Header Ads
Header Ads
Breaking News

ಮಣ್ಣಿನಲ್ಲಿ ಹೂತು ಹೋದ ಸರ್ಕಾರಿ ಬಸ್‌ನ ಚಕ್ರ:ವಿದ್ಯಾರ್ಥಿಗಳು ಮತ್ತು ಸಾರ್ವಜನಿಕರ ಪರದಾಟ

ವಿಟ್ಲ: ಸರ್ಕಾರಿ ಬಸ್ಸಿನ ಚಕ್ರಗಳು ರಸ್ತೆ ಬದಿಯ ಮಣ್ಣಿನಲ್ಲಿ ಹೂತು ಹೋದ ಪರಿಣಾಮ ಸಂಚರಿಸಲಾಗದೇ ರಸ್ತೆಯಲ್ಲಿ ಬಾಕಿಯಾಗಿ ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಪರದಾಡಿದ ಘಟನೆ ವಿಟ್ಲದ ಪೆರುವಾಯಿ ಗ್ರಾಮದ ಓಣಿಬಾಗಿಲು ಎಂಬಲ್ಲಿ ನಡೆದಿದೆ.

ಪೆರುವಾಯಿ ಭಾಗದಲ್ಲಿ ಖಾಸಗಿ ಕಂಪೆನಿಗೆ ಸೇರಿದ ಕ್ಯಾಬಲ್ ಕಾಮಗಾರಿ ನಡೆಯಿತ್ತು. ಈ ಸಂದರ್ಭ ರಸ್ತೆ ಬದಿಗಳಲ್ಲಿ ಹೊಂಡ ತೆಗೆದುಮಣ್ಣನ್ನುರಸ್ತೆ ಬದಿಗೆ ಹಾಕಲಾಗಿತ್ತು.

ಶುಕ್ರವಾರ ರಾತ್ರಿಯಿಂದ ಸುರಿದ ಮಳೆಯಿಂದ ಬೆಳಿಗ್ಗೆ ಪಕಳಕುಂಜ ಕಡೆಯಿಂದ ಮಂಗಳೂರು ಕಡೆಗೆ ತೆರಳುವ ಸರ್ಕಾರಿ ಬಸ್ಸಿನ ಚಕ್ರಗಳು ಹೂತು ಹೋಗಿದೆ. ಮುಂದೆ ಚಲಿಸಲಾಗದೇ ರಸ್ತೆಯಲ್ಲಿಯೇ ಬಾಕಿಯಾಗಿದೆ. ಇದರಿಂದ ಮಾಣಿಲ, ವಿಟ್ಲ, ಮಂಗಳೂರು ಕಡೆಗಳಿಗೆ ತೆರಳುವ ವಿದ್ಯಾರ್ಥಿಗಳು ಹಾಗೂ ಉದ್ಯೋಗಿಗಳು ಪರದಾಟ ನಡೆಸಿದ್ರು. ಬೆಳಿಗ್ಗೆ ಏಳು ಗಂಟೆಯಿಂದ ಹತ್ತು ಗಂಟೆಗೆ ವರೆಗೆ ಬಸ್ ಸಂಚರಿಸಲಾಗದೆ ನಿಂತಿದೆ. ಪ್ರತ್ಯೇಕ ವಾಹನ ವ್ಯವಸ್ಥೆ ಇಲ್ಲದ ಕಾರಣ ತೊಂದರೆ ಆಗಿದೆ. ಈ ಬಸ್ಸಿನಲ್ಲಿ ಮಂಗಳೂರು ಕಡೆಗೆ ಹೆಚ್ಚಿನ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು.

Related posts

Leave a Reply