Header Ads
Breaking News

ಮತಾಂತರವು ಹಿಂದೂ ಸಮಾಜಕ್ಕೆ ತಟ್ಟಿದ ದೊಡ್ಡ ಕ್ಯಾನ್ಸರ್ : ಸೂರ್ಯ ನಾರಾಯಣ ಹೇಳಿಕೆ

 ಮತಾಂತರವು ಹಿಂದೂ ಸಮಾಜಕ್ಕೆ ತಟ್ಟಿದ ದೊಡ್ಡ ಕ್ಯಾನ್ಸರ್ ಆಗಿದ್ದು ದೇಶಾದ್ಯಂತ ಈ ಕ್ಯಾನ್ಸರ್ ಹಬ್ಬಿದ್ದು ಪ್ರಾರಂಭಿಕ ಹಂತದಲ್ಲಿ ಎಚ್ಚೆತ್ತುಕೊಳ್ಳದಿದ್ದಲ್ಲಿ ಅಪಾಯವಿದೆ. ಇದನ್ನು ತಡೆಗಟ್ಟದಿದ್ದಲ್ಲಿ ಅಪಾಯವಿದೆಯೆಂದು ಬಜರಂಗದಳದ ರಾಷ್ತ್ರೀಯ ಸಹ ಸಂಯೋಜಕ ಸೂರ್ಯ ನಾರಾಯಣ ಹೇಳಿದರು. ಉಡುಪಿ ಜಿಲ್ಲೆಯ ವಿಶ್ವ ಹಿಂದೂ ಪರಿಷದ್ ಮತ್ತು ಬಜರಂಗ ದಳದ ನೇತೃತ್ವದಲ್ಲಿದ.ಕ.ಮತ್ತು ಉಡುಪಿ ಜಿಲ್ಲೆಯಲ್ಲಿ ಡಿವ್ಯೆನ್ ಕಾಲ್ ಸೆಂಟರ್ ಪ್ರಾರ್ಥನಾ ಮಂದಿರದ ಮೂಲಕ ನಡೆಯುತ್ತಿರುವ ಹಿಂದೂಗಳ ಬಲವಂತದ ಮತಾಂತರದ ವಿರುದ್ದ ಮೂಲ್ಕಿಯ ಪುನರೂರು ಕಾಂಪ್ಲೆಕ್ಸ್ ಬಳಿಯ ಶಿವಾಜಿ ಮಂಟಪದಲ್ಲಿ ನಡೆದ ಬ್ರಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು. ವೇದಿಕೆಯಲ್ಲಿ ವಿಶ್ವ ಹಿಂದೂ ಪರಿಷತ್ ನ ಮಂಗಳೂರು ವಿಭಾಗದ ಕಾರ್ಯದರ್ಶೀ ಶರಣ್ ಪಂಪುವೆಲ್, ಬಜರಂಗದಳದ ಕಾರ್ಕಳ ಪ್ರಾಂತ ಸಂಚಾಲಕ ಸುನೀಲ್ ಕೆ ಆರ್, ಮಂಗಳೂರು ಜಿಲ್ಲಾ ಸಂಚಾಲಕ ಪ್ರವೀಣ್ ಕುತ್ತಾರ್, ಮಂಗಳೂರು ವಿಭಾಗ ಸಂಚಾಲಕ ಭುಜಂಗ ಕುಲಾಲ್,ಉಡುಪಿ ಜಿಲ್ಲಾ ಸಂಚಾಲಕ ದಿನೇಶ್ ಮೆಂಡನ್ ಮತ್ತಿತರಿದ್ದರು.

Related posts

Leave a Reply

Your email address will not be published. Required fields are marked *