸೋಲಾರ್ ಕಾರಿಗೆ ಇಟ್ಟ ಹೆಸರು Sಒ-S1. ಕಾಲೇಜಿನ ತಾಂತ್ರಿಕ ವಿದ್ಯಾಲಯದ ವಿದ್ಯಾರ್ಥಿಗಳ ತಂಡವೊಂದು ತಮ್ಮ ತಂಡಕ್ಕೆ ಸೋಲಾರ್ ಮೊಬಿಲ್ ಎಂಬ ಹೆಸರನ್ನಿಟ್ಟು ನಾಲ್ವರು ಕುಳಿತುಕೊಳ್ಳಬಹುದಾದ ಈ ಕಾರೊಂದನ್ನು ಸಿದ್ದಪಡಿಸಿದ್ದಾರೆ.

ಈ ಕಾರಿನ ಮೇಲ್ಬಾಗದಲ್ಲಿ ಸಂಪೂರ್ಣ ಸೋಲಾರ್ ಪ್ಯಾನೆಲ್ ಗಳನ್ನು ಅಳವಡಿಸಿ ಸೋಲಾರ್ ಹಾಗೂ ವಿದ್ಯುತ್ ಮೂಲಕ ಚಾರ್ಜ್ ಮಾಡುವ ತಂತ್ರಜ್ಞಾನ ಅಳವಡಿಸಿ ಈ ಕಾರು ಓಡುವಷ್ಟರ ಮಟ್ಟಿಗೆ ತಯಾರಾಗಿ ನಿಂತಿದೆ. ತಾಂತ್ರಿಕವಾಗಿ ಇನ್ನಷ್ಟು ಅಭಿವೃದ್ದಿಪಡಿಸುವತ್ತ ಈ ವಿದ್ಯಾರ್ಥಿಗಳು ಚಿತ್ತ ಹರಿಸಿದ್ದಾರೆ.

ಸುಮಾರು 30 ಲಕ್ಷ ವೆಚ್ಚದಲ್ಲಿ ಈಗಾಗಲೇ ಸಿದ್ದವಾಗಿರೋ ಸೋಲಾರ್ ಚಾಲಿತ ಎಸ್ ಎಮ್ ಎಸ್ ಒನ್ ಕಾರು ಸಿದ್ದಪಡಿಸುವಲ್ಲಿ ಸುಮಾರು 54 ವಿದ್ಯಾರ್ಥಿಗಳು ಪರಿಶ್ರಮಿಸಿದ್ದಾರೆ. ಈ ಕಾರನ್ನು ನಾಲ್ಕು ಗಂಟೆಗಳ ಕಾಲ ಬಿಸಿಲಲ್ಲಿ ನಿಲ್ಲಿಸಿದರೆ ಸುಮಾರು 180 ರಿಂದ 190 ಕಿಲೋ ಮೀಟರ್ ಓಡಬಲ್ಲ ಸಾಮರ್ಥ್ಯ ಈ ಕಾರಿಗಿದೆ. ಈ ಕಾರಿನ ಡಿಸೈನ್ ಸ್ಪೋರ್ಟಿ ಲುಕ್ ಹೊಂದಿದ್ದು ಎಲ್ಲರ ಗಮನಸೆಳೆಯುವಲ್ಲಿ ಯಶಸ್ವಿಯಾಗಿದ್ದು ಸಾರ್ವಜನಿಕರು, ಇತರ ಕಾಲೇಜಿನ ವಿದ್ಯಾರ್ಥಿಗಳಿಗೆ ಈ ಕಾರನ್ನು ನೋಡಲು ಎಂಐಟಿ ಅವಕಾಶ ಕಲ್ಪಿಸಿದೆ.

ಮಣಿಪಾಲದ ಎಂಐಟಿ ಕಾಲೇಜಿನಿಂದ ಅನೇಕ ಆವಿಷ್ಕಾರಗಳು ಈ ಹಿಂದೆ ನಡೆದಿದೆ. ಇದೀಗ ಸೋಲಾರ್ ಕಾರು ಅವಿಷ್ಕಾರ ಪರಿಸರ ಮಾತ್ರವಲ್ಲದೇ ಭವಿಷ್ಯದ ನಿಟ್ಟಿನಲ್ಲಿ ವಿದ್ಯಾರ್ಥಿಗಳ ಮಹತ್ವದ ಹೆಜ್ಜೆ ಎಂದರೆ ತಪ್ಪಾಗಲಾರದು.

Related posts

Leave a Reply