
ಗ್ರಾಮ ಪಂಚಾಯತ್ನ ಎರಡನೇ ಹಂತದ ಚುನಾವಣೆ ಬಿರುಸಿನಿಂದ ಆರಂಭಗೊಂಡಿದ್ದು, ಮತದಾರರನ್ನು ಕರೆ ತರುವ ವಿಚಾರಕ್ಕೆ ಸಂಬಂಧಿಸಿದಂತೆ ಎರಡು ಗುಂಪುಗಳ ಮಧ್ಯೆ ಮಾತಿನ ಚಕಮಕಿ ನಡೆದ ಘಟನೆ ಕುಂದಾಪುರ ತಾಲೂಕಿನ ಅಂಪಾರಿನಲ್ಲಿ ನಡೆದಿದೆ. ಅಭ್ಯರ್ಥಿಗಳ ಪರ ಬೆಂಬಲಿಗರು ತಮ್ಮ ಖಾಸಗಿ ವಾಹನದಲ್ಲಿ ಮತದಾರರನ್ನು ಕರೆ ತರುತ್ತಿರುವುದನ್ನು ನೋಡಿದ ಪ್ರತಿ ಸ್ಪರ್ಧಿ ಅಭ್ಯರ್ಥಿಗಳು ಹಾಗೂ ಬೆಂಬಲಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ವೇಳೆಯಲ್ಲಿ ಎರಡು ಗುಂಪುಗಳ ಮಧ್ಯೆ ಬಿರುಸಿನ ವಾಗ್ವಾದ ನಡೆಯಿತು.ಪೊಲೀಸ್ರ ಸಮ್ಮುಖದಲ್ಲೇ ಈ ಘಟನೆ ನಡೆದಿದ್ದು, ತಕ್ಷಣವೇ ಮಧ್ಯಪ್ರವೇಶಿಸಿದ ಪೊಲೀಸ್ರು ಘಟನೆಯನ್ನು ತಿಳಿಗೊಳಿಸಿದರು.