Header Ads
Breaking News

ಮತದಾನ ಜಾಗೃತಿಗಾಗಿ ಮಂಗಳೂರಲ್ಲಿ ಮ್ಯಾರಥಾನ್

ಮಂಗಳೂರು: ಮತದಾನ ಬಗ್ಗೆ ಜಾಗೃತಿ ಮೂಡಿಸಲು ಮಂಗಳೂರು ಮಹಾನಗರ ಮಂಗಳಾ ಸ್ಟೇಡಿಯಂನಲ್ಲಿ ಅಧಿಕಾರಿಗಳು, ಕ್ರೀಡಾಳುಗಳು, ನಾಗರಿಕರು ಮ್ಯಾರಥಾನ್ ನಡೆಸಿದ್ದಾರೆ. ಇದೇ ವೇಳೆ ಹಿರಿಯ ನಾಗರಿಕರು ಮ್ಯಾರಥಾನ್ ಪಾಲ್ಗೊಂಡು ಗಮನಸೆಳೆದರು.

 ದಕ್ಷಿಣ ಕನ್ನಡ ಜಿಲ್ಲಾಡಳಿತ , ಜಿಲ್ಲಾ ಸ್ವೀಪ್ ಸಮಿತಿ, ಮಂಗಳೂರು ಮಹಾನಗರಪಾಲಿಕೆ , ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ವಿವಿಧ ಸಂಘ ಸಂಸ್ಥೆ ಸಹಭಾಗಿತ್ವದಲ್ಲಿ ಮತದಾರರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ 18ಕಿಲೋಮೀಟರ್ ಮ್ಯಾರಥಾನ್ ಆಯೋಜಿಸಲಾಗಿತ್ತು. ಇನ್ನು ಮೂರು ವಿಭಾಗದ ಮೂಲಕ ಮ್ಯಾರಥಾನ್ ಹಮ್ಮಿಕೊಳ್ಳಲಾಗಿತ್ತು. ಮೊದಲ ವಿಭಾಗದಲ್ಲಿ 16 ವರ್ಷ ಮೇಲ್ಪಟ್ಟವರಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡೆ ರಸ್ತೆ, ನ್ಯೂಚಿತ್ರಾ, ಶರವೂ ದೇವಸ್ಥಾನದ ರಸ್ತೆ , ನವಭಾರತ್ ರಸ್ತೆ ವೃತ್ತ , ಪಿವಿಎಸ್ ವೃತ್ತ, ಸಿಟಿ ಹಾಸ್ಪಿಟಲ್ ಮುಂಭಾಗದಿಂದ ಕದ್ರಿ ದೇವಸ್ಥಾನ ರಸ್ತೆ, ಕೆಎಸ್‌ಆರ್‌ಟಿಸಿ , ಲಾಲ್‌ಬಾಗ್ ವೃತ್ತದಿಂದ ಯೂಟರ್ನ್ ಪಡೆದು ಕಾಪಿಕಾಡ್ , ಉರ್ವಸ್ಟೋರ್ ಮೂಲಕ ಮಂಗಳಾ ಕ್ರೀಡಾಂಗಣಕ್ಕೆ ತಲುಪಿತ್ತು.
ಇನ್ನು 2ನೇ ವಿಭಾಗದ 16 ವರ್ಷಕ್ಕಿಂತ ಕೆಳಗಿನವರಿಗೆ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡ ರಸ್ತೆ, ನ್ಯೂಚಿತ್ರಾ , ಶರವು ಗಣಪತಿ ,ನವಭಾರತ್ ವೃತ್ತ, ಬಳ್ಳಾಲ್‌ಬಾಗ್ ಮೂಲಕ ಮಂಗಳಾ ಕ್ರೀಡಾಂಗಣದಲ್ಲಿ ಸಮಾರೋಪಕಂಡಿತು. ಇನ್ನು ಮೂರನವೇ ವಿಭಾಗದ ಹಿರಿಯ ನಾಗರಿಕರಿಗೆ ಮತ್ತು ಸಾರ್ವಜನಿಕರಿಗೆ ಮತದಾನದ ಕಡೆ ನಮ್ಮ ನಡಿಗೆ ಎಂಬ ಜಾಗೃತಿ ಮೂಲಕ ಮಂಗಳಾ ಕ್ರೀಡಾಂಗಣದಿಂದ ಮಣ್ಣಗುಡ್ಡ , ಬಳ್ಳಾಲ್‌ಬಾಗ್ , ಲಾಲ್‌ಬಾಗ್ , ಲೇಡಿಹಿಲ್ ಸಾಗಿ ಮಂಗಳಾ ಕ್ರೀಡಾಂಗಣ ತಲುಪಿತು.
ಇದೇ ವೇಳೆ ಮಾತನಾಡಿದ ಜಿಲ್ಲಾ ಚುನಾವಣಾಧಿಕಾರಿ ಸಸಿಕಾಂತ್ ಸೆಂಥಿಲ್,ಮತದಾನ ನಮ್ಮ ಹಕ್ಕು, ಕರ್ತವ್ಯ. ಪ್ರಜಾಪ್ರಭುತ್ವದ ಯಶಸ್ಸಿಗೆ ಮತದಾನ ಮಾಡಿ; ಯುವ ಮತದಾರರು ತಾವು ಮತದಾನ ಮಾಡುವುದರೊಂದಿಗೆ ಎಲ್ಲರನ್ನೂ ಪ್ರೋತ್ಸಾಹಿಸಿ ಎಂದು ಹೇಳಿದರು. ಸಿಇಒ ಹಾಗೂ ಸ್ವೀಪ್ ಸಮಿತಿ ನೋಡಲ್ ಅಧಿಕಾರಿ ಡಾ ಸೆಲ್ವಮಣಿ ಆರ್. ಮಾತನಾಡಿ,ಎಲ್ಲರೂ ಕೂಡ ಮತದಾನದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು. ಈ ವೇಳೆ ಐಜಿಪಿ ಅರುಣ್ ಚಕ್ರವರ್ತಿ, ಪೊಲೀಸ್ ಕಮಿಷನರ್ ಸಂದೀಪ್ ಪಾಟೀಲ್, ಎಸ್ ಪಿ ಲಕ್ಷ್ಮೀ ಪ್ರಸಾದ್, ಸಹಾಯಕ ಚುನಾವಣಾಧಿಕಾರಿ ಗಾಯತ್ರಿ ನಾಯಕ್, ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕರಾದ ಪ್ರದೀಪ್ ಡಿ ಸೋಜ, ಜಿಲ್ಲಾ ಯುವ ಸಮನ್ವಯ ಅಧಿಕಾರಿ ರಘುವೀರ್, ಜಿಲ್ಲಾ ಸ್ವೀಪ್ ಸಮಿತಿ ಕಾರ್ಯದರ್ಶಿ ಸುಧಾಕರ, ಕನ್ನಡ ಸಾಹಿತ್ಯಪರಿಷತ್ ಅಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ ಅವರನ್ನೊಳಗೊಂಡಂತೆ ಹಲವು ಗಣ್ಯರು ಮ್ಯಾರಥಾನ್‌ನಲ್ಲಿ ಪಾಲ್ಗೊಂಡರು.

Related posts

Leave a Reply

Your email address will not be published. Required fields are marked *