Header Ads
Header Ads
Breaking News

ಮತದಾರರಿಗೆ ವಿಶೇಷ ಪೆನ್, ಜುಲಾಯಿ 17ರಂದು ರಾಷ್ಟ್ರಪತಿ ಚುನಾವಣೆ

 

ರಾಷ್ಟ್ರಪತಿ ಚುನಾವಣೆ ಜುಲೈ ೧೭ರಂದು ನಡೆಯಲಿದೆ ಎಂದು ಚುನಾವಣಾ ಆಯೋಗ ಪ್ರಕಟಿಸಿದೆ. ರಾಷ್ಟ್ರಪತಿ ಪ್ರಣವ್ ಮುಖರ್ಜಿ ಅವರ ಅಧಿಕಾರಾವಧಿ ಜುಲೈ ೨೪ರಂದು ಕೊನೆಗೊಳ್ಳಲಿದೆ.
ರಾಷ್ಟ್ರಪತಿ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇದೇ ೨೮ ಕೊನೆಯ ದಿನ. ಜುಲೈ ೨೦ರಂದು ಮತ ಎಣಿಕೆ ನಡೆಯಲಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ನಸೀಂ ಜೈದಿ ತಿಳಿಸಿದರು. ಈ?ಬಗ್ಗೆ ೧೪ರಂದು ಅಧಿಸೂಚನೆ ಹೊರಡಿಸಲಾಗುವುದು ಎಂದರು.
ರಾಷ್ಟ್ರಪತಿ ಚುನಾವಣೆಯಲ್ಲಿ ಈ ಬಾರಿ ಮತದಾರರಿಗೆ ವಿಶೇಷ ಪೆನ್ ನೀಡಲು ಆಯೋಗ ನಿರ್ಧರಿಸಿದೆ. ಕಳೆದ ವರ್ಷ ರಾಜ್ಯಸಭಾ ಚುನಾವಣೆ ಸಂದರ್ಭದಲ್ಲಿ ಉಂಟಾದ ವಿವಾದದಿಂದಾಗಿ ಈ ಕ್ರಮಕೈಗೊಂಡಿದೆ. ಆಯೋಗವೇ ನೀಡುವ ವಿಶೇಷ ಪೆನ್ ಬಳಸಿ ಮತ ಚಲಾಯಿಸಬೇಕು. ಮತಗಟ್ಟೆಯಲ್ಲಿ ಅಧಿಕಾರಿಗಳು ಈ ಪೆನ್ ನೀಡುತ್ತಾರೆ. ಇತರ ಯಾವುದೇ ರೀತಿಯ ಪೆನ್ ಬಳಸಿ ಮತ ಚಲಾಯಿಸಿದರೆ ಅದು ತಿರಸ್ಕೃತವಾಗಲಿದೆ ಎಂದು ಜೈದಿ ತಿಳಿಸಿದ್ದಾರೆ.

Related posts

Leave a Reply