

ವಿಶ್ವ ವಿದ್ಯಾನಿಲಯ ಕಾಲೇಜಿನ ಪರಿಸರ ಸಂಘದ ವತಿಯಿಂದ ವಿಶ್ವ ಮಣ್ಣಿನ ದಿನಾಚರಣೆಯನ್ನು ಆಚರಿಸಲಾಯಿತು. ಮಣ್ಣು ಸಕಲ ಜೀವ ಸಂಕುಲದ ಆಧಾರ ಎಂದು ತಿಳಿಸುತ್ತ ಮಣ್ಣಿನ ದಿನದ ಇತಿಹಾಸ ಮತ್ತು ಮಹತ್ವವನ್ನು ತೃತೀಯ ಬಿ. ಎಸ್ಸಿ ವಿದ್ಯಾರ್ಥಿನಿ ತಸ್ಲೀಮ ವಿವರಿಸಿದರು. ಮಣ್ಣಿನ ಜೀವ ವೈವಿಧ್ಯತೆ ಮತ್ತು ಮಣ್ಣು ಪರಿಶೀಲನೆ ಕುರಿತು ದ್ವಿತೀಯ ಬಿ. ಎಸ್ಸಿ ವಿದ್ಯಾರ್ಥಿನಿ ಗೌಸಿಯಾ ಸಂಕ್ಷಿಪ್ತ ವಿವರ ನೀಡಿದರು.ಪರಿಸರ ಸಂಘದ ಸಹ ನಿರ್ದೇಶಕರಾದಂತಹ ಡಾ. ಸಿದ್ಧರಾಜು ಎಂ . ಎನ್ ಅವರು ಮಣ್ಣಿನ ಮಹತ್ವದ ಬಗ್ಗೆ ತಿಳಿಸುತ್ತ, ನಮ್ಮ ಮನೆಯಂಗಳದ ಅಥವಾ ತೋಟದ ಮಣ್ಣಿನ ರಚನೆ ಹಾಗು ವೈವಿಧ್ಯತೆಯನ್ನು ತಿಳಿಯಲು ಮನೆಯಲ್ಲೇ ಕುಳಿತು ಮಾಡಬಹುದಾದ ಕೆಲವು ಸರಳ ಪ್ರಯೋಗಗಳ ಕುರಿತು ತಿಳಿಸಿದರು. ಮರು ದಿನ ಹಲವು ಆಸಕ್ತ ವಿದ್ಯಾರ್ಥಿಗಳು ತಮ್ಮ ತಮ್ಮ ಮನೆಯ ಸುತ್ತಮುತ್ತಲಿನ ಮಣ್ಣು ಸಂಗ್ರಹಿಸಿ ಅದರಲ್ಲಿ ಮಣ್ಣಿನ ವಿಧ, ನೀರು ಹೀರುವ ಸಾಮರ್ಥ್ಯ, ಮಣ್ಣಿನ ಸವೆತ ಮುಂತಾದ ಪ್ರಯೋಗಗಳನ್ನು ಕೈಗೊಂಡು ಅರ್ಥಪೂರ್ಣವಾಗಿ ವಿಶ್ವ ಮಣ್ಣಿನ ದಿನವನ್ನು ಆಚರಿಸಿದರು.
ಪೂಜಾ ಅವರ ಪ್ರಾರ್ಥನೆಯೊಂದಿಗೆ ಶುರುವಾದ ಕಾರ್ಯಕ್ರಮವು ಸಲೋನಿಯ ನಿರೂಪಣೆಯಿಂದ ಸಾಗಿ ತೇಜಸ್ವಿನಿಯ ಧನ್ಯವಾದದೊಂದಿಗೆ ಮುಗಿಯಿತು.